• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೂನ್ 1 ರಿಂದ ಮಸೀದಿಯಲ್ಲಿ ನಮಾಜ್‌ಗೂ ಅವಕಾಶ ಮಾಡಿಕೊಡಿ: ಜಮೀರ್

|

ಬೆಂಗಳೂರು, ಮೇ 27: ಕೊರೊನಾವೈರಸ್ ಶಂಕಿತರನ್ನು ಕ್ವಾರಂಟೈನ್ ವಿಚಾರದಲ್ಲಿ ಮೇಲಿನ ಹಲ್ಲೆಯನ್ನು ಸಮರ್ಥಿಸಿಕೊಂಡು ವಿವಾದಕ್ಕೀಡಾಗಿದ್ದ ಶಾಸಕ ಜಮೀರ್ ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಕೊರೊನಾ ವೈರಸ್ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಬೆಂಗಳೂರಿನ ಪಾದರಾಯನಪುರಕ್ಕೆ ಪೊಲೀಸರು ಬಂದಾಗ ಅವರ ಮೇಲೆಯೆ ಹಲ್ಲೆ ಮಾಡಲಾಗಿತ್ತು. ಅದನ್ನು ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಸಮರ್ಥಿಸಿಕೊಂಡಿದ್ದರು.

ಈಗ ಜೂನ್ ತಿಂಗಳಿನಿಂದ ದೇವಸ್ಥಾನಗಳ ಬಾಗಿಲು ತೆರೆಯಲು ಸರ್ಕಾರ ಮುಂದಾಗಿದೆ. ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ರಾಜ್ಯದ 35 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಭಕ್ತರಿಗೆ ತೆರೆಯಲು ತೀರ್ಮಾನ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಸಾಮೂಹಿಕ ನಮಾಜ್‌ಗೆ ಅವಕಾಶ ಕೊಡಿ: ಸಿಎಂ ಬಿಎಸ್‌ವೈಗೆ ಸಿ.ಎಂ. ಇಬ್ರಾಹಿಂ ಪತ್ರ!ಸಾಮೂಹಿಕ ನಮಾಜ್‌ಗೆ ಅವಕಾಶ ಕೊಡಿ: ಸಿಎಂ ಬಿಎಸ್‌ವೈಗೆ ಸಿ.ಎಂ. ಇಬ್ರಾಹಿಂ ಪತ್ರ!

ಜೂನ್ 1, 2020 ರಿಂದ ರಾಜ್ಯದ ಎಲ್ಲ ದೇವಸ್ಥಾನಗಳನ್ನು ತೆರೆಯುವ ಮುಜರಾಯಿ ಇಲಾಖೆ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಂಡಿರುವುದು ಸ್ವಾಗತಾರ್ಹ. ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಮಂದಿರ, ಮಸೀದಿ, ಚರ್ಚ್‌ ಹಾಗೂ ಗುರುದ್ವಾರಗಳನ್ನು ಬಂದ್ ಮಾಡಲಾಗಿತ್ತು. ಇದೀಗ ದೇವಸ್ಥಾನಗಳ ಬಾಗಿಲು ತೆರೆಯುವುದರೊಂದಿಗೆ ಮಸೀದಿ, ಚರ್ಚ್‌ ಹಾಗೂ ಗುರುದ್ವಾರಗಳಲ್ಲಿಯೂ ಪ್ರಾರ್ಥನೆಗೆ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಜಮೀರ್ ಅಹಮ್ಮದ್ ವಿನಂತಿಸಿದ್ದಾರೆ.

English summary
MLA Zameer Ahmad Khan has written to CM Yediyurappa to allow muslims to pray in mosques.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X