ಗೂಟದ ಕಾರು- ಬೆಂಗಾವಲು ವಾಪಸ್ ಕೊಡಿ: ಯಡಿಯೂರಪ್ಪ

Karnataka ex CM BS Yeddyurappa writes to Home Minister seeking Z plus security,
ಬೆಂಗಳೂರು, ನ.13: ಚುನಾವಣೆ ಹೊಸ್ತಿಲಲ್ಲಿ ನಾನಾ ನೆಪಗಳನ್ನೊಡ್ಡಿ ರಾಜಕೀಯ ನಾಯಕರು ಸರಕಾರಿ ಭದ್ರತೆ ಪಡೆಯುವುದು ಚರ್ಚೆಗೆ ಗ್ರಾಸವಾಗುತ್ತಿದೆ. ಕಳೆದ ರಾಜ್ಯ ವಿಧಾನಸಭೆ ಚುನಾವಣೆ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕಲ್ಪಿಸಿದ್ದ ಸರಕಾರಿ ಭದ್ರತೆಯನ್ನು ಬೆಂಗಳೂರು ಸಶಸ್ತ್ರ ಮೀಸಲು ಪಡೆಯ ಅಂದಿನ ಡಿಸಿಪಿ, ಮಹಿಳಾ ಐಪಿಎಸ್ ರೂಪಾ ಮುದ್ಗಲ್ ಅವರು ಕಿತ್ತುಕೊಂಡಿದ್ದರು.

ಆದರೆ ಈಗ ಲೋಕಸಭೆ ಚುನಾವಣೆ ಎದುರಿಗೇ ಇದೆ. ಜತೆಗೆ ಇನ್ನೂ ಏನೇನೋ ಕಾರಣ ನೀಡಿ ಮತ್ತೆ ತಮಗೆ ಹಿಂದಿನ ಭದ್ರತೆಯನ್ನು ಕಲ್ಪಿಸಿ (Z plus) ಎಂದು ಕರ್ನಾಟಕ ಜನತಾ ಪಕ್ಷದ ಸಂಸ್ಥಾಪಕ ಬಿಎಸ್ ಯಡಿಯೂರಪ್ಪ ರಾಜ್ಯ ಗೃಹ ಸಚಿವ ಕೆಜೆ ಜಾರ್ಜ್‌ ಅವರಿಗೆ ಪತ್ರ ಬರೆದಿದ್ದಾರೆ.

ಶಿವಮೊಗ್ಗದಲ್ಲಿ ನಕ್ಸಲ್ ಭೀತಿ: ಈ ಮೊದಲು ಪ್ರವಾಸಕ್ಕೆ ತೆರಳಿದಾಗ, ಬೆಂಗಾವಲು ಪಡೆಯ ವಾಹನ ಮತ್ತು ಸಿಬ್ಬಂದಿ ಬರುತ್ತಿದ್ದರು. ಆದರೆ ಈಗ ಈ ವ್ಯವಸ್ಥೆ ಇಲ್ಲ. ಕೇವಲ Y plus ಸೆಕ್ಯುರಿಟಿ ಮಾತ್ರವೇ ಇದೆ. ಈ ಮಧ್ಯೆ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗದಲ್ಲಿ ನಕ್ಸಲ್ ಭೀತಿ ಹೆಚ್ಚಾಗಿದೆ. ಹಾಗಾಗಿ, ರಕ್ಷಣೆಯ ದೃಷ್ಟಿಯಿಂದ ಬೆಂಗಾವಲು ಪಡೆಯ ವಾಹನ ಮತ್ತು ಸಿಬ್ಬಂದಿ ಒದಗಿಸಬೇಕು ಎಂದು ಪತ್ರದಲ್ಲಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

2013ರ ಆಗಸ್ಟ್‌ 12ರಂದೇ ಯಡಿಯೂರಪ್ಪ, ತಮಗೆ ಬೆಂಗಾವಲು ಪಡೆ ವಾಹನ ಮತ್ತು ಸಿಬ್ಬಂದಿ ನೀಡುವಂತೆ ಕೋರಿದ್ದಾರೆ. ಇದಕ್ಕೂ ಮೊದಲು 2013ರ ಜುಲೈ 30ರಂದು ಬೆಂಗಳೂರು ಮಹಾನಗರ ಪೊಲೀಸ್‌ ಆಯುಕ್ತರಿಗೂ ಪತ್ರ ಬರೆದಿದ್ದರು. ಇದಕ್ಕೂ ಮೊದಲೇ 2012ರ ಮೇ 7ರಂದು ಮಾಜಿ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಡಾ. ಟಿಎಂ ಸುರೇಶ್‌ ಕೂಡ ಯಡಿಯೂರಪ್ಪ ಅವರಿಗೆ ಭದ್ರತೆ ನೀಡಬೇಕು ಎಂದು ಪೊಲೀಸ್‌ ಇಲಾಖೆಗೆ ಪತ್ರ ಬರೆದಿದ್ದರು.

ಆದರೆ, ಈ ನಿಟ್ಟಿನಲ್ಲಿ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಸ್ವತಃ ಯಡಿಯೂರಪ್ಪ ಅವರು ಕೆಜೆ ಜಾರ್ಜ್‌ ಅವರಿಗೆ ಈಗ ಪತ್ರ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+