ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಗ್ವಿಜಯ್, ಸಾಧ್ವಿ ಚುನಾವಣಾ ವೆಚ್ಚ ಪ್ರಶ್ನಿಸಿ ಆಯೋಗ ನೋಟಿಸ್

|
Google Oneindia Kannada News

ಭೋಪಾಲ್, ಮೇ 4: ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಗಳಾಗಿರುವ ದಿಗ್ವಿಜಯ್ ಸಿಂಗ್ ಹಾಗೂ ಪ್ರಜ್ಞಾ ಸಿಂಗ್ ಠಾಕೂರ್ ಅವರ ಚುನಾವಣಾ ವೆಚ್ಚ ಕುರಿತು ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಆಯೋಗಕ್ಕೆ ನೀಡಿದ್ದ ಮಾಹಿತಿಗಿಂತಲೂ ಹೆಚ್ಚಿನ ಪ್ರಮಾಣದ ಹಣವನ್ನು ಇಲ್ಲಿಯವರೆಗೆ ಚುನಾವಣೆಗೆ ಇಬ್ಬರೂ ಖರ್ಚು ಮಾಡಿದ್ದಾರೆ ಎನ್ನುವುದು ಆಯೋಗದ ಆರೋಪವಾಗಿದೆ.

ಚುನಾವಣಾ ಪ್ರಚಾರದಿಂದ ಬ್ಯಾನ್ ಆದ ಪ್ರಜ್ಞಾ, 72 ಗಂಟೆ ಏನು ಮಾಡ್ತಾರೆ?ಚುನಾವಣಾ ಪ್ರಚಾರದಿಂದ ಬ್ಯಾನ್ ಆದ ಪ್ರಜ್ಞಾ, 72 ಗಂಟೆ ಏನು ಮಾಡ್ತಾರೆ?

ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ 21,30,136 ರೂ ಚುನಾವಣಾ ವೆಚ್ಚ ಮಾಡಿರುವ ಕುರಿತು ಮಾಹಿತಿ ನೀಡಿದ್ದರೆ, ಚುನಾವಣಾ ವೀಕ್ಷಕರ ಮಾಹಿತಿ ಪ್ರಕಾರ 39,47,674 ರೂಗಳನ್ನು ಖರ್ಚು ಮಾಡಲಾಗಿದೆ ಎನ್ನುವ ವಿವರ ತಿಳಿದುಬಂದಿದೆ.

EC notice to Digvijaya Singh, Sadhvi Pragya Thakur over poll expenditure

ಇತ್ತ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ 6,27,663 ಲಕ್ಷ ರೂಗಳನ್ನು ಖರ್ಚು ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ ಆದರೆ 13,51,756 ರೂಗಳನ್ನು ಖರ್ಚು ಮಾಡಿರುವುದು ಚುನಾವಣಾ ಆಯೋಗದ ಗಮನಕ್ಕೆ ಬಂದಿದ್ದು, ನೋಟಿಸ್ ನೀಡಿ ವಿವರಣೆ ನೀಡುವಂತೆ ಸೂಚಿಸಲಾಗಿದೆ.

English summary
The Election Commission of India (ECI) has served notices to Congress' Digvijaya Singh and his rival from the BJP, Sadhvi Pragya Singh Thakur, over alleged discrepancies in election expenditure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X