ಸೈನಿಕರ ಜೊತೆ ಉರಿ ಸಿನೆಮಾ ನೋಡುವ ಸದಾವಕಾಶ, ಬೇಗ ಬುಕಿಂಗ್ ಮಾಡಿ
ಬೆಂಗಳೂರು, ಜನವರಿ 25: ಸೈನಿಕರ ಜೊತೆ 'ಉರಿ' ಸಿನೆಮಾ ನೋಡುವ ಸದಾವಕಾಶ ನಿಮ್ಮದಾಗಲಿದೆ. ಬೆಳ್ಳಂದೂರು ಪಿವಿಆರ್ ಸೆಂಟ್ರಲ್ ಮಾಲ್‌ನಲ್ಲಿ ಜನವರಿ 27ರಂದು ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.
ಇತ್ತೀಚೆಗೆ ಬಾಲಿವುಡ್‌ನಲ್ಲಿ ಸದ್ದು ಮಾಡಿರುವ ಉರಿ ಚಿತ್ರ ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆಯೊಂದನ್ನು ಮಾಡಲಾಗಿದೆ. ಸೇನೆಯ ಮಾಜಿ ಸೈನಿಕರ ಜೊತೆ ಉರಿ ಚಿತ್ರವನ್ನು ನೋಡುವಂತಹ ಅವಕಾಶವನ್ನು ಸೃಷ್ಟಿಸಲಾಗುತ್ತಿದೆ.
ಜನವರಿ 27ರಂದು ಭಾನುವಾರ ಮಧ್ಯಾಹ್ನ 12.50ಕ್ಕೆ ಬೆಳ್ಳಂದೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಈ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಕುರಿತು ಇರುವ ಈ ಚಿತ್ರದಲ್ಲಿ ಸೈನಿಕರ ಜೊತೆ ಸಿನಿಮಾ ನೋಡುವ ಅವಕಾಶ ಕಲ್ಪಿಸಲಾಗಿದೆ.

ಚಿತ್ರ ರಸಿಕರು ಬುಕ್ ಮೈ ಶೋ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ. ಆದಷ್ಟು ಬೇಗ ಬುಕಿಂಗ್ ಮಾಡಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.












Click it and Unblock the Notifications