"ಚುನಾವಣೆ ಖರ್ಚಿಗೆ ಬಿಜೆಪಿ ನಾಯಕರು ಪತ್ನಿಯರ ಒಡವೆ ಮಾರ್ತಾರಾ?"
ಭೋಪಾಲ್, ಏಪ್ರಿಲ್ 29: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಸಮಯದ ವೆಚ್ಚಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ ಪ್ರಯಾಣಕ್ಕೆ ಬಿಜೆಪಿ ನಾಯಕರೇನು ತಮ್ಮ ಪತ್ನಿಯರ ಒಡವೆ ಮಾರಿದ್ದರೆ?" ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಪ್ರಶ್ನಿಸಿದ್ದಾರೆ.
ದೇವಾಲಯವೊಂದಕ್ಕೆ ಭೇಟಿ ನೀಡಿದ್ದ ಕಮಲ್ ನಾಥ್ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
"ಪ್ರಧಾನಿ ನರೇಂದ್ರ ಮೋದಿ ಅವರು ಮತ್ತು ಇತರ ಬಿಜೆಪಿ ನಾಯಕರು ತಮ್ಮ ಚುನಾವಣಾ ಸಮಾವೇಶಕ್ಕೆ ಎಲ್ಲಿಂದ ಹಣ ತರುತ್ತಾರೆ? ವಿರೋಧ ಪಕ್ಷದವರ ಮೇಲೆ ರೇಡ್ ಮಾಡಿಸುವ ಇವರು, ತಮ್ಮ ಚುನಾವಣಾ ಖರ್ಚಿಗೆ ಎಲ್ಲಿಂದ ಹಣ ತರುತ್ತಾರೆ ಎಂಬುದನ್ನು ತಿಳಿಸಲಿ. ಇವರೇಣು ಸ್ವಂತ ಹಣದಿಂದ ಚುನಾವಣೆಗೆ ಖರ್ಚು ಮಾಡುತ್ತಾರೆಯೇ? ಅಥವಾ ತಮ್ಮ ಪತ್ನಿಯರ ಒಡವೆ ಮಾರಿದ ಹಣದಿಂದ ಚುನಾವಣೆ ಖರ್ಚು ಸರಿದೂಗಿಸುತ್ತಾರೆಯೇ ಎಂದು ಕಮಲ್ ನಾಥ್ ಪ್ರಶ್ನಿಸಿದರು.

ಬಿಜೆಪಿಯು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಮದು ಕಮಲ್ ನಾಥ್ ಹೇಳಿದರು.
ಇತ್ತೀಚೆಗಷ್ಟೇ ಆದಾಯ ತೆರಿಗೆ ಇಲಾಖೆಯು ಮಧ್ಯಪ್ರದೇಶದ ಕಮಲ್ ನಾಥ್ ಆಪ್ತರ ಮನೆಗಳ ಮೇಳೆ ದಾಳಿ ನಡೆಸಿ, 230 ಕ್ಕೂ ಕೋಟಿಗೂ ಹೆಚ್ಚು ರೂಪಾಯಿಗಳನ್ನು ವಶಪಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications