ಹಣಕ್ಕಾಗಿ ಅಪಹರಿಸಿ ಬ್ಲಾಕ್ ಮೇಲ್: ಯುಟ್ಯೂಬ್ ಚಾನೆಲ್ ವರದಿಗಾರ ಸೇರಿ 6 ಜನ ಅಂದರ್!

ಬೆಂಗಳೂರು, ಆ. 26: ಆಹಾರ ತಯಾರಿಕೆ ಸಂಸ್ಥೆಯ ಇಬ್ಬರು ಸಿಬ್ಬಂದಿಯನ್ನು ಅಪಹರಣ ಮಾಡಿ 20 ಲಕ್ಷ ರೂ. ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದ ಯು ಟ್ಯೂಬ್ ಚಾನೆಲ್ ವರದಿಗಾರ ಸೇರಿದಂತೆ ಆರು ಅಪಹರಣಕಾರರನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ರೌಡಿ ಶೀಟರ್ ಕುಳ್ಳಿ ರಮೇಶ್, ಯು ಟ್ಯೂಬ್ ಚಾನೆಲ್ ವರದಿಗಾರ ಸಂತೋಷ್, ದುರ್ಗೇಶ, ಹರೀಶ್, ಅರವಿಂದ್ ಹಾಗೂ ವಿವೇಕ್ ಬಂಧಿತ ಅರೋಪಿಗಳು. ಕಳೆದ ಮೂರು ದಿನಗಳ ಹಿಂದೆ ಸಾಯಿ ಫುಡ್ ಪ್ರೈ. ಲಿಮಿಟೆಡ್‌ನ ಇಬ್ಬರು ಸಿಬ್ಬಂದಿ ಚಲಿಸುತ್ತಿದ್ದ ವಾಹನ ಅಡ್ಡಗಟ್ಟಿ ಅವರದ್ದೇ ಕಾರಿನಲ್ಲಿ ಅಪಹರಣ ಮಾಡಿದ್ದರು. ಇಬ್ಬರನ್ನು ಬಿಡುಗಡೆ ಮಾಡಬೇಕಾದರೆ 20 ಲಕ್ಷ ರೂ. ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಇಬ್ಬರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಸಾಯಿ ಫುಡ್‌ನ ಮಾಲೀಕರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಸತತ ಮೂರು ದಿನದಿಂದ ಕಾರ್ಯಾಚರಣೆ ನಡೆಸಿದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಅರು ಆರೋಪಿಗಳನ್ನು ಬಂಧಿಸಿ ಇಬ್ಬರನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರಿಗೆ ದೂರು ನೀಡಿರುವ ವಿಷಯ ತಿಳಿದಂತೆ ಅಪಹರಣ ಮಾಡಿದ್ದ ಇಬ್ಬರು ಸಿಬ್ಬಂದಿಯನ್ನು ವಾಹನ ಸಮೇತ ಬಿಟ್ಟು ಪರಾರಿಯಾಗಿದ್ದಾರೆ.

Bengaluru : YouTube channel reporter and other five arrested in Kidnap case

ಮೀಡಿಯಾ ಹೆಸರಿನಲ್ಲಿ ದಾಳಿ:

ಕೆಲ ದಿನಗಳ ಹಿಂದೆ ಯು ಟ್ಯೂಬ್ ಚಾನೆಲ್ ವರದಿಗಾರ ಸಂತೋಷ್ ಮತ್ತು ಟೀಂ ಸಾಯಿ ಫುಡ್ ಪ್ರೈ. ಲಿ. ತಯಾರಿಸುತ್ತಿದ್ದ ಆಹಾರ ಪದಾರ್ಥಗಳ ಗೋಡನ್ ಗೆ ನುಗ್ಗಿತ್ತು. ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದೀರಾ ಎಂದು ಬೆದರಿಕೆ ಹಾಕಿದ್ದರು. ಹಣ ಕೊಡದಿದ್ದರೆ ನಿಮ್ಮ ಅಕ್ರಮವನ್ನು ಯು ಟ್ಯೂಬ್‌ಗೆ ಹಾಕುವುದಾಗಿ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದ್ದರು. ಅವಧಿ ಮುಗಿದ ಆಹಾರ ಪದಾರ್ಥಗಳು ಸಿಗದ ಕಾರಣ ಹಣ ವಸೂಲಿಗೆ ಯತ್ನಿಸಿ ವಾಪಸು ಬಂದಿದ್ದರು. ಈ ಘಟನೆ ನೀಡಿದ ಸುಳಿವಿನ ಮೇರೆಗೆ ಯು ಟ್ಯೂಬ್ ಚಾನೆಲ್ ವರದಿಗಾರನ ಬೆನ್ನಟ್ಟಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಯಿ ಫುಡ್ ಪ್ರೈ. ಲಿಮಿಟೆಡ್ ಮೇಲೆ ಮೀಡಿಯಾ ಹೆಸರು ಹೇಳಿಕೊಂಡು ಮೊದಲು ದಾಳಿ ಮಾಡಿದ್ದಾರೆ. ಅಲ್ಲಿ ಯಾವುದೇ ಅವಧಿ ಮುಗಿದ ಪದಾರ್ಥ ಸಿಗದ ಹಿನ್ನೆಲೆಯಲ್ಲಿ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ. ಇದರಿಂದ ವಿಫಲಗೊಂಡ ತಂಡ ರೌಡಿ ಕುಳ್ಳಿ ರಮೇಶ್ ಜತೆ ಗೂಡಿ ಎಲ್ಲರೂ ಸಿಬ್ಬಂದಿಯನ್ನು ಅಪಹರಿಸಲು ಪ್ಲಾನ್ ರೂಪಿಸಿದ್ದಾರೆ. ಅದರಂತೆ ವಾಹನದಲ್ಲಿ ಹೋಗುವಾಗ ಅಡ್ಡಗಟ್ಟಿ ಅವರದ್ದೇ ವಾಹನದಲ್ಲಿ ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆರೋಪಿಗಳ ಈ ಹಿಂದಿನ ಘಟನೆಯ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರು ತಿಳಿಸಿದ್ದಾರೆ.

Recommended Video

      ಚಿಕ್ಕಬಳ್ಳಾಪುರ: ಧಾರಾಕಾರ ಮಳೆ ಹಿನ್ನೆಲೆ ನಂದಿ ಗಿರಿಧಾಮದಲ್ಲಿ ಗುಡ್ಡ ಕುಸಿತ, ರಸ್ತೆ ಸಂಚಾರ ಬಂದ್ | Oneindia Kannada

      ಬಂಧಿತ ಆರೋಪಿಗಳು ಕೆಲವರಿಗೆ ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಅರು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಯು ಟ್ಯೂಬ್ ಚಾನೆಲ್ ಹೆಸರಿನಲ್ಲಿ ಹಲವರಿಗೆ ಹೆದರಿಸಿರುವ ಪ್ರಕರಣ ಬೆಳಕಿಗೆ ಬಂದಲ್ಲಿ ಆ ಸಂಬಂಧ ಕೇಸು ದಾಖಲಿಸಿ ತನಿಖೆ ನಡೆಸಲಾಗುವುದು. ರೌಡಿ ಶೀಟರ್ ಕುಳ್ಳಿ ರಮೇಶ್ ವಿರುದ್ಧ ಈಗಾಗಲೇ ಹಲವಾರು ಅಪರಾಧ ಪ್ರಕರಣ ದಾಖಲಾಗಿದ್ದು, ಎಲ್ಲಾ ಪ್ರಕರಣಗಳ ವಿವರ ಕಲೆ ಹಾಕಲಾಗುತ್ತಿದೆ. ಹೆಚ್ಚಿನ ಪ್ರಕರಣ ಬೆಳಕಿಗೆ ಬಂದರೆ ಆ ಸಂಬಂಧ ಕೇಸು ದಾಖಲಿಸಲಾಗುವುದು ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+