ಇಂದು ವೈಎಸ್‌ವಿ ದತ್ತ ಎಸ್‌ಎಸ್‌ಎಲ್‌ಸಿ ಪಾಠದ ಕೊನೆಯ ಕ್ಲಾಸ್
ಚಿಕ್ಕಮಗಳೂರು, ಜೂನ್ 11: ಮಾಜಿ ಶಾಸಕ ವೈಎಸ್‌ವಿ ದತ್ತ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇದು ರಾಜ್ಯಾದ್ಯಂತ ದೊಡ್ಡ ಜನಪ್ರಿಯತೆ ಪಡೆದಿದೆ.
Recommended Video
ಆದರೆ, ಇಂದು ವೈಎಸ್‌ವಿ ದತ್ತ ಕೊನೆಯ ಕ್ಲಾಸ್ ನಡೆಯಲಿದೆ. ಫೇಸ್ಬುಕ್ ಲೈವ್ ಪಾಠ ಇಂದು ಸಂಜೆ 7ಕ್ಕೆ ಗಂಟೆಯ ಲೈವ್ ಮೂಲಕ ಮುಗಿಯುತ್ತದೆ. ಮೇ 6 ರಿಂದ ತರಗತಿಗಳು ಶುರು ಆಗಿತ್ತು. ಇಂದು ಅಂತಿಮ ತರಗತಿ ನಡೆಯುತ್ತಿದೆ. ಸಂಜೆ 7 ರ ಫೇಸ್ಬುಕ್ ಲೈವ್ ನಲ್ಲಿ ತಪ್ಪದೇ ಭಾಗವಹಿಸಿ ಎಂದು ವೈಎಸ್‌ವಿ ದತ್ತ ತಿಳಿಸಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಲೈವ್ ನಲ್ಲಿ ಬರೆದುಕೊಂಡಿರುವ ದತ್ತ ''ಈ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಕ್ಕಳು ಫೇಸ್ ಬುಕ್ ಲೈವ್ ಪಾಠ ನೋಡುವುದರ ಮೂಲಕ ನನ್ನನ್ನು ರಾಜಕೀಯ ವ್ಯಕ್ತಿಯಾಗಿ ಗುರುತಿಸದೆ ಪಾಠದ ಮೇಷ್ಟ್ರಾಗಿ ಗುರುತಿಸಿ ಹಲವಾರು ಹಳ್ಳಿಗಳಿಂದ ಕರೆ ಮಾಡಿ ಪಾಠದ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ.ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮದ ಅನೇಕ ಮಕ್ಕಳು ದಿನ ನನಗೆ ಕರೆ ಮಾಡುತ್ತಾರೆ. ಅವರ ಪೋಷಕರು ಸಹ ರಾಜಕೀಯದ ಮಧ್ಯೆ ಇದನ್ನು ಬಿಡದೆ ಮುಂದುವರಿಸಿ ಸಾರ್ ಎಂದು ಕೇಳಿಕೊಳ್ಳುತ್ತಿದ್ದಾರೆ.'' ಎಂದಿದ್ದಾರೆ.

''ಅಷ್ಟರ ಮಟ್ಟಿಗೆ ಈ ಫೇಸ್ ಬುಕ್ ಲೈವ್ ಪಾಠ ಸಾರ್ಥಕವಾಗಿದೆ ಎಂದು ಭಾವಿಸುತ್ತೇನೆ. ಮುಂಬರುವ ದಿನಗಳಲ್ಲಿ ನಾನು ಯಾವ ರೀತಿ ರಾಜಕೀಯ ಕೆಲಸ ಕಾರ್ಯಗಳ ನಡುವೆ ಪಾಠ ಮಾಡುವ ಮೇಷ್ಟ್ರಾಗಿ ತೊಡಗಿಸಿಕೊಳ್ಳಬೇಕೆಂಬುದರ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲಿದ್ದೇನೆ. ನಿಮ್ಮ ಸಲಹೆ ಅಭಿಪ್ರಾಯಗಳನ್ನು ನಿರೀಕ್ಷಿಸುತ್ತಿದ್ದೇನೆ.'' ಎಂದು ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾ ಲಾಕ್‌ಡೌನ್‌ನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಂದಕ್ಕೆ ಹೋಗಿತ್ತು. ಹೀಗಾಗಿ, ವೈಎಸ್‌ವಿ ದತ್ತ ಫೇಸ್‌ಬುಕ್ ಲೈವ್‌ನಲ್ಲಿ ಪುನರ್ಮನನ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.












Click it and Unblock the Notifications