Zeiss India: ಲೆನ್ಸ್ ಉತ್ಪಾದನಾ ಸಂಸ್ಥೆಯಿಂದ ಕರ್ನಾಟಕದಲ್ಲಿ ಭಾರೀ ಬಂಡವಾಳ ಹೂಡಿಕೆ
ಬೆಂಗಳೂರು, ಜುಲೈ 16: ಜಾಗತಿಕ ಆಪ್ಟಿಕಲ್ ಲೆನ್ಸ್ ಉತ್ಪಾದನಾ ಸಂಸ್ಥೆಯಾಗಿರುವ ಝೈಸ್ (Zeiss) ಗ್ರೂಪ್ ಕರ್ನಾಟಕದಲ್ಲಿ ಹೊಸ ಪ್ಲಾಂಟ್ ನಿರ್ಮಾಣಕ್ಕೆ ಬರೋಬ್ಬರಿ 2,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಆಸಕ್ತಿ ತೋರಿದೆ. ಇದರಿಂದ ರಾಜ್ಯದಲ್ಲಿ ಕನ್ನಡಕ ಗ್ಲಾಸ್ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಲಿದ್ದು, ಉದ್ಯೋಗವಕಾಶಗಳು ಸೃಷ್ಟಿಯಾಗಿವೆ.
ಭಾರತೀ ಕಾರ್ಲ್ ಝೈಸ್ ಇಂಡಿಯಾ ಸಮೂಹವು ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಜೊತೆಗೆ ರಾಜ್ಯದಲ್ಲಿ ಸುಮಾರು 5,000 ಜನರಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಸದ್ಯ ದೇಶದಲ್ಲಿ ಸಂಸ್ಥೆಯು 25 ವರ್ಷ ಪೂರ್ಣಗೊಂಡಿದೆ. ಕಂಪನಿಯು ಮುಂದಿನ 2027 ರ ಹೊತ್ತಿಗೆ 5,000 ಕೋಟಿ ರೂಪಾಯಿಗಳ ವಹಿವಾಟು ಸಾಧಿಸುವ ಗುರಿ ಇಟ್ಟುಕೊಂಡಿದೆ ಎಂದು ಸಮೂಹದ ಹಿರಿಯ ಅಧಿಕಾರಿಗಳು ತಿಳಿಸಿದರು.

ರಾಜ್ಯ ರಾಜಧಾನಿ ಬೆಂಗಳೂರು ವಿಮಾನ ನಿಲ್ದಾಣದ (KIA) ಸಮೀಪ 34 ಎಕರೆ ಭೂಮಿ ಪಡೆದಿರುವ ಕಂಪನಿ ಇನ್ನೂ 9 ಕಂಪನಿ ಪಡೆಯಲು ಸಿದ್ಧವಾಗಿದೆ. ಇಲ್ಲಿ ಘಟಕ ಪ್ಲಾಂಟ್ ಸ್ಥಾಪನೆಗಾಗಿ ಝೈಸ್ ಸುಮಾರು 2,500 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಆರಂಭಿಕ ಹಂತದಲ್ಲಿ 800 ಜನರಿಗೆ ಉದ್ಯೋಗ ಸಿಗಲಿದೆ ಎಂದು ಝೈಸ್ ಇಂಡಿಯಾ ನಿರ್ದೇಶಕ ಮತ್ತು ಸಿಎಫ್‌ಒ ಶ್ರೇಯಸ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಝೈಸ್‌ನ ಅತಿ ದೊಡ್ಡ ಕನ್ನಡಕ ಲೆನ್ಸ್ (ಗ್ಲಾಸ್) ಉತ್ಪಾದನಾ ಕಾರ್ಖಾನೆ ಆಗಿದೆ. ಈ ಲೇನ್ಸ್ ಉತ್ಪಾದನಾ ಸ್ಥಾವರದ ನಿರ್ಮಾಣ ಕಾರ್ಯವು ಜುಲೈ ಅಂತ್ಯದ ವೇಳೆ ಆರಂಭವಾಗುವ ನಿರೀಕ್ಷೆ ಇದೆ. ಮುಂದಿನ ವರ್ಷ 2024ರ ಅಕ್ಟೋಬರ್ ವೇಳೆಗೆ ಗರಿಷ್ಠ ಉತ್ಪಾದನೆಯ ಗುರಿ ಹೊಂದಿದೆ ಎಂದು ಅವರು ಹೇಳಿದರು.
ಝೈಸ್ ಭಿವಷ್ಯದ ಉತ್ಪಾದನಾ ಗುರಿ
ಪ್ರಸ್ತುತದಲ್ಲಿ ಕನ್ನಡಕದ ಗಾಜುಗಳನ್ನು ಒಂದು ದಿನಕ್ಕೆ ಸುಮಾರು 30,000 ಉತ್ಪಾದಿಸುತ್ತಿದ್ದು, ಇದನ್ನು ಎರಡು ಲಕ್ಷಕ್ಕೆ ಹೆಚ್ಚಿಸಲು ಚಿಂತನೆ ನಡೆದಿದೆ. ಇನ್ನು ಪ್ರಿಸ್ಕ್ರಿಪ್ಷನ್ ಲೆನ್ಸ್‌ಗಳು ನಿತ್ಯ ಸುಮಾರು 10,000 ದಷ್ಟು ಉತ್ಪಾನದೆ ಆಗುತ್ತಿದ್ದು, ಅದನ್ನು ಸುಮಾರು 60,000 ಕ್ಕೆ ಏರಿಸಲಿದ್ದೇವೆ ಎಂದರು.

ಹೊಸ ಸ್ಥಾವರ ಸ್ಥಾಪನೆಯಿಂದ ಝೈಸ್ ಸಮೂಹಕ್ಕೆ ಜಾಗತಿಕ ಪೂರೈಕೆಗೆ ಸಹಕಾರವಾಗುತ್ತದೆ. ಭವಿಷ್ಯದಲ್ಲಿ ಉತ್ಪಾದನೆಯ ಸುಮಾರು 60 ಪ್ರತಿಶತವನ್ನು ರಫ್ತಿಗೆ ಮೀಸಲಿಡಲಿದ್ದೇವೆ. ಬೆಂಗಳೂರಿನಿಂದ ಯುರೋಪ್, ಜರ್ಮನಿ, ಇಲ್ಲವೇ ಇಟಲಿಗೆ ಕಡಿಮೆ ಅವಧಿಯಲ್ಲಿ ಕಳಹಿಸಲಬಹುದಾಗಿದೆ.
ಆಪ್ಟಿಕಲ್ ಲೆನ್ಸ್‌ಗಳ ಉತ್ಪಾದನೆ ಹೊರತಾಗಿ ಝೈಸ್ ನೂತನ ಸ್ಥಾವರವು ವೈದ್ಯಕೀಯ ತಂತ್ರಜ್ಞಾನ ಅಥವಾ ಸಂಶೋಧನಾ ಸೂಕ್ಷ್ಮದರ್ಶಕದಂತಹ ಇತರೆ ವ್ಯವಹಾರಗಳನ್ನು ಇಲ್ಲಿ ಮಾಡಲಿದೆ. ಕನ್ನಡಕ ಗಾಜುಗಳು ಮತ್ತು ಪ್ರಿಸ್ಕ್ರಿಪ್ಷನ್ ಲೆನ್ಸ್‌ಗಳು, ವೈದ್ಯಕೀಯ ತಂತ್ರಜ್ಞಾನ, ಕೈಗಾರಿಕಾ ಗುಣಮಟ್ಟದ ಪರಿಹಾರಗಳ ಸಂಶೋಧನಾ ಸೂಕ್ಷ್ಮದರ್ಶಕ ಮತ್ತು ಗ್ರಾಹಕ ಉತ್ಪನ್ನಗಳಾದ ಸ್ಪೋರ್ಟ್ ಆಪ್ಟಿಕ್ಸ್, ಬೈನಾಕ್ಯುಲರ್‌ಗಳು ಮತ್ತು ಸಿನಿಮಾ ಲೆನ್ಸ್‌ಗಳನ್ನು ಸಹ ನಾವು ತಯಾರಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications