• search
For bengaluru Updates
Allow Notification  

    ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ಸಾವು

    |
        ಬೆಂಕಿ ಹಚ್ಚಿಕೊಂಡಿದ್ದ ಯಶ್ ಅಭಿಮಾನಿ ಇನ್ನಿಲ್ಲ..! |Oneindia Kannada

        ಬೆಂಗಳೂರು, ಜನವರಿ 9: ಯಶ್ ಹುಟ್ಟುಹಬ್ಬದ ದಿನ ಅವರನ್ನು ನೋಡಲು ಆಗಲಿಲ್ಲ ಎಂಬ ನೋವಿನಿಂದ ಮಂಗಳವಾರ ಯಶ್ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅವರ ಅಭಿಮಾನಿ ರವಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.

        ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದ ರವಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗೆ ಕೊನೆಯುಸಿರೆಳೆದರು.

        ಅಭಿಮಾನಿ ಆತ್ಮಹತ್ಯೆ ಯತ್ನ, ಆಸ್ಪತ್ರೆಗೆ ನಟ ಯಶ್ ಭೇಟಿ

        ಹಿರಿಯ ನಟ ಅಂಬರೀಷ್ ಅವರ ನಿಧನದ ನೋವಿನಲ್ಲಿ ಇರುವುದರಿಂದ ಯಶ್ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರಲಿಲ್ಲ. ಆದರೂ, ಯಶ್ ಅವರನ್ನು ನೋಡಲು ಅಭಿಮಾನಿಗಳು ಅವರ ಮನೆ ಮುಂದೆ ಮಂಗಳವಾರ ಜಮಾಯಿಸಿದ್ದರು. ಯಶ್ ಅವರನ್ನು ನೋಡಲು ಸಾಧ್ಯವಾಗದೆ ಇದ್ದಿದ್ದರಿಂದ ಅವರ ಅಭಿಮಾನಿ ರವಿ ಬೇಸರದಿಂದ ಅಲ್ಲಿಯೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

        ಬೆಂಕಿಯ ಜ್ವಾಲೆ ಏಕಾಏಕಿ ಆವರಿಸಿದ್ದರಿಂದ ರವಿಯ ದೇಹ ಶೇ 80ರಷ್ಟು ಸುಟ್ಟು ಹೋಗಿತ್ತು. ಗಂಭೀರ ಸ್ಥಿತಿಗೆ ತಲುಪಿದ್ದರಿಂದ ಅವರನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಫಲಕಾರಿಯಾಗಲಿಲ್ಲ.

        ಪ್ರಜೆಗಳಾಗಿ ನಾವು ಕಾನೂನಿಗೆ ತಲೆ ಬಾಗಬೇಕು : ಯಶ್

        ಅಭಿಮಾನಿಯ ಆತ್ಮಹತ್ಯೆಯ ಸುದ್ದಿ ತಿಳಿದ ಯಶ್, ಸಂಜೆ ಆಸ್ಪತ್ರೆಗೆ ತೆರಳಿ ರವಿ ಮತ್ತು ಅವರ ಕುಟುಂಬದವರನ್ನು ಭೇಟಿ ಮಾಡಿದ್ದರು. ಯಾವ ಅಭಿಮಾನಿಯೂ ಈ ರೀತಿ ಆತ್ಮಹತ್ಯೆಯ ಪ್ರಯತ್ನ ಮಾಡಿಕೊಳ್ಳಬಾರದು. ಇಂತಹ ಕೃತ್ಯಗಳಿಗೆ ಮುಂದಾಗುವವರು ನನ್ನ ಅಭಿಮಾನಿಗಳಲ್ಲ ಎಂದು ಯಶ್ ಹೇಳಿದ್ದರು.

        ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

        ಇನ್ನಷ್ಟು ಬೆಂಗಳೂರು ಸುದ್ದಿಗಳುView All

        English summary
        Yash Fan Ravi, who attempted to suicide by setting fire on himslef for not able to see his favourite film star on his birthday was died at Victoria hospital on Wednesday.

        Oneindia ಬ್ರೇಕಿಂಗ್ ನ್ಯೂಸ್,
        ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

        Notification Settings X
        Time Settings
        Done
        Clear Notification X
        Do you want to clear all the notifications from your inbox?
        Settings X
        X
        We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more