ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನವೊಲಿಕೆ ಯತ್ನ ವಿಫಲ, ಮುಂದುವರಿದ ಬಿಎಸ್ವೈ ಧರಣಿ

|
Google Oneindia Kannada News

ಬೆಂಗಳೂರು, ನ. 20 : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅಹೋರಾತ್ರಿ ಧರಣಿಯನ್ನು ಕೈ ಬಿಡುವಂತೆ ಮನವೊಲಿಸುವ ಯತ್ನ ವಿಫಲವಾಗಿದೆ. ಆದ್ದರಿಂದ ಇನ್ನೂ ನಾಲ್ಕು ದಿನ ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರ ಧರಣಿ ಮುಂದುವರೆಯಲಿದೆ. ಯಡಿಯೂರಪ್ಪ ಮನವೊಲಿಕೆ ಯತ್ನದಿಂದ ಸಚಿವ ಟಿ.ಬಿ.ಜಯಚಂದ್ರ ಹಿಂದೆ ಸರಿದಿದ್ದಾರೆ.

ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ವರ್ಗಗಳಿಗೆ ವಿಸ್ತರಿಸರಣೆ ಮಾಡಬೇಕು ಹಾಗೂ ಎಪಿಎಲ್‌ ಕಾರ್ಡ್‌ದಾರರಿಗೂ ಪಡಿತರ ವಿತರಣೆ ಮಾಡಬೇಕು ಎಂಬ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ 20ನೇ ದಿನಕ್ಕೆ ಕಾಲಿಟ್ಟಿದೆ.

B.S.Yeddyurappa

ಧರಣಿಯ 19ನೇದಿನ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಯಡಿಯೂರಪ್ಪ ಮನವೊಲಿಕೆಗೆ ಮುಂದಾಗಿದ್ದರು. ಅದಕ್ಕಾಗಿ ವೇದಿಕೆಯನ್ನು ಸಿದ್ದಗೊಳಿಸಿದ್ದರು. ವಾಟಾಳ್ ನಾಗರಾಜ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ ಅವರೊಂದಿಗೆ ಧರಣಿ ಸ್ಥಳಕ್ಕೆ ತೆರಳಿ, ಯಡಿಯೂರಪ್ಪ ಅವರ ಮನವೊಲಿಸಲು ತೀರ್ಮಾನಿಸಿದ್ದರು. (ಧರಣಿ ನಿಲ್ಲಿಸುವುದಿಲ್ಲ ಸಿದ್ದುಗೆ ಯಡಿಯೂರಪ್ಪ ಸವಾಲು)

ಆದರೆ, ಅದಕ್ಕೂ ಮೊದಲೇ ಜಯಚಂದ್ರ ಅವರಿಗೆ ಸ್ಪಷ್ಟ ಸಂದೇಶ ಕಳುಹಿಸಿದ ಯಡಿಯೂರಪ್ಪ ತಾವು ಧರಣಿ ಕೈ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದರು. ಇದರಿಂದ ಜಯಚಂದ್ರ ತಮ್ಮ ಆಲೋಚನೆಯನ್ನು ಹಿಂಪಡೆದರು. ಈ ಕುರಿತು ಜಯಚಂದ್ರ ಅವರು ಹೇಳಿಕೆ ನೀಡಿದ್ದು, ಅಧಿವೇಶದನ ಹಿನ್ನಲೆಯಲ್ಲಿ ಧರಣಿ ಕೈಬಿಡುವಂತೆ ಮನವೊಲಿಕೆ ಮಾಡಲು ಮುಂದಾಗಿದ್ದೆ.

ಒಬ್ಬ ಸಚಿವನಾಗಿ ಪ್ರತಿಪಕ್ಷ ನಾಯಕರು ಧರಣಿ ಮಾಡುವುದನ್ನು ತಡೆಯುವುದು ನನ್ನ ಕರ್ತವ್ಯವಾಗಿತ್ತು. ಆದ್ದರಿಂದ ಯಡಿಯೂರಪ್ಪ ಅವರನ್ನು ಸಂಜೆ 4 ಗಂಟೆಗೆ ಭೇಟಿ ಮಾಡಲು ಆಲೋಚಿಸಿದ್ದೆ. ಅದಕ್ಕೂ ಮೊದಲೇ ಧರಣಿ ನಿಲ್ಲಿಸುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟ ಸಂದೇಶ ರವಾನಿಸಿದರು. ಆದ್ದರಿಂದ ಸಂಧಾನ ಪ್ರಯತ್ನ ಕೈ ಚೆಲ್ಲಿದೆ ಎಂದು ಜಯಚಂದ್ರ ಹೇಳಿದರು.

English summary
Law Minister T.B.Jayachandra on Tuesday, November 19 dropped his idea of visiting KJP president B.S.Yeddyurappa, who is on indefinite dharna, after he refused to withdraw his protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X