ಬಿಎಸ್ ವೈ ಡಾಲರ್ಸ್ ಕಾಲೊನಿ ನಿವಾಸದಲ್ಲಿ ಪೌರ ಕಾರ್ಮಿಕರ ಜತೆ ಭೋಜನ
ಬೆಂಗಳೂರು, ಏಪ್ರಿಲ್ 14: ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಕಣ್ಣೀರು ಶಾಶ್ವತವಾಗಿ ಒರೆಸಲು ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ 14 ಸಾವಿರ ಪೌರ ಕಾರ್ಮಿಕರ ಕೆಲಸವನ್ನು ಕಾಯಂಗೊಳಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ತಮ್ಮ ಡಾಲರ್ಸ್ ಕಾಲೊನಿ ನಿವಾಸಕ್ಕೆ 25 ಮಂದಿ ಪೌರ ಕಾರ್ಮಿಕರನ್ನು ಆಹ್ವಾನಿಸಿ ಅವರೊಂದಿಗೆ ಭೋಜನ ಸವಿದ ಅವರು ಪೌರ ಕಾರ್ಮಿಕರ ಕಷ್ಟ ಸುಖಗಳನ್ನು ವಿಚಾರಿಸಿದರು. ಈ ವೇಳೆ ಖುದ್ದಾಗಿ ತಾವೇ ಪೌರ ಕಾರ್ಮಿಕರಿಗೆ ಊಟ ಬಡಿಸಿದ ಯಡಿಯೂರಪ್ಪ ಅವರೊಂದಿಗೆ ಕೆಲ ಕಾಲ ಮಾತನಾಡಿದರು. ಒಬ್ಬಟ್ಟು, ಚಪಾತಿ, ಪಲ್ಯ, ಪುಲಾವ್, ಸಿಹಿಖಾದ್ಯಗಳನ್ನು ಸವಿದ ಪೌರ ಕಾರ್ಮಿಕರು ತಮಗೆ ಕಳೆದ ಮೂರು ತಿಂಗಳಿಂದ ಸಂಬಳ ಸಿಕ್ಕಿಲ್ಲ ಎಂದು ನೋವು ತೋಡಿಕೊಂಡರು.

ಯಡಿಯೂರಪ್ಪ ಅವರು ಮತ್ತೆ ಅಧಿಕಾರಕ್ಕೆ ಬರಬೇಕು. ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ ನಮ್ಮ ಕಷ್ಟ-ಕಾರ್ಪಣ್ಯಗಳು ದೂರ ಆಗುತ್ತವೆ ಎಂಬ ವಿಶ್ವಾಸವಿದೆ' ಎಂದು ಪೌರ ಕಾರ್ಮಿಕ ಮಹಿಳೆ ಲಕ್ಷ್ಮಿ ಹರ್ಷ ವ್ಯಕ್ತಪಡಿಸಿದರು.












Click it and Unblock the Notifications