ನಿಮ್ಮ ಕಾಲಿಗೆ ಬೀಳ್ತೀನಿ, ನನ್ನನ್ನು ಗೆಲ್ಲಿಸಿ: ಮತ್ತೆ ಮತ್ತೆ ಸೋತರೆ ತಡೆದುಕೊಳ್ಳುವ ಶಕ್ತಿ ನನಗಿಲ್ಲ

ಬೆಂಗಳೂರು, ನ 30: ಬೆಂಗಳೂರು ನಗರ ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ, ಕಣ್ಣೀರು ಇಟ್ಟು ಮತಯಾಚನೆ ಮಾಡಿದ್ದಾರೆ. ಅವರು ಕಣ್ಣೀರು ಇಟ್ಟು ಪ್ರಚಾರ ಮಾಡಿದಾಗ, ಪಕ್ಕದಲ್ಲಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೊತೆಗಿದ್ದರು.

"ನಾನು ನಿಮ್ಮ ಕಾಲಿಗೆ ಬೀಳ್ತೀನಿ, ಇದು ಒಂದು ಸಲ ನನಗೆ ಆಶೀರ್ವಾದ ಮಾಡಿ, ನನ್ನನ್ನು ಗೆಲ್ಲಿಸಿ. ನಿಮ್ಮ ಖುಣವನ್ನು ಯಾವತ್ತೂ ಮರೆಯುವುದಿಲ್ಲ" ಎಂದು ಜವರಾಯಿಗೌಡ, ಪ್ರಚಾರ ಸಭೆಯಲ್ಲಿ ಮತಯಾಚಿಸಿದ್ದಾರೆ.

"ಈಗಾಗಲೇ ಒಂದು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ಮತ್ತೆ, ಸೋತರೆ ಅದನ್ನು ತಡೆದುಕೊಳ್ಳುವ ಶಕ್ತಿ ನನ್ನಲಿಲ್ಲ. ಹಾಗಾಗಿ, ನನ್ನನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು" ಎಂದು ಜವರಾಯಿಗೌಡ್ರು ಮನವಿ ಮಾಡಿದ್ದಾರೆ.

Yeshwanthpur JDS Candidate Javarayi Gowda Shed Tears During Election Campaign

"ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇನೆ, ನನಗಾದರೂ ದುಡ್ಡು ಎಲ್ಲಿಂದ ಬರಬೇಕು. ಹಣದಾಸೆಗೆ ಬಿದ್ದು ಬಿಜೆಪಿ ಅಭ್ಯರ್ಥಿ, ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಅವರನ್ನು ಸೋಲಿಸಲೇ ಬೇಕು" ಎಂದು ಜವರಾಯಿಗೌಡ್ರು, ಕೈಮುಗಿದು ಮತದಾರರಲ್ಲಿ ಪ್ರಾರ್ಥಿಸಿದ್ದಾರೆ.

"ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಇರಾದೆ ನನಗಿರಲಿಲ್ಲ. ಕುಮಾರಣ್ಣ ಮತ್ತು ದೇವೇಗೌಡ್ರು, ಇಲೆಕ್ಷನ್ ಗೆ ನಿಲ್ಲಲೇ ಬೇಕೆಂದು ಸೂಚಿಸಿದ್ದರಿಂದ, ಸ್ಪರ್ಧಿಸುತ್ತಿದ್ದೇನೆ" ಎಂದು ಜವರಾಯಿಗೌಡ್ರು ಹೇಳಿದ್ದಾರೆ.

ಜವರಾಯಿಗೌಡ್ರು, ಚುನಾವಣಾ ಪ್ರಚಾರ ಸಭೆಯಲ್ಲಿ ಕಣ್ಣೀರು ಹಾಕುತ್ತಿರುವುದು ಇದು ಎರಡನೇ ಬಾರಿ. ಎರಡು ದಿನಗಳ ಹಿಂದೆಯೂ, ಕಣ್ಣೀರಿಡುತ್ತಾ, ಮತಯಾಚನೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+