ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆಯಲಿರುವ ಬಿ.ಎಸ್. ಯಡಿಯೂರಪ್ಪ!

|
Google Oneindia Kannada News

ಬೆಂಗಳೂರು, ಮಾ. 12: ಮಾರ್ಚ್ 1 ರಿಂದ ದೇಶದಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗಿದೆ. ಕೋವಿಡ್ ಲಸಿಕೆ ಕುರಿತು ಇರುವ ತಪ್ಪು ಕಲ್ಪನೆ ಹಾಗೂ ಆತಂಕವನ್ನು ನಿವಾರಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಅಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಆ ಮೂಲಕ ಜನ ಸಾಮಾನ್ಯರಲ್ಲಿನ ಅನಗತ್ಯ ಆತಂಕ ದೂರು ಮಾಡಿದ್ದರು.

ಅದಾದ ಬಳಿಕ ಕೇಂದ್ರ ಬಿಜೆಪಿ ತನ್ನ ಎಲ್ಲ ಸಂಸದರು ಹಾಗೂ ಶಾಸಕರಿಗೆ ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಸೂಚಿಸಿದೆ ಎಂಬ ಮಾಹಿತಿಯಿದೆ. ಅದೇನೆ ಇದ್ದರೂ ಇತ್ತೀಚೆಗೆ ಕೊವಿಡ್ ಲಸಿಕೆಯನ್ನು ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಇಡೀ ದೇಶಾದ್ಯಂತ ಸುಮಾರು 2.5 ಕೋಟಿಗೂ ಹೆಚ್ಚು ಜನರಿಗೆ ಕೊವೀಡ್ ಲಸಿಕೆ ಹಾಕಲಾಗಿದೆ.

Yediyurappa will take Covid vaccine at Victoria Hospital in Bengaluru

ಇದೇ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಲಸಿಕೆ ಪಡೆಯುವ ಮಾಹಿತಿ ಬಂದಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿನ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ ಆಸ್ಪತ್ರೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೋವಿಡ್ ಲಸಿಕೆ ಪಡೆಯಲಿದ್ದು, ಆ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿಯಿದೆ.

English summary
CM Yediyurappa will be taking Covid vaccine at the Pradhan Mantri Swasthya Suraksha Yojana Hospital in Victoria Hospital premises in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X