ಮೆಟ್ರೋ ಹಳಿಗೆ ಅಳವಡಿಸುವ ಲಕ್ಷಾಂತರ ಮೌಲ್ಯದ ಕಾಪರ್ ತಂತಿಗಳ ಕಳ್ಳತನ

ಬೆಂಗಳೂರು, ಜೂನ್ 25: ನಮ್ಮ ಮೆಟ್ರೋದ ಹಳಿಗೆ ಅಳವಡಿಸುವ ಕಾಪರ್ ತಂತಿಗಳು ಕಳ್ಳತನವಾಗಿವೆ.

ಬೈಯಪ್ಪನಹಳ್ಳಿ- ವಿವೇಕಾನಂದ ಮೆಟ್ರೋ ನಿಲ್ದಾಣದ ಹಳಿಗಳಿಗೆ ಅಳವಡಿಸಲು ತಂದಿದ್ದ ಐದು ಲಕ್ಷ ಮೌಲ್ಯದ 1,123 ಕೆಜಿ ಬೆಲೆಬಾಳುವ ಕಾಪರ್‌ ತಂತಿಗಳನ್ನು ಕದ್ದಿದ್ದಾರೆ.

ಬಿಎಂಆರ್‌ಸಿಎಲ್ ಎಂಜಿನಿಯರ್ ಕೆವಿಎಸ್‌ಟಿ ರಾಜು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಲೋಕೊ ಪೈಲಟ್ ಕಾಮಗಾರಿ ವೇಳೆ ಕಾಪರ್ ವೈಯರ್ ಹಾಗೂ ಕಂಡಕ್ಟರ್‌ ಇಲ್ಲದಿರುವುದನ್ನು ಗಮನಿಸಿ ಎಂಜಿನಿಯರ್‌ಗೆ ವಿಷಯ ತಿಳಿಸಿದ್ದಾರೆ. 490 ಮೀಟರ್ ಉದ್ದದ ತಂತಿಯನ್ನು ಕಳ್ಳತನ ಮಾಡಿದ್ದಾರೆ.

Worth over Rs 5 lakh metro copper wire stolen

ಮೇ 15ರಿಂದ ಜೂನ್ 5ರವರೆಗೂ ಸಾಕಷ್ಟು ಮಂದಿ ಈ ಮಾರ್ಗದಲ್ಲಿ ಕೆಲಸ ಮಾಡಿದ್ದಾರೆ ಆದರೆ ಈ ಕೆಲಸವನ್ನು ಯಾರು ಮಾಡಿದ್ದಾರೆ ಎಂದು ಕಂಡುಹಿಡಿಯುವುದು ಕಷ್ಟವಾಗಿದೆ.

ಕೆಲವು ರಸ್ತೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಮೂಲಕ ಮಾಹಿತಿ ಏನಾದರೂ ಲಭ್ಯವಾಗಲಿದೆಯೇ ಎಂದು ಕಾದು ನೋಡಬೇಕಿದೆ.

ಆರ್‌ವಿ ರಸ್ತೆ ನಿಲ್ದಾಣದಲ್ಲಿ ಹಳದಿ ಮಾರ್ಗದ ಮೆಟ್ರೋ ಯೋಜನೆ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಬರುವ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತಿದೆ.

ಆರ್‌ವಿ ರಸ್ತೆ ನಿಲ್ದಾಣದಲ್ಲಿ ಇಂಟರ್‌ಚೇಂಜ್ ನಿಲ್ದಾಣದ ಕಾಮಗಾರಿ ನಡೆಯುವ ಕಾರಣ ಈಗಿರುವ ಮೆಟ್ರೋ ನಿಲ್ದಾಣವನ್ನು ಅರ್ಧ ಕೆಡವಿ ಹೊಸದಾಗಿ ನಿಲ್ದಾಣ ನಿರ್ಮಿಸಬೇಕಿದೆ.

ಪ್ರತಿನಿತ್ಯವೂ 5 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈ ಮೆಟ್ರೋ ನಿಲ್ದಾಣದ ಮೂಲಕ ಸಂಚರಿಸುತ್ತಿದ್ದರು. ಹಸಿರು ಮಾರ್ಗ 2017ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು.

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ ಬಂದ್ ಆಗುವುದರಿಂದ ಪ್ರಯಾಣಿಕರು ಜಯನಗರ ಅಥವಾ ಬನಶಂಕರಿ ಮೆಟ್ರೋ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೆಟ್ರೋ ಹತ್ತಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+