• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಂದಿ ಬೆಟ್ಟದ ತಪ್ಪಲಿನಲ್ಲಿ ಜೂನ್ 09ರಂದು ಯೋಗಿ ರನ್!

|

ಬೆಂಗಳೂರು, ಮೇ 30: ನಮ್ಮ ನಿಮ್ಮ ಸೈಕಲ್ ಫೌಂಡೇಶನ್, ಬೆಂಗಳೂರಿನಲ್ಲಿರುವ ಸಂಸ್ಥೆ ಸಮುದಾಯಗಳೊಂದಿಗೆ ಸುಸ್ಥಿರ ಬದುಕನ್ನು ಕಟ್ಟುವ ನಿಟ್ಟಿನಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದೆ. ಈಗ ಹೊಸ ಪ್ರಯೋಗವನ್ನು ಮಾಡುವ ಹೆಜ್ಜೆಯಿಟ್ಟೂ ಯೋಗಿ ರನ್ ಯೆಂಬ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ. ಭಾರತೀಯ ಪುರಾತತ್ವ ಇಲಾಖೆಯ ಮತ್ತು ಇಂದಿರಾ ಗಾಂಧಿ ರಾಷ್ಟ್ರಿಯ ಕಲಾ ಸಂಸ್ಥೆಯ ಸಹಭಾಗಿತ್ತ್ವದಲ್ಲಿ ಯೋಗ, ಸಂಗೀತ ಮತ್ತು ಶಿಲ್ಪಕಲೆಯ ಸಂಗಮವಾದ ಭೋಗ ನಂದೀಶ್ವರ ದೇವಸ್ಥಾನದಲ್ಲಿ ಜೂನ್ 9 2019 ರಂದು ಯೋಗಿ ರನ್ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಿಂದ ಭಾರತೀಯ ಸಂಸ್ಕೃತಿಯ ನಾದ, ಶಿಲ್ಪಕಲೆ, ಓಟದ ಕ್ರೀಡೆ, ದೇಶಿಯ ತಿನಿಸು ಮತ್ತು ಪರಿಸರದ ಸೌಂದರ್ಯವನ್ನು ಸವಿಯಲು ನಂದಿ ಬೆಟ್ಟ ಸೂಕ್ತವಾದ ಸ್ಥಳ. ನಂದಿ ಬೆಟ್ಟದ ತಪ್ಪಲಿನಲ್ಲಿರುವ ಭೋಗ ನಂದಿಶ್ವರದಲ್ಲಿ ಮೊದಲ ಹಂತದಲ್ಲಿ ಯೋಗಿ ರನ್ ಚಾಲನೆಯಾಗಲಿದೆ, ನಂತರ ಕರ್ನಾಟಕದ ಇತರೆ ಭಾಗದಲ್ಲಿ ಆಯೋಜಿಸುವ ಯೋಜನೆಯಿದೆ.

"ಯೋಗಿ ರನ್ ಒಂದು ವಿಶೇಷ ಕಾರ್ಯಕ್ರಮ, ಇಲ್ಲಿ ಯೋಗದೊಂದಿಗೆ ಕ್ರೀಡೆಯ ಸಂಯೋಗವಿದೆ. ಸಂಸ್ಕೃತಿಯೊಡನೆ ಆಧುನಿಕತೆಯ ಸಂಗಮವಿದೆ. ನಾದ ಮತ್ತು ತಾಳದೊಂದಿಗೆ ಓಟದ ಸಮ್ಮಿಲನವಿದೆ. ಪ್ರವಾಸೋದ್ಯಮದೊಂದಿಗೆ ಜವಬ್ದಾರಿಯ ಹೆಜ್ಜೆಯಿಡುವ ದೃಷ್ಠಿಯಿದೆ. ಇದು ನಮ್ಮ ನಾಡಿನ ಭವ್ಯತೆ ಮತ್ತು ದಿವ್ಯತೆಯನ್ನು ಜನರ ಹೃದಯ ತಲುಪಿಸಲು ಕೈಕೊಂಡಿರುವ ಕಾರ್ಯಕ್ರಮ. "ಎಂದು ಮುರಳಿ ಎಚ್ . ಆರ್. ನಮ್ಮ ನಿಮ್ಮ ಸೈಕಲ್ ಫೌಂಡೇಶನ್ ಮುಖ್ಯ ನಿರ್ದೇಶಕರು ತಿಳಿಸಿದರು.

ಭಾರತೀಯ ಪುರಾತತ್ವ ಇಲಾಖೆ ನಿರ್ದೇಶಕಿ ಕೆ.ಮೂರ್ತೇಶ್ವರಿ

ಭಾರತೀಯ ಪುರಾತತ್ವ ಇಲಾಖೆ ನಿರ್ದೇಶಕಿ ಕೆ.ಮೂರ್ತೇಶ್ವರಿ

ಭಾರತೀಯ ಪುರಾತತ್ವ ಇಲಾಖೆ ನಿರ್ದೇಶಕಿ ಕೆ.ಮೂರ್ತೇಶ್ವರಿ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ, "ಯುವ ಜನಾಂಗ ಭಾರತೀಯ ಗುಡಿಗಳ ವೈಭವದೊಂದಿಗೆ ಶಿಲ್ಪ ಕಲಾಕೃತಿಯ ದರ್ಶನವನ್ನು ಪಡೆಯಬಹುದು. ನಮ್ಮ ಇಲ್ಲಾಖೆ ಹಲವಾರು ವರ್ಷಗಳಿಂದ ನಮ್ಮ ದೇವಸ್ಥಾನಗಳನ್ನು ಉಳಿಸಲು ಪ್ರಯತ್ನ ನಡೆಸುತ್ತಿದೆ. ಇಂತಹ ಕಾರ್ಯಕ್ರಮ ಜನರಿಗೆ ನಮ್ಮ ಹಳೆಯ ಶಿಲ್ಪಕೇಂದ್ರಿತ ದೇವಸ್ಥಾನಗಳನ್ನು ಜನರು ಆಸ್ವಾದಿಸುವಂತೆ ಮಾಡುತ್ತದೆ.

ಸಂಗೀತ ಮತ್ತು ಓಟದ ಸಂಯೋಜನೆಯ ಪ್ರಯೋಗ

ಸಂಗೀತ ಮತ್ತು ಓಟದ ಸಂಯೋಜನೆಯ ಪ್ರಯೋಗ

"ಕರ್ನಾಟಕ ಸಂಗೀತದ ವಿವಿಧ ರಾಗಗಳು ದಿನದ ವಿಶೇಷ ಸಮಯದಲ್ಲಿ ಕೇಳಿದರೆ ಆರೋಗ್ಯ ಸುಧಾರಿಸುವುದಲ್ಲದೆ ಮನಸ್ಸಿಗೆ ಹರ್ಷೋಲ್ಲಾಸ ವನ್ನು ಕೊಡುತ್ತದೆ ಎನ್ನುವುದು ಸಂಗಶೋಧನೆಯಿಂದ ಧೃಡವಾಗಿದೆ , ಈ ನಿಟ್ಟಿನಲ್ಲಿ ಸಂಗೀತ ಮತ್ತು ಕ್ರೀಡೆಯನ್ನು ಸಂಯೋಜಿಸುವ ನವೀನ ಸಂಶೋಧನೆಯನ್ನು 'ರಾಗ ಲ್ಯಾಬ್ಸ್' ಮಾಡಲಿದೆ. ಯೋಗಿ ರನ್ ಮೂಲಕ ಸಂಗೀತ ಮತ್ತು ಓಟದ ಸಂಯೋಜನೆಯ ಪ್ರಯೋಗ ಮೊದಲ ಬಾರಿಗೆ ನಡೆಯಲಿದೆ." ಎಂದು ಐಜಿಎನ್ ಸಿಎ ಎಸ್ ಆರ್ ಸಿ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ದೀಪ್ತಿ ನವರತ್ನ ರವರು ತಿಳಿಸಿದರು.

ಸೈಕಲ್ ಫೌಂಡೇಶನ್ ಜೊತೆಗೆ ಹೆಜ್ಜೆಯನ್ನು ಇಟ್ಟಿದೆ

ಸೈಕಲ್ ಫೌಂಡೇಶನ್ ಜೊತೆಗೆ ಹೆಜ್ಜೆಯನ್ನು ಇಟ್ಟಿದೆ

"ಕಲಾತ್ಮಕ, ವಾಸ್ತು ಶಿಲ್ಪ, ತಾಂತ್ರಿಕ ನೈಪುಣ್ಯತೆ, ಪುರಾತನ ನಾಗರಿಕತೆಯ ಅಂಶಗಳನ್ನು ಹೊಂದಿರುವ ಸ್ಥಳಗಳಲ್ಲಿ ಯೋಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಚರಿಸುವುದರಿಂದ ರಾಜ್ಯದ ಪ್ರವಾಸೋದ್ಯಮ ತಾಣಗಳ ಆರೋಗ್ಯಕರ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಾಡಿನ ಸುಂದರ ಪರಿಸರದ ಜೊತೆಗೆ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ಕೊಡುವ ನಿಟ್ಟಿನಲ್ಲಿ ನಮ್ಮ ನಿಮ್ಮ ಸೈಕಲ್ ಫೌಂಡೇಶನ್ ಜೊತೆಗೆ ಹೆಜ್ಜೆಯನ್ನು ಇಟ್ಟಿದೆ" ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ತಿಳಿಸಿದರು.

ವಿಶೇಷ ಯೋಗಾಸನ ನಂತರ ರನ್

ವಿಶೇಷ ಯೋಗಾಸನ ನಂತರ ರನ್

ಯೋಗಿ ರನ್ ಬೆಳಿಗ್ಗೆ ಆರಕ್ಕೆ ವಿಶೇಷ ಯೋಗಾಸನಗಳನ್ನು ಮಾಡಿದ ನಂತರ ಪ್ರಾರಂಭವಾಗುತ್ತದೆ.

ಯೋಗಿ ರನ್ ಓಟ 3 ವಿಭಾಗಗಳಲ್ಲಿ ನಡೆಯಲಿದೆ.

1> ಓಪನ್ 21ಕೆ ಬೆಳಗ್ಗೆ 6.30ಕ್ಕೆ ,

2> 10ಕೆ 6.45ಕ್ಕೆ ,

3> 5ಕೆ 7:15 ಗೆ ಪ್ರಾರಂಭವಾಗಲಿದೆ.

ಸುಲ್ತಾನಪೇಟೆಯ ಮುಂಭಾಗ ಹಾದು, ಓಟಗಾರರು ಮೆಟ್ಟಿಲು ದಾರಿಯಿಂದ ನಂದಿ ಬೆಟ್ಟವನ್ನು ಹತ್ತುತ್ತಾರೆ. ಮತ್ತೆ ಬೆಟ್ಟವನ್ನು ಇಳಿದು ಭೋಗ ನಂದೀಶ್ವರದಲ್ಲಿ ಕೊನೆ ಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಮತ್ತು ವಯಸ್ಸು ಹದಿನೆಂಟು ವರ್ಷಕ್ಕಿಂತ ಕಡಿಮೆ ಇದ್ದವರು ಕೇವಲ 299 ಕೊಟ್ಟು ಪಾಲುಗೊಳ್ಳಬಹುದು. ಶೈಕ್ಷಣಿಕ ಸಂಸ್ಥೆಗಳು, ಕಂಪನಿಗಳ ಓಟದ ಕ್ಲಬ್, ನಗರದ ವಿವಿಧ ಓಟದ ಕ್ಲಬ್‍ಗಳಿಗೆ ರಿಯಾಯಿತಿಯನ್ನು ಕೊಡಲಾಗುತ್ತದೆ.

English summary
NNCF today announced its unique initiative of YOGI.RUN - an intimate, authentic and one its kind program. The debut program of YOGI.RUN will be at Bengaluru’s famed neighborhood of Nandi Hills and is scheduled for June 9, 2019 (Sunday).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X