ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ಮತಾಂತರ ಆರೋಪ: ಮಧ್ಯಪ್ರದೇಶ ಕ್ರಿಶ್ಚಿಯನ್ ಶಾಲೆಯ ಮೇಲೆ ದಾಳಿ

|
Google Oneindia Kannada News

ವಿದಿಶಾ, ಡಿಸೆಂಬರ್ 6: ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯು ವಿದ್ಯಾರ್ಥಿಗಳನ್ನು ಧಾರ್ಮಿಕ ಮತಾಂತರ ಮಾಡುತ್ತಿದೆ ಎಂದು ಆರೋಪಿಸಿ ಬಜರಂಗ ದಳದ ನೂರಾರು ಕಾರ್ಯಕರ್ತರು ಸ್ಥಳೀಯರೊಂದಿಗೆ ಶಾಲೆಗೆ ನುಗ್ಗಿ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಸೋಮವಾರ 12ನೇ ತರಗತಿಯ ವಿದ್ಯಾರ್ಥಿಗಳು ಗಣಿತ ಪರೀಕ್ಷೆಗೆ ಕುಳಿತಿದ್ದಾಗ ಈ ಹಿಂಸಾಚಾರ ನಡೆದಿದೆ.

ವಿದಿಶಾ ಜಿಲ್ಲೆಯ ಗಂಜ್ ಬಸೋದಾ ಪಟ್ಟಣದಲ್ಲಿರುವ ಸೇಂಟ್ ಜೋಸೆಫ್ ಶಾಲೆಯ ಆಡಳಿತದಿಂದ ಎಂಟು ವಿದ್ಯಾರ್ಥಿಗಳನ್ನು ಮತಾಂತರಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದ ನಂತರ ಈ ಗಲಾಟೆ ಶುರುವಾಗಿದೆ. ಘಟನೆ ದೃಶ್ಯಗಳು ವೈರಲ್ ಆಗಿದ್ದು ಶಾಲೆಯ ಮುಂದೆ ನೆರೆದ ಜನ ಕಲ್ಲು ತೂರಾಟ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಶಾಲೆ ಹೊರಗೆ ಜಮಾಯಿಸಿದ ಜನಸಮೂಹ ಶಾಲೆಯ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದೆ. ದೃಶ್ಯಗಳಲ್ಲಿ ಪೊಲೀಸರು ಗುಂಪನ್ನು ಚದುರಿಸಲು ಯತ್ನಿಸುತ್ತಿರುವುದು ಕಂಡುಬಂದಿದೆ. ಅಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಉದ್ರಿಕ್ತ ಗುಂಪು ಪರೀಕ್ಷೆ ವೇಳೆ ಶಾಲಾ ಕಟ್ಟಡದ ಮೇಲೆ ಮನಬಂದಂತೆ ಕಲ್ಲು ತೂರಾಟ ನಡೆಸಿದೆ. ಶಾಲಾ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ದಾಂದಲೆ ನಡೆಸಿದ್ದಾರೆ. ಹೀಗಾಗಿ ಶಾಲಾ ಮಕ್ಕಳು ಉಪನ್ಯಾಸಕರು ದಾಳಿಯಿಂದ ತಪ್ಪಿಸಿಕೊಳ್ಳಲು ಹರಸಾಹಸಪಟ್ಟಿದ್ದಾರೆ. ವಿದ್ಯಾರ್ಥಿಗಳು ಭಯಭೀತರಾಗಿ ಪರೀಕ್ಷೆಯ ಬಗ್ಗೆ ಗಮನಗರಿಸಲಾಗಿಲ್ಲ ಎನ್ನುವ ಆರೋಪ ಮಾಡಿದ್ದಾರೆ. ಹೀಗಾಗಿ ಪರೀಕ್ಷೆಗಳನ್ನು ಮತ್ತೊಮ್ಮೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಜನಸಮೂಹವು ಗಾಜಿನ ಕಿಟಕಿಗಳ ಮೇಲೆ ಕಲ್ಲುಗಳನ್ನು ಎಸೆದಿದ್ದರಿಂದ ಭಯಭೀತರಾದುದ್ದನ್ನು ವಿವರಿಸಿದ ವಿದ್ಯಾರ್ಥಿಯೊಬ್ಬರು, "ನಮ್ಮ ಏಕಾಗ್ರತೆಗೆ ತೊಂದರೆಯಾಗಿದೆ. ನಾವು ಪರೀಕ್ಷೆಯನ್ನು ಮತ್ತೆ ನಡೆಸಬೇಕೆಂದು ಬಯಸುತ್ತೇವೆ" ಎಂದು ಹೇಳಿದರು.

Allegations of religious conversion: attacks on Madhya Pradesh Christian school

ಶಾಲೆಯ ಮ್ಯಾನೇಜರ್ ಬ್ರದರ್ ಆಂಟನಿ ಅವರು ಸ್ಥಳೀಯ ಮಾಧ್ಯಮಗಳ ಮೂಲಕ ದಾಳಿಯ ಮಾಹಿತಿಯನ್ನು ಒಂದು ದಿನ ಮುಂಚಿತವಾಗಿ ಸ್ವೀಕರಿಸಿದರು. ನಂತರ ಅವರು ಪೊಲೀಸ್ ಮತ್ತು ರಾಜ್ಯ ಆಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೂ ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಜೊತೆಗೆ ಅವರು ಧಾರ್ಮಿಕ ಮತಾಂತರದ ಹಕ್ಕುಗಳನ್ನು ನಿರಾಕರಿಸಿದರು. ದೂರಿನಲ್ಲಿ ಉಲ್ಲೇಖಿಸಲಾದ ಯಾವುದೇ ಹೆಸರುಗಳು ಯಾವುದೇ ವಿದ್ಯಾರ್ಥಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಮಕ್ಕಳನ್ನು ಧಾರ್ಮಿಕ ಮತಾಂತರ ಮಾಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಸ್ಥಳೀಯ ಬಜರಂಗದಳ ಘಟಕದ ಮುಖಂಡ ನಿಲೇಶ್ ಅಗರವಾಲ್, 'ಆಪಾದಿತ ಧಾರ್ಮಿಕ ಮತಾಂತರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಶಾಲೆಯ ಶಾಮೀಲು ಕಂಡು ಬಂದರೆ ಕ್ರಮ ತೆಗೆದುಕೊಳ್ಳಬೇಕು' ಎಂದರು.

ಘಟನೆಯ ನಂತರ ಪ್ರದೇಶದ ಇತರ ಮಿಷನರಿ ಶಾಲೆಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ವಿಧ್ವಂಸಕ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆಪಾದಿತ ಧಾರ್ಮಿಕ ಮತಾಂತರದ ಬಗ್ಗೆ ತನಿಖೆ ಆರಂಭವಾಗಿದ್ದು, ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಲಾಗುವುದು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರೋಶನ್ ರೈ ಹೇಳಿದ್ದಾರೆ.

ಇನ್ನು ದಾಳಿಯ ವೇಳೆ ಶಾಲೆಯ ಗಾಜಿನ ಕಿಟಕಿಗಳು ಒಡೆದುಹೋಗಿವೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ದಾಳಿಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಭಾರೀ ವೈರಲ್ ಆಗಿವೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಹಿಂದೆ ವಿದಿಶಾ ಜಿಲ್ಲಾಧಿಕಾರಿಗೆ ಪತ್ರ ಬರೆದು ಶಾಲೆಯ ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿತ್ತು.

English summary
Hundreds of activists of the right-wing group Bajrang Dal have been seen running into the school with locals and hanging stones on the building, alleging that the Christian missionary group is converting students. keys:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X