• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಶವಂತಪುರ; ಬಿಜೆಪಿಯ ಸೋಮಶೇಖರ್‌ಗೆ ಜಯ

|

ಬೆಂಗಳೂರು, ಡಿಸೆಂಬರ್ 9 : ಬಿಜೆಪಿ ಮತ್ತು ಜೆಡಿಎಸ್ ನಡುವಿನ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದ್ದ ಕ್ಷೇತ್ರ ಯಶವಂತಪುರ. ಬಿಜೆಪಿಯ ಎಸ್. ಟಿ. ಸೋಮಶೇಖರ್ ಮತ್ತು ಜೆಡಿಎಸ್‌ನ ಟಿ. ಎನ್. ಜವರಾಯಿ ಗೌಡ ನಡುವೆ ಹಣಾಹಣಿ ನಡೆದಿದ್ದು, ಎಸ್. ಟಿ. ಸೋಮಶೇಖರ್ ಗೆಲುವು ದಾಖಲಿಸಿದರು.

15 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರದ ವ್ಯಾಪ್ತಿಗೆ ಸೇರುವ ಯಶವಂತಪುರವೂ ಒಂದು. ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿರುವ ದೊಡ್ಡ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು.

ಹಣದ ಬದಲಿಗೆ ಸ್ವಾಭಿಮಾನಕ್ಕೆ ಮತ ನೀಡಿದ ಹೊಸಕೋಟೆ ಮತದಾರರುಹಣದ ಬದಲಿಗೆ ಸ್ವಾಭಿಮಾನಕ್ಕೆ ಮತ ನೀಡಿದ ಹೊಸಕೋಟೆ ಮತದಾರರು

ಡಿಸೆಂಬರ್ 5ರಂದು ನಡೆದ ಚುನಾವಣೆಯಲ್ಲಿ 59.10ಯಷ್ಟು ಮತದಾನವಾಗಿತ್ತು. ಬಿಜೆಪಿಯ ಎಸ್‌. ಟಿ. ಸೋಮಶೇಖರ್ ಮತ್ತು ಜೆಡಿಎಸ್‌ನ ಟಿ. ಎನ್. ಜವರಾಯಿ ಗೌಡ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿತು. ಕಳೆದ ಚುನಾವಣೆಯಲ್ಲಿ ಸೋತಿದ್ದ ಜವರಾಯಿ ಗೌಡ ಈ ಬಾರಿಯೂ ಪ್ರಬಲ ಪೈಪೋಟಿ ನೀಡಿದರು.

17 ಅನರ್ಹ ಶಾಸಕರಲ್ಲಿ ಉಪ ಚುನಾವಣೆ ಗೆದ್ದವರು, ಸೋತವರು17 ಅನರ್ಹ ಶಾಸಕರಲ್ಲಿ ಉಪ ಚುನಾವಣೆ ಗೆದ್ದವರು, ಸೋತವರು

ಅಂತಿಮವಾಗಿ ಎಸ್. ಟಿ. ಸೋಮಶೇಖರ್ 1,44,722 ಮತಗಳನ್ನು ಪಡೆದು ಜಯಗಳಿಸಿದರು. ಪ್ರಬಲ ಪೈಪೋಟಿ ನೀಡಿದ ಜೆಡಿಎಸ್‌ನ ಟಿ. ಎನ್. ಜವರಾಯಿ ಗೌಡ 1,17,023 ಮತಗಳನ್ನು ಪಡೆದರು.

ಉಪ ಚುನಾವಣೆ ಫಲಿತಾಂಶ; ಕರ್ನಾಟಕ ವಿಧಾನಸಭೆ ಬಲಾಬಲಉಪ ಚುನಾವಣೆ ಫಲಿತಾಂಶ; ಕರ್ನಾಟಕ ವಿಧಾನಸಭೆ ಬಲಾಬಲ

2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಎಸ್. ಟಿ. ಸೋಮಶೇಖರ್ ಈ ಬಾರಿ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಮತದಾರರು ಪುನಃ ಅವರಿಗೆ ಬೆಂಬಲ ನೀಡಿದ್ದು, ಗೆಲುವು ದಾಖಲಿಸಿದರು.

ಯಶವಂತಪುರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆದ ಮತಗಳು

* ಎಸ್. ಟಿ. ಸೋಮವಶೇಖರ್ (ಬಿಜೆಪಿ) : 1,44,722

* ಪಾಳ್ಯ ನಾಗರಾಜ್ (ಕಾಂಗ್ರೆಸ್) : 15,714

* ಟಿ. ಎನ್. ಜವರಾಯಿ ಗೌಡ : 1,17,023

English summary
Know everything about Yeshwanthpur assembly constituency By election results. candidates list, vote share and more details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X