ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಜ್ಜೈನಿ ದೇವಸ್ಥಾನಕ್ಕೆ ಆಲಿಯಾ, ರಣಬೀರ್‌ ಭೇಟಿಗೆ ಹಿಂದೂ ಸಂಘಟನೆಗಳ ವಿರೋಧ

|
Google Oneindia Kannada News

ಉಜ್ಜೈನಿ, ಸೆಪ್ಟೆಂಬರ್‌ 07: ಹಿಂದಿ ಚಿತ್ರರಂಗದ ಖ್ಯಾತ ನಟರಾದ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಯನ್ ಮುಖರ್ಜಿ ಅವರು ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೆ ಬಲಪಂಥೀಯ ಗುಂಪುಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸದಸ್ಯರು ವಿರೋಧ ವ್ಯಕ್ತಪಡಿಸಿ ಭಾರಿ ಗದ್ದಲವನ್ನು ಸೃಷ್ಟಿಸಿ ಪ್ರತಿಭಟನೆ ನಡೆಸಿದ್ದಾರೆ.

ಅವರು ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಪ್ರಸಿದ್ಧ ಜ್ಯೋತಿರ್ಲಿಂಗವನ್ನು ದರ್ಶನ ಮಾಡಬೇಕಿತ್ತು. ಭೇಟಿಗೆ ಮುನ್ನ ಬಲಪಂಥೀಯ ಗುಂಪುಗಳ ಕಾರ್ಯಕರ್ತರು ಮುಖ್ಯ ದ್ವಾರ ಮತ್ತು ವಿವಿಐಪಿಗಳಿಗೆ ಕಪ್ಪು ಬಾವುಟ ತೋರಿಸಲು ಶಂಖ ದ್ವಾರದಲ್ಲಿ ಜಮಾಯಿಸಿದರು. ಹೀಗಾಗಿ ಗುಂಪನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು.

National Cinema Day : ದೇಶಾದ್ಯಂತ ಥಿಯೇಟರ್‌ಗಳಲ್ಲಿ ಟಿಕೆಟ್‌ ದರ 75 ರು. ಮಾತ್ರ, ಯಾವಾಗ ಗೊತ್ತಾ?National Cinema Day : ದೇಶಾದ್ಯಂತ ಥಿಯೇಟರ್‌ಗಳಲ್ಲಿ ಟಿಕೆಟ್‌ ದರ 75 ರು. ಮಾತ್ರ, ಯಾವಾಗ ಗೊತ್ತಾ?

ಮುಂಬೈ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಬ್ರಹ್ಮಾಸ್ತ್ರ ಚಿತ್ರದ ಪ್ರಚಾರದ ನಂತರ ಈ ಖ್ಯಾತ ನಟರು ನಿರ್ದೇಶಕ ಅಯಾನ್ ಮುಖರ್ಜಿ ಅವರೊಂದಿಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಆಶಯದೊಂದಿಗೆ ಉಜ್ಜಯಿನಿಗೆ ವಿಮಾನವನ್ನು ಬುಕ್‌ ಮಾಡಿದ್ದರು. ಹಲೋ, ನಾವು ಇನ್ನೂ ಕೆಲವು ಮಾಹಿತಿಯೊಂದಿಗೆ ಮತ್ತೊಮ್ಮೆ ಹಿಂತಿರುಗಿದ್ದೇವೆ, ಮೊದಲನೆಯದಾಗಿ, ನಾವು ಉಜ್ಜಯಿನಿ, ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದು ಆಲಿಯಾ ಭಟ್ ಇನ್‌ಸ್ಟಗ್ರಾಂನಲ್ಲಿ ಬರೆದುಕೊಂಡಿದ್ದರು.

ಆಲಿಯಾ ಭಟ್ ಗರ್ಭಿಣಿಯಾಗಿರುವುದರಿಂದ ಸದ್ಯದ ವೀರೋಧದ ನಡುವೆ ದೇವಸ್ಥಾನಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದರ್ಶನವಿಲ್ಲದೆ ಇಂದೋರ್‌ಗೆ ಮರಳಿದ್ದಾರೆ. ಇಂದೋರ್‌ನಿಂದ ಮುಂಬೈಗೆ ವಿಮಾನದಲ್ಲಿ ತೆರಳಲಿದ್ದಾರೆ ಎಂದು ಉಜ್ಜಯಿನಿಯ ಕಲೆಕ್ಟರ್ ಆಶಿಶ್ ಸಿಂಗ್ ಹೇಳಿದ್ದಾರೆ.

ಮಧುರೈನಲ್ಲಿ ಮೊದಲ ಟ್ರಾನ್ಸ್‌ಜೆಂಡರ್ ಪ್ರಕಟಣೆ ಮತ್ತು ಚಲನಚಿತ್ರ ಕಂಪನಿ ಪ್ರಾರಂಭಮಧುರೈನಲ್ಲಿ ಮೊದಲ ಟ್ರಾನ್ಸ್‌ಜೆಂಡರ್ ಪ್ರಕಟಣೆ ಮತ್ತು ಚಲನಚಿತ್ರ ಕಂಪನಿ ಪ್ರಾರಂಭ

 ಸೆಪ್ಟೆಂಬರ್ 9ಕ್ಕೆ ಬ್ರಹ್ಮಾಸ್ತ್ರ ಬಿಡುಗಡೆ

ಸೆಪ್ಟೆಂಬರ್ 9ಕ್ಕೆ ಬ್ರಹ್ಮಾಸ್ತ್ರ ಬಿಡುಗಡೆ

ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಅಯಾನ್ ಮುಖರ್ಜಿ ಮಾತ್ರ ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಪ್ರಸಿದ್ಧ ಜ್ಯೋತಿರ್ಲಿಂಗದ ದರ್ಶನ ಪಡೆದರು ಎಂದು ಸಿಂಗ್ ಹೇಳಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಬ್ರಹ್ಮಾಸ್ತ್ರ ಇದೇ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ತಮ್ಮ ಮುಂಬರುವ ಚಿತ್ರ ಬ್ರಹ್ಮಾಸ್ತ್ರ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗುವ ಮೊದಲು ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದರು.

 ಇನ್‌ಸ್ಟಾಗ್ರಾಂನಲ್ಲಿ ಆಯಾನ್‌ ಪೋಟೋ ಹಂಚಿಕೆ

ಇನ್‌ಸ್ಟಾಗ್ರಾಂನಲ್ಲಿ ಆಯಾನ್‌ ಪೋಟೋ ಹಂಚಿಕೆ

ಆದರೆ, ಮಧ್ಯಪ್ರದೇಶದಲ್ಲಿ ರಣಬೀರ್ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ ಪ್ರತಿಭಟನಾಕಾರರು ದೇವಸ್ಥಾನಕ್ಕೆ ಪ್ರವೇಶಿಸದಂತೆ ಆಗ್ರಹಿಸಿದರು. ಬಳಿಕ ಮಂಗಳವಾರ ಅಲಿಯಾ ಮತ್ತು ರಣಬೀರ್ ಅವರನ್ನು ಬಿಟ್ಟು ಅಯಾನ್ ಮುಖರ್ಜಿ ಏಕಾಂಗಿಯಾಗಿ ದೇವಾಲಯಕ್ಕೆ ಭೇಟಿ ನೀಡಿದರು. ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಆಯಾನ್‌ ಹಂಚಿಕೊಂಡಿದ್ದಾರೆ. ಅವರ ಹಣೆಯಲ್ಲಿ ಕೆಂಪು ಬಣ್ಣದ ಟೀಕಾ ಮತ್ತು ಕೊರಳಲ್ಲಿ ಹೂವಿನ ಹಾರ ಹಾಕಿಕೊಂಡಿದ್ದರು.

 ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಗೆ ಆಶೀರ್ವಾದ ಅಗತ್ಯ

ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಗೆ ಆಶೀರ್ವಾದ ಅಗತ್ಯ

ಫೋಟೋದಲ್ಲಿ ನಿರ್ದೇಶಕ ಅಯಾನ್ ಮುಖರ್ಜಿ ಅವರು ತಮ್ಮ ಪವಿತ್ರ ದರ್ಶನ ಎಂಬ ಶೀರ್ಷಿಕೆ ನೀಡಿ 3 ದಿನಗಳ ನಂತರ ಇಂದು ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕಾಗಿ ತುಂಬಾ ಸಂತೋಷವಾಗಿದೆ. ಅತ್ಯಂತ ಪವಿತ್ರ ದರ್ಶನವನ್ನು ನಾನು ಪಡೆದುಕೊಂಡಿದೆ. ನಮ್ಮ ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಗೆ ಧನಾತ್ಮಕ ಶಕ್ತಿ ಮತ್ತು ಆಶೀರ್ವಾದಗಳು ಮುಖ್ಯ ಎಂದು ಬರೆದಿದ್ದಾರೆ.

 ನಾನು ಮಟನ್, ಪಾಯ ಮತ್ತು ಬೀಫ್ ಅಭಿಮಾನಿ

ನಾನು ಮಟನ್, ಪಾಯ ಮತ್ತು ಬೀಫ್ ಅಭಿಮಾನಿ

2011ರಲ್ಲಿ ನಟ ರಣಬೀರ್ ತನ್ನ ರಾಕ್‌ಸ್ಟಾರ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ತಾನು ಗೋಮಾಂಸ ತಿನ್ನುವುದನ್ನು ಇಷ್ಟಪಡುತ್ತೇನೆ. ನನ್ನ ಕುಟುಂಬವು ಪೇಶಾವರದಿಂದ ಬಂದಿದೆ. ಆದ್ದರಿಂದ ಅವರೊಂದಿಗೆ ಸಾಕಷ್ಟು ಪೇಶಾವರಿ ಆಹಾರ ಬಂದಿದೆ. ನಾನು ಮಟನ್, ಪಾಯ ಮತ್ತು ಬೀಫ್ ಅಭಿಮಾನಿ. ಹೌದು, ನಾನು ದೊಡ್ಡ ಬೀಫ್ ಅಭಿಮಾನಿ ಎಂದು ಅವರು ಹೇಳಿದ್ದರು. ಬ್ರಹ್ಮಾಸ್ತ್ರ ಬಿಡುಗಡೆಗೆ ಮುನ್ನ ಈ ಹಳೆಯ ವೀಡಿಯೊ ಕೂಡ ವೈರಲ್‌ ಆಗಿದೆ. ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣಬೀರ್ ಜೊತೆಗೆ ಆಲಿಯಾ ಭಟ್, ಅಮಿತಾಬ್ ಬಚ್ಚನ್, ನಾಗಾರ್ಜುನ ಮತ್ತು ಮೌನಿ ರಾಯ್ ಕೂಡ ನಟಿಸಿದ್ದಾರೆ. ಫ್ಯಾಂಟಸಿ ಡ್ರಾಮಾ ಕಥೆ ಹೊಂದಿರುವ ಈ ಚಿತ್ರ 300 ಕೋಟಿಗಿಂತ ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರವಾಗಿದೆ. ಇದು ಅತಿದೊಡ್ಡ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.

English summary
Members of the right-wing groups Vishwa Hindu Parishad and Bajrang Dal protested against the visit of famous Hindi actors Ranbir Kapoor, Alia Bhatt and Ayan Mukerji to the Mahakaleshwar temple in Ujjain, creating a huge ruckus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X