Get Updates
Get notified of breaking news, exclusive insights, and must-see stories!

ಯಡಿಯೂರಪ್ಪ ಧರಣಿ ಬೆಳಗಾವಿಗೆ ಸ್ಥಳಾಂತರ

ಬೆಂಗಳೂರು, ನ. 25 : ಶಾದಿಭಾಗ್ಯ ಯೋಜನೆ ವಿಸ್ತರಣೆ ಮತ್ತು ಎಪಿಎಲ್‌ ಕಾರ್ಡ್‌ದಾರರಿಗೆ ಹಿಂದಿನಂತೆ ಪಡಿತರ ವಿತರಣೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾಜಿ ಸಿಎಂ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿದ್ದ 24 ದಿನಗಳ ಧರಣಿ ಭಾನುವಾರ ಬೆಂಗಳೂರಿನಲ್ಲಿ ಅಂತ್ಯಗೊಂಡಿದೆ. ಸೋಮವಾರದಿಂದ ಬೆಳಗಾವಿಯಲ್ಲಿ ಧರಣಿ ಮುಂದುವರೆಸುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ.

ಭಾನುವಾರ ಧರಣಿ ಅಂತ್ಯಗೊಳಿಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ಸೋಮವಾರ ಅಧಿವೇಶ ಆರಂಭವಾಗುವುದಕ್ಕೂ ಮೊದಲು, ಬೆಳಗಾವಿಯಲ್ಲಿ ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ನಡೆಸಿ, ಸದನದಲ್ಲೇ ಅಹೋರಾತ್ರಿ ಧರಣಿ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

 B.S.Yeddyurappa

ಭಾನುವಾರ ನನ್ನ ಹೋರಾಟ ಅಂತ್ಯಗೊಂಡಿಲ್ಲ. ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಹೋರಾಟದ ಆರಂಭವಿದು ಎಂದು ಹೇಳಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದ ಕಲಾಪಗಳಿಗೆ ನಾನು ಅಡ್ಡಿ ಉಂಟುಮಾಡುವುದಿಲ್ಲ. ಸಭಾಧ್ಯಕ್ಷರ ಅನುಮತಿ ಪಡೆದು ಆರಂಭದಲ್ಲಿ ನನ್ನ ಉದ್ದೇಶವನ್ನು ವಿವರಿಸುತ್ತೇನೆ. ನಂತರ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇನೆ ಎಂದರು. (ಮನವೊಲಿಕೆ ಯತ್ನ ವಿಫಲ, ಮುಂದುವರಿದ ಬಿಎಸ್ವೈ ಧರಣಿ)

24 ದಿನಗಳಿಂದ ಧರಣಿ ನಡೆಸಿದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೌಜನ್ಯಕ್ಕೂ ತಮ್ಮೊಂದಿಗೆ ಮಾತುಕತೆ ನಡೆಸಲಿಲ್ಲ. ಸರ್ವಾಧಿಕಾರಿ. ಅಧಿಕಾರದ ಪಿತ್ತ ಅವರ ನೆತ್ತಿಗೇರಿದೆ ಅವರ ಇಂತಹ ವರ್ತನೆಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಅ.31ರಿಂದ ನ.24ರ ವರೆಗೆ ಬಿ.ಎಸ್.ಯಡಿಯೂರಪ್ಪ ಆನಂದ್ ರಾವ್ ವೃತ್ತದಲ್ಲಿ ಆಹೋರಾತ್ರಿ ಧರಣಿ ನಡೆಸಿದರು. ನಗರ ಪೊಲೀಸರು ಎರಡು ಬಾರಿ ಧರಣಿ ಸ್ಥಳ ತೆರವುಗೊಳಿಸುವಂತೆ ನೀಡಿದ ನೋಟಿಸ್ ಅನ್ನು ಅವರು ಸ್ವೀಕರಿಸಿರಲಿಲ್ಲ. ಧರಣಿ ಅಂತ್ಯಗೊಳಿಸುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ನಡೆಸಿದ ಸಂಧಾನವೂ ವಿಫಲವಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+