ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುರುವಾರ ನೆಲಮಂಗಲಕ್ಕೆ ಯೋಗಿ ಆದಿತ್ಯನಾಥ್ ಆಗಮನ

|
Google Oneindia Kannada News

ಬೆಂಗಳೂರು, ಆಗಸ್ಟ್ 31; ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ನೂತನವಾಗಿ ನಿರ್ಮಾಣ ಮಾಡಿರುವ ಪ್ರಕೃತಿ ಚಿಕಿತ್ಸಾ ಕೇಂದ್ರ 'ಕ್ಷೇಮವನ' ಉದ್ಘಾಟಿಸಲಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಸ್ಥೆಯ ಘಟಕ 'ಕ್ಷೇಮವನ' ಉದ್ಘಾಟನೆಗೆ ಯೋಗಿ ಆದಿತ್ಯನಾಥ್ ಆಗಮಿಸುತ್ತಿದ್ದಾರೆ. ಸೆಪ್ಟೆಂಬರ್ 1ರ ಗುರುವಾರ 11.45ರ ಸುಮಾರಿಗೆ ಕಾರ್ಯಕ್ರಮ ನಡೆಯಲಿದೆ.

Breaking: ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವೀರೇಂದ್ರ ಹೆಗ್ಗಡೆBreaking: ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವೀರೇಂದ್ರ ಹೆಗ್ಗಡೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

 ರಾಜ್ಯಸಭೆ ಗೌರವ ಊಹೆ ಮಾಡಿರಲಿಲ್ಲ: ಡಾ. ವೀರೇಂದ್ರ ಹೆಗ್ಗಡೆ ರಾಜ್ಯಸಭೆ ಗೌರವ ಊಹೆ ಮಾಡಿರಲಿಲ್ಲ: ಡಾ. ವೀರೇಂದ್ರ ಹೆಗ್ಗಡೆ

Yogi Adityanath To Visit Nelamangala Bengaluru On September 1

ನೆಲಮಂಗಲದ ಕುಣಿಗಲ್ ಬೈಪಾಸ್ ರಸ್ತೆಯ ಸಮೀಪದ ಸಂಭ್ರಮ ಹೋಟೆಲ್ ಹತ್ತಿರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಸ್ಥೆಯ ಘಟಕ ಕ್ಷೇಮವನ ನಿರ್ಮಾಣ ಮಾಡಲಾಗಿದೆ.

ಧರ್ಮಸ್ಥಳ; ಬರಿಗಾಲಿನಲ್ಲಿ ನಡೆದ ರಾಜ್ಯಪಾಲ ಥಾವರ್ ಚಂದ್ ಧರ್ಮಸ್ಥಳ; ಬರಿಗಾಲಿನಲ್ಲಿ ನಡೆದ ರಾಜ್ಯಪಾಲ ಥಾವರ್ ಚಂದ್

ಈ ಹಿಂದೆ ಸಂಸ್ಥೆಯಿಂದ 'ಶಾಂತಿವನ', 'ಸೌಖ್ಯವನ' ನಿರ್ಮಾಣ ಮಾಡಲಾಗಿತ್ತು. 'ಕ್ಷೇಮವನ' ಸಂಸ್ಥೆಯ ಮೂರನೇ ವನವಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಹೇಳಿದ್ದಾರೆ.

20 ಎಕರೆ ಪ್ರದೇಶ; 20 ಎಕರೆ ಪ್ರದೇಶದಲ್ಲಿ ಕ್ಷೇಮವನ ನಿರ್ಮಾಣ ಮಾಡಲಾಗಿದೆ. ಪ್ರಕೃತಿ ಚಿಕಿತ್ಸಾ ಕೇಂದ್ರವಿದಾಗಿದ್ದು, ದೇಹ ಮತ್ತು ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ಸಹಾಯಕವಾಗಲಿದೆ.

Yogi Adityanath To Visit Nelamangala Bengaluru On September 1

ಪ್ರಾಚೀನ ವಸ್ತು, ಬಣ್ಣ, ವಿನ್ಯಾಸ ಮತ್ತು ಸಂರಚನೆ ಇಲ್ಲಿಯ ವಿಶೇಷತೆಯಾಗಿದೆ. ಮಹೇಶ್ ಡಿಯೋಫೋಡೆ ಈ ಕೇಂದ್ರವನ್ನು ವಿನ್ಯಾಸ ಮಾಡಿದ್ದಾರೆ. 400 ಜನರಿಗೆ ಏಕಕಾಲದಲ್ಲಿ ಶುಶ್ರೂಷೆ ನೀಡುವಂತಹ ಸೌಲಭ್ಯಗಳು ಕ್ಷೇಮವನದಲ್ಲಿವೆ.

86 ವಿಶೇಷ ಕೊಠಡಿ, ಶಯನಾರೋಗ್ಯ, ಪೌಷ್ಠಿಕ ಆಹಾರ ಸೇರಿದಂತೆ 5 ಬಗೆಯ ಶುಶ್ರೂಷೆ ವಿಧಾನಗಳಿವೆ. ನಿಸರ್ಗ ಸಹಜ ವಿಧಾನಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಯಸುವವರು ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಪೌರಾಣಿಕವಾದ ಕೂರ್ಮಾವತಾರದ ಪರಿಕಲ್ಪನೆಯಲ್ಲಿ ಈ ಕ್ಷೇಮವನದ ಕಟ್ಟಡ ವಿನ್ಯಾಸಗೊಳಿಸಲಾಗಿದೆ. ಯೋಗ, ಧ್ಯಾನ, ಹವಾನಿಯಂತ್ರಿನ ಈಜುಕೊಳ ಸೇರಿದಂತೆ ವಿವಿಧ ಸೌಲಭ್ಯಗಳು ಇಲ್ಲಿವೆ.

ಎಸ್‌ಡಿಎಂ ಸೊಸೈಟಿ ನಿರ್ದೇಶಕಿ ಶ್ರದ್ಧಾ ಮಾತನಾಡಿ, "ಶೇ 60ರಷ್ಟು ಸಾಮಾನ್ಯ ಕೊಠಡಿಗಳು ಇಲ್ಲಿವೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಯಲ್ಲಿ ಯಾವುದೇ ಭೇದಭಾವ ಇರುವುದಿಲ್ಲ" ಎಂದು ಹೇಳಿದ್ದಾರೆ.

ಮನುಷ್ಯನ ಒತ್ತಡ ನಿವಾರಣೆ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಶಾಂತಿವನ, ಸೌಖ್ಯವನದ ನಂತರ ಕ್ಷೇಮವನ ನಿರ್ಮಾಣ ಮಾಡಲಾಗಿದೆ. ಇದನ್ನು ಉದ್ಘಾಟಿಸಲು ಯೋಗಿ ಆದಿತ್ಯನಾಥ್ ಬರುತ್ತಿರುವುದು ಸಂತಸ ತಂದಿದೆ. ಅವಕಾಶ ಸಿಕ್ಕಿದರೆ ಇದೇ ಮಾದರಿಯನ್ನು ದೇಶದ ವಿವಿಧ ಕಡೆ ವಿಸ್ತರಣೆ ಮಾಡಲಾಗುತ್ತದೆ ಎಂದು ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

20 ಎಕರೆ ಪ್ರದೇಶದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ಕ್ಷೇಮನವ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರ ಉತ್ತಮ ಆರೋಗ್ಯಕ್ಕೆ ಈ ಕೇಂದ್ರ ಸಹಾಯಕವಾಗಲಿದೆ. ಡಾ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ದಿನದಂದು ನೆಲಮಂಗಲದಲ್ಲಿ ಕ್ಷೇಮವನ ನಿರ್ಮಾಣ ಮಾಡುವ ಭರವಸೆ ನೀಡಿದ್ದರು.

ಪ್ರಕೃತಿ ಚಿಕಿತ್ಸೆಯ ಜೊತೆಗೆ ಇಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗಿದೆ. ನಿರುಪಯುಕ್ತ ವಸ್ತುಗಳು, ಪುರಾತನ ದೇವಾಲಯದ ಪಳಯುಳಿಕೆಗಳನ್ನು ಬಳಸಿಕೊಂಡು ಮನಸ್ಸಿಗೆ ನೆಮ್ಮದಿ ನೀಡುವಂತಹ ಪ್ರಾಚೀನ ವಾಸ್ತು ವಿನ್ಯಾಸದಲ್ಲಿ ಸಂಗ್ರಹಾಲಯ ನಿರ್ಮಾಣ ಮಾಡಲಾಗಿದೆ.

ಈಜುಕೊಳ, ಹಿಮಾಲಯದ ಗುಹೆಗಳನ್ನು ಹೋಲುವ ಧ್ಯಾನ ಕೇಂದ್ರ, ಪಾರ್ಶ್ವವಾಯು ಆದವರಿಗೆ ನೀರಿನ ಚಿಕಿತ್ಸೆ, ಆಯಸ್ಕಾಂತ ಚಿಕಿತ್ಸೆ, ಉಸಿರಾಟದ ಚಿಕಿತ್ಸೆ ಸೇರಿದಂತೆ 25 ಬಗೆಯ ಚಿಕಿತ್ಸೆಗಳು ಈ ಆವರಣದಲ್ಲಿ ಲಭ್ಯವಿದೆ.

English summary
Uttar Pradesh chief minister Yogi Adityanath will inaugurate DharmasthalaSDME society's Kshemavana at Nelamangala Bengaluru on September 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X