Get Updates
Get notified of breaking news, exclusive insights, and must-see stories!

ಬಾಸ್ಕೆಟ್‌ ಬಾಲ್‌, ಡ್ಯಾನ್ಸ್‌ ಬಳಿಕ ಈಗ ಪ್ರಗ್ಯಾ ಕ್ರಿಕೆಟ್‌ ವಿಡಿಯೋ ವೈರಲ್‌‌!

ಭೋಪಾಲ್‌, ಡಿಸೆಂಬರ್‌ 26: ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್‌ ಸದ್ಯ ಆರೋಗ್ಯ ಸಮಸ್ಯೆಯ ಹಿನ್ನೆಲೆ ಜಾಮೀನು ಮೇಲೆ ಹೊರಗೆ ಇದ್ದಾರೆ. ಹಾಗೆಯೇ ವೀಲ್‌ ಚೇರ್‌ನಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಆದರೆ ಹಲವಾರು ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಸದ್ಯ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಬಿಜೆಪಿ ಸಂಸದೆ ಮಧ್ಯ ಪ್ರದೇಶದಲ್ಲಿ ಭೋಪಾಲ್‌ನಲ್ಲಿ ಕ್ರಿಕೆಟ್‌ ಆಡುತ್ತಿರುವುದು ಕಂಡು ಬಂದಿದೆ.

ಆರೋಗ್ಯ ಸಮಸ್ಯೆ ಕಾರಣ ನೀಡಿ ಜಾಮೀನು ಪಡೆದುಕೊಂಡಿರುವ ಪ್ರಗ್ಯಾ ಸಿಂಗ್‌ ಠಾಕೂರ್‌ ಈ ಹಿಂದೆ ಬಾಸ್ಕೆಟ್‌ ಬಾಲ್‌ ಹಾಗೂ ಗರ್ಭಾ ಡ್ಯಾನ್ಸ್‌ ಮಾಡುವ ಮೂಲಕ ವಿಪಕ್ಷಗಳ ಕಣ್ಣಿಗೆ ಗುರಿಯಾಗಿದ್ದರು. ಈಗ ಕ್ರಿಕೆಟ್‌ ಆಡುವ ಮೂಲಕ ಸುದ್ದಿಯಾಗಿದ್ದಾರೆ.

ಸುಮಾರು ಒಂದು ನಿಮಿಷಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಈ ವಿಡಿಯೋದಲ್ಲಿ ಬಿಜೆಪಿ ನಾಯಕಿ ಭೋಪಾಲದ ಶಕ್ತಿ ನಗರದ ಮೈದಾನವೊಂದರಲ್ಲಿ ಕ್ರಿಕೆಟ್‌ ಬ್ಯಾಟ್‌ ಹಿಡಿದು ಬ್ಯಾಟಿಂಗ್‌ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಹಲವಾರು ಮಂದಿ ಚಿಯರ್‌ ಅಪ್‌ ಕೂಡಾ ಮಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ ಈ ವಿಡಿಯೋ ಮೂಲಕ ಬಿಜೆಪಿ ನಾಯಕಿ ಮತ್ತೆ ವಿರೋಧ ಪಕ್ಷಗಳ ಕಣ್ಣಿಗೆ ಗುರಿಯಾಗಿದ್ದಾರೆ.

Pragya Singh Thakur

ಬಾಸ್ಕೆಟ್‌ ಬಾಲ್‌ ಆಡಿದ್ದ ಪ್ರಗ್ಯಾ ಠಾಕೂರ್‌

ಈ ಹಿಂದೆ ಜುಲೈ ತಿಂಗಳಿನಲ್ಲಿ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್ ಭೋಪಾಲ್‌ನಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿರುವ ವಿಡಿಯೋ ವೈರಲ್‌ ಆಗಿತ್ತು. ಆ ವೇಳೆ ವಿರೋಧ ಪಕ್ಷದ ನಾಯಕರು ಭಾರೀ ಟೀಕೆ ಮಾಡಿದ್ದರು. ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬಿಜೆಪಿ ನಾಯಕಿ ಪ್ರಗ್ಯಾ ಸಿಂಗ್‌ ಠಾಕೂರ್, ಭಾರೀ ಸರಳ, ಸುಲಭವಾಗಿ ಬಾಸ್ಕೆಟ್ ಬಾಲ್ ಅನ್ನು ಆಡುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ನ ನರೇಂದ್ರ ಸಲೂಜಾ, ''ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಠಾಕೂರ್ ಗಾಲಿ ಕುರ್ಚಿಯಲ್ಲೇ ಕೂತಿದ್ದನ್ನು ಇತ್ತೀಚೆಗೆ ನೋಡಿದ್ದೆ. ಆದರೆ ಇಂದು ಅವರು ಭೋಪಾಲ್‌ನ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿದ್ದಾರೆ. ಇದನ್ನು ನೋಡಿ ಬಹಳ ಸಂತೋಷವಾಯಿತು,'' ಎಂದು ವ್ಯಂಗ್ಯವಾಡಿದ್ದರು. ''ಹಾಗೆಯೇ ಈವರೆಗೆ ನನಗೆ ಲಭಿಸಿದ ಮಾಹಿತಿ ಪ್ರಕಾರ ಯಾವುದೋ ಒಂದು ಗಾಯದ ಕಾರಣದಿಂದಾಗಿ ಪ್ರಗ್ಯಾ ಸರಿಯಾಗಿ ನಿಂತು ನಡೆಯಲು ಸಾಧ್ಯವಿಲ್ಲ ಎಂಬುದನ್ನು ತಿಳಿದಿತ್ತು. ದೇವರು ಅವರನ್ನು ಯಾವಾಗಲೂ ಆರೋಗ್ಯವಾಗಿರಿಸಲಿ,'' ಎಂದಿದ್ದರು.

ಪ್ರಗ್ಯಾ ಡ್ಯಾನ್ಸ್‌ ವಿಡಿಯೋ ವೈರಲ್‌

ಬಿಜೆಪಿ ಸಂಸದೆ ತಾನು ಆಯೋಜಿಸಲು ಸಹಾಯ ಮಾಡಿದ ವಿವಾಹ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದು ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿದ್ದರು. ಭೋಪಾಲ್‌ನ ಸಂಸದೆಯ ನಿವಾಸದಲ್ಲಿ ಎರಡು ಅತ್ಯಂತ ಬಡ ಕುಟುಂಬಗಳ ಯುವತಿಯರ ವಿವಾಹವನ್ನು ನಡೆಸಲಾಗಿದ್ದು, ಈ ಸಂದರ್ಭ 51 ವರ್ಷದ ಪ್ರಗ್ಯಾ ಠಾಕೂರ್‌, ಅತ್ಯಂತ ಸಂತೋಷದಿಂದ ನೃತ್ಯ ಮಾಡಿದ್ದು, ಅಷ್ಟು ಮಾತ್ರವಲ್ಲದೇ ಇತರರಿಗೂ ನೃತ್ಯ ಮಾಡಲು ಆಹ್ವಾನ ನೀಡಿದ್ದಾರೆ. ಬನ್ನಿ ನೃತ್ಯ ಮಾಡಿ ಎಂದು ಕೈ ಬೀಸಿ ಕರೆದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ನ ನರೇಂದ್ರ ಸಲೂಜಾ, "ನಮ್ಮ ಭೋಪಾಲ್ ಸಂಸದೆ ಸಹೋದರಿ ಪ್ರಗ್ಯಾ ಠಾಕೂರ್‌ ಬಾಸ್ಕೆಟ್‌ ಬಾಲ್‌ ಆಡುವುದನ್ನು, ಯಾರದೇ ಬೆಂಬಲವಿಲ್ಲದೆ ನಡೆಯುವುದನ್ನು ಅಥವಾ ಈ ರೀತಿ ಸಂತೋಷದಿಂದ ಕುಣಿಯುವುದನ್ನು ನಾವು ನೋಡಿದಾಗಲೆಲ್ಲಾ ನನಗೆ ತುಂಬಾ ಸಂತೋಷವಾಗುತ್ತದೆ?" ಎಂದು ಕುಟುಕಿದ್ದಾರೆ.

10 ಮಂದಿ ಸಾವನ್ನಪ್ಪಿ, ಅನೇಕರು ಗಾಯಗೊಂಡ 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಗ್ಯಾ ಸಿಂಗ್‌ ಆರೋಪಿಯಾಗಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2017 ರಲ್ಲಿ ಆರೋಗ್ಯದ ಆಧಾರದ ಮೇಲೆ ಪ್ರಗ್ಯಾ ಸಿಂಗ್‌ ಜಾಮೀನು ಪಡೆದಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್‌ನಿಂದ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್‌ನನ್ನು 3.6 ಲಕ್ಷ ಮತಗಳಿಂದ ಪ್ರಗ್ಯಾ ಸೋಲಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+