ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವರಿಂದ ಕಾನೂನು ಕ್ರಮದ ಎಚ್ಚರಿಕೆ: ಸಲಿಂಗಿ ಜೋಡಿಯ ಕರ್ವಾ ಚೌತ್‌ ಜಾಹೀರಾತು ಹಿಂಪಡೆದ ಡಾಬರ್‌

|
Google Oneindia Kannada News

ಭೋಪಾಲ್‌, ಅಕ್ಟೋಬರ್‌, 26: ಕರ್ವಾ ಚೌತ್‌ ಹಿನ್ನೆಲೆ ಡಾಬರ್‌ ಇಂಡಿಯಾ ಲಿಮಿಟೆಡ್‌ ಸಲಿಂಗಿ ಜೋಡಿಯು ಕರ್ವಾ ಚೌತ್ ನಡೆಸುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು ಈ ವಿಡಿಯೋ ಬಹಳ ವಿವಾದವನ್ನು ಸೃಷ್ಟಿ ಮಾಡಿದೆ. ಈ ವಿಡಿಯೋವನ್ನು ತೀವ್ರವಾಗಿ ಟೀಕೆ ಮಾಡಿದ್ದ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದರು, ಈ ಬೆನ್ನಲ್ಲೇ ಡಾಬರ್‌ ಈ ಜಾಹೀರಾತನ್ನು ಹಿಂಪಡೆದಿದೆ.

ಪತಿಯ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಗಾಗಿ ಪತ್ನಿಯರು ಮಾಡುವ ವ್ರತವೇ ಕರ್ವಾ ಚೌತ್‌ ಆಗಿದೆ. ಆದರೆ ಡಾಬರ್‌ ಇಂಡಿಯಾ ಫೆಮ್‌ ಫೇರ್‌ನೆಸ್‌ ಉತ್ಪನ್ನದ ಜಾಹೀರಾತಿನಲ್ಲಿ ಕರ್ವಾ ಔತ್‌ ಅನ್ನು ಸಲಿಂಗಿ ಜೋಡಿಯು ನಡೆಸುವುದನ್ನು ತೋರಿಸಿಕೊಟ್ಟಿದೆ. ಈ ಹಿನ್ನೆಲೆ ಡಾಬರ್‌ ಇಂಡಿಯಾ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಕೃಷಿ ಕಾಯ್ದೆ ಪರ ಜಾಹೀರಾತಿಗೆ ಪ್ರತಿಭಟನಾನಿರತ ರೈತನ ಫೋಟೊ; ಸರ್ಕಾರದ ವಿರುದ್ಧ ಆಕ್ಷೇಪಕೃಷಿ ಕಾಯ್ದೆ ಪರ ಜಾಹೀರಾತಿಗೆ ಪ್ರತಿಭಟನಾನಿರತ ರೈತನ ಫೋಟೊ; ಸರ್ಕಾರದ ವಿರುದ್ಧ ಆಕ್ಷೇಪ

ಈ ವಿಡಿಯೋದಲ್ಲಿ ಮೊದಲು ಯುವತಿಯರಿಬ್ಬರೂ ಮುಖಕ್ಕೆ ಫೆಮ್‌ ಹಚ್ಚಿ ಬ್ಲೀಚ್‌ ಮಾಡಿಕೊಂಡು ಬಳಿಕ ಕರ್ವಾ ಚೌತ್‌ ವ್ರತ ಆಚರಣೆ ಸಿದ್ದರಾಗುವಂತೆ ತೋರಿಸಲಾಗಿದೆ. ಕರ್ವಾ ಚೌತ್‌ ಕೊನೆಯಲ್ಲಿ ಪತ್ನಿಯು ಜರಡಿಯನ್ನು ಚಂದ್ರನಿಗೆ ಹಿಡಿದ ಬಳಿಕ ಅದೇ ಜರಡಿಯಲ್ಲಿ ಪತಿಯ ಮುಖವನ್ನು ನೋಡಲಾಗುತ್ತದೆ. ಆದರೆ ಈ ವಿಡಿಯೋದಲ್ಲಿ ಇಬ್ಬರು ಯುವತಿಯರು ಚಂದ್ರನಿಗೆ ಜರಡಿಯನ್ನು ಹಿಡಿದು ನೋಡಿದ ಬಳಿಕ ಅವರಿಬ್ಬರೂ ಪರಸ್ಪರರ ಮುಖವನ್ನು ಜರಡಿಯಲ್ಲಿ ನೋಡುತ್ತಾರೆ. ಆ ಸಂದರ್ಭದಲ್ಲಿ ಇಬ್ಬರೂ ಸಲಿಂಗಿ ಜೋಡಿಗಳು ಎಂದು ತಿಳಿದು ಬರುತ್ತದೆ.

Dabur withdraws Karwa Chauth Ad After Madhya Pradesh Ministers Warning

ಈ ಜಾಹೀರಾತು ಸುಮಾರು 1.06 ನಿಮಿಷವಿದ್ದು, ಈ ಜಾಹೀರಾತಿನ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಜಾಹೀರಾತಿನ ವಿರುದ್ಧ ವಾಗ್ದಾಳಿ ನಡೆಸಿದ್ದ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ, "ಕೂಡಲೇ ಈ ಜಾಹೀರಾತನ್ನು ಡಾಬರ್‌ ಇಂಡಿಯಾ ಲಿಮಿಟೆಡ್‌ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ಎಚ್ಚರಿಕೆ ನೀಡಿದ್ದರು.

ಇದೀಗ ಡಾಬರ್‌ ಇಂಡಿಯಾ ಲಿಮಿಟೆಡ್‌ ಸಲಿಂಗಿ ಜೋಡಿಯು ಕರ್ವಾ ಚೌತ್ ನಡೆಸುವ ವಿಡಿಯೋವನ್ನು ಹಿಂದಕ್ಕೆ ಪಡೆದಿದೆ. "ಫೆಮ್‌ನ ಕರ್ವಾಚೌತ್ ಅಭಿಯಾನವನ್ನು ಎಲ್ಲಾ ಸಾಮಾಜಿಕ ಮಾಧ್ಯಮದಿಂದ ಹಿಂದಕ್ಕೆ ಪಡೆಯಲಾಗಿದೆ. ಉದ್ದೇಶಪೂರ್ವಕವಲ್ಲದೇ ಜನರ ಭಾವನೆಗಳಿಗೆ ನೋವುಂಟು ಮಾಡಿದ ಕಾರಣಕ್ಕೆ ನಾವು ಕ್ಷಮೆಯಾಚಿಸುತ್ತೇವೆ," ಎಂದು ಡಾಬರ್‌ ಇಂಡಿಯಾ ಲಿಮಿಟೆಡ್‌ ತಿಳಿಸಿದೆ.

ಮತ್ತೊಂದು ವಿವಾದ ಸೃಷ್ಟಿಸಿದ ತನಿಷ್ಕ್ ಆಭರಣದ ಹೊಸ ಜಾಹೀರಾತುಮತ್ತೊಂದು ವಿವಾದ ಸೃಷ್ಟಿಸಿದ ತನಿಷ್ಕ್ ಆಭರಣದ ಹೊಸ ಜಾಹೀರಾತು

ಸಚಿವರಿಂದ ಕಾನೂನು ಕ್ರಮದ ಎಚ್ಚರಿಕೆ

"ಡಾಬರ್‌ ಸಂಸ್ಥೆಯು ಇಬ್ಬರು ಮಹಿಳೆಯರು ಕರ್ವಾ ಚೌತ್‌ ಆಚರಣೆ ಮಾಡುವ ಜಾಹೀರಾತನ್ನು ಪ್ರಕಟಿಸಿದ್ದಾರೆ. ನಾಳೆ ಇಬ್ಬರು ಪುರುಷರು ಮದುವೆ ಆಗುವುದನ್ನು ಜಾಹೀರಾತು ಮಾಡಿ ಪ್ರಚಾರ ಮಾಡುತ್ತಾರೆ. ಆದರೆ ನಾವು ಇಂತಹ ಆಕ್ಷೇಪಾರ್ಹ ಜಾಹೀರಾತಿನ ಪ್ರಚಾರಕ್ಕೆ ಅವಕಾಶ ನೀಡಲಾರೆವು," ಎಂದು ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ಹೇಳಿದ್ದಾರೆ. "ಈ ಜಾಹೀರಾತು ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ. ಈ ಜಾಹೀರಾತಿನ ವಿರುದ್ಧ ನಾನು ಕಾನೂನು ಹೋರಾಟ ನಡೆಸುತ್ತೇನೆ," ಎಂದು ಕೂಡಾ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ಎಚ್ಚರಿಕೆ ನೀಡಿದ್ದರು.

ಇನ್ನು ಸಚಿವರು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದವು. ಹಾಗೆಯೇ ಹಲವು ಮಂದಿ ಈ ಜಾಹೀರಾತಿಗೆ ಬೆಂಬಲವನ್ನು ಕೂಡಾ ವ್ಯಕ್ತಪಡಿಸಿದ್ದರು. BoycottFem ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಡಾಬರ್‌ ಇಂಡಿಯಾ ಲಿಮಿಟೆಡ್‌ನ ಈ ಜಾಹೀರಾತಿಗೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದರು. ಈ ಜಾಹೀರಾತಿಗೆ ಪ್ರತಿಕ್ರಿಯೆ ನೀಡಿದ್ದ ನೆಟ್ಟಿಗರು, "ದೇಶದಲ್ಲಿ ಸಲಿಂಗ ಕಾಮ ಅಪರಾಧವಲ್ಲ, ಆದರೂ ಕೂಡಾ ದೇಶದ ಎಲ್ಲಾ ಜನರು ಇದನ್ನು ಒಪ್ಪುವುದಿಲ್ಲ. ಈ ನಡುವೆ ಇಂತಹ ಜಾಹೀರಾತುಗಳು ಸರಿಯಲ್ಲ. ಈ ಜಾಹೀರಾತಿನ ಮೂಲಕ ಹಬ್ಬಕ್ಕೆ ಅವಮಾನ ಮಾಡಲಾಗಿದೆ. ಧಾರ್ಮಿಕ ನಂಬಿಕೆಗೆ ಧಕ್ಕೆ ಉಂಟಾಗಿದೆ," ಎಂದು ಕಾಮೆಂಟ್‌ಗಳು ಮಾಡಲಾಗಿತ್ತು.

(ಒ‌ನ್‌ಇಂಡಿಯಾ ಸುದ್ದಿ)

English summary
Dabur withdraws Karwa Chauth Ad After Madhya Pradesh Home Minister Narottam Mishra Warning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X