ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ; ಮಾಜಿ ಡಕಾಯಿತನ ಪತ್ನಿ ಸರಪಂಚ್ ಆಗಿ ಆಯ್ಕೆ

|
Google Oneindia Kannada News

ಭೋಪಾಲ್ ಜೂ.12: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಚಂಬಲ್ ಕಣಿವೆಯ ಮಾಜಿ ಡಕಾಯಿತನ ಪತ್ನಿ ಲಲಿತಾ ರಜಪೂತ್ ಎಂಬುವವರು ಸ್ವಗ್ರಾಮ ಸುನಗಾಯಾಯಿ ಸರಪಂಚ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವಿಷಯ ರಾಜ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದೆ.

ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಎಂಬುವವರ ಪತ್ನಿ ಗ್ರಾಮದ ಸರಪಂಚ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಜೂನ್ 25ರಿಂದ ಪಂಚಾಯತಿ ಚುನಾವಣೆಗಳು ನಡೆಯಲಿವೆ.

ಮೂರು ಹಂತಗಳಲ್ಲಿ ನಡೆಯಲಿರುವ ಚುನಾವಣೆಗೆ ಇನ್ನು ಸಮಯವಿದ್ದರು ಸಹ ಲಲಿತಾ ರಜಪೂತ್ ಆಯ್ಕೆಯಾಗಿದ್ದಾರೆ. ಆಕೆಯ ಪತಿ ಮಲ್ಖಾನ್ ಸಿಂಗ್ ಉದ್ದನೆಯ ಮೀಸೆಯುಳ್ಳವನಾಗಿದ್ದು, ಭಾರತದ ದೊಡ್ಡ ಡಕಾಯಿತ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದ.

Ex Chambal Dacoit Wife Elected Sarpanch Unopposed in Madya Pradesh

ಮಲ್ಖಾನ್ ಸಿಂಗ್ ಇಲ್ಲಿನ ಭಿಂಡ್ ಮೂಲದವನಾಗಿದ್ದಾನೆ. 1982ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅರ್ಜುನ್ ಸಿಂಗ್ ಅವರ ಮುಂದೆ ಶರಣಾಗಿದ್ದರು. ಇದಕ್ಕೂ ಮುನ್ನ ಮಲ್ಖಾನ್ ಸಿಂಗ್ ಮತ್ತವರ ಸಹಚರರ ಮೇಲೆ 27 ಅಪಹರಣ ಪ್ರಕರಣ, 17 ಕೊಲೆ ಮತ್ತು ಡಕಾಯಿತಿ ಸೇರಿದಂತೆ ಒಟ್ಟು 94 ಪ್ರಕರಣಗಳು ದಾಖಲಾಗಿದ್ದವು.

ಮೂಲಸೌಕರ್ಯ ಸಮಸ್ಯೆ; ಅಪರಾಧ ಚಟುವಟಿಕೆ ಬಿಟ್ಟು ಮಲ್ಖಾನ್ ಸಿಂಗ್ ಉತ್ತಮ ಜೀವನ ನಡೆಸುತ್ತಿದ್ದು, ಈ ಲಲಿತಾ ರಜಪೂತ್ ಆತನ ಎರಡನೇ ಪತ್ನಿ ಆಗಿದ್ದಾಳೆ. ಸರಪಂಚ್ ಆಗಿ ಆಯ್ಕೆಯಾಗಿದ್ದಕ್ಕೆ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಗ್ರಾಮದಲ್ಲಿ ಒಳಚರಂಡಿ, ವಿದ್ಯುತ್, ರಸ್ತೆ ಸೇರಿದಂತೆ ಮೂಲಸೌಲಕರ್ಯಗಳ ಕೊರತೆ ಇದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹಸರಿಸುವುದಾಗಿ ಲಲಿತಾ ಅವರು ಜನರಿಗೆ ಭರವಸೆ ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ಪಂಚಾಯಿತಿಯ ಸುಮಾರು 4 ಲಕ್ಷ ಸ್ಥಾನಗಳಿಗೆ ಜೂ. 25ರಿಂದ ಮೂರು ಹಂತದಲ್ಲಿ ಚುನಾವಣೆ ನಡೆಯಲಿವೆ.

English summary
Madyapradesh ex chambal dacoit Malkhan Singh wife elected as sarpanch unopposed in Guna district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X