ಟ್ರಾಮಾ ದಿನ: ಯುನೈಟೆಡ್ ಆಸ್ಪತ್ರೆಯಲ್ಲಿ ಜೀವರಕ್ಷಕ ಪ್ರಾಥಮಿಕ ಚಿಕಿತ್ಸೆಗಳ ತರಬೇತಿ
ಬೆಂಗಳೂರು, ಅಕ್ಟೋಬರ್ 15: ನಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳಿಗೆ ಹಠಾತ್ತಾಗಿ ಹೃದಯಾಘಾತ, ಅಫಫಾತ ಅಥವಾ ಇನ್ನು ಯಾವುದಾದರೂ ಅವಘಡಗಳಾಗಿ ಆಘಾತಕ್ಕೀಡಾದಾಗ ಏನು ಮಾಡುವುದು ಎನ್ನುವುದು ತೋಚುವುದೇ ಇಲ್ಲ. ಪ್ರಾಥಮಿಕ ಚಿಕಿತ್ಸೆಯಿಂದ ದೊಡ್ಡ ತೊಂದರೆ ಉಂಟಾಗದಂತೆ ತಡೆಯುವ ನಿಟ್ಟಿನಲ್ಲಿ ಹಲವಾರು ಜನರಿಗೆ ಸರಿಯಾದ ತಿಳುವಳಿಕೆಯೇ ಇರುವುದಿಲ್ಲ. ವೈದ್ಯಕೀಯ ಚಿಕಿತ್ಸೆಗೆ ಅವರನ್ನು ಕೊಂಡೊಯ್ಯುವ ವರೆಗಿನ ಅಮೂಲ್ಯ ಸಮಯ ಉಳಿಸುವ ನಿಟ್ಟಿನಲ್ಲಿ ಸಾಮಾನ್ಯವಾದ ತುರ್ತು ಜೀವರಕ್ಷಕ ಚಿಕಿತ್ಸೆಗಳ ತರಬೇತಿ ಪಡೆದುಕೊಳ್ಳುವುದು ಅತ್ಯವಶ್ಯ.
ತುರ್ತು ಸಂಧರ್ಭಗಳಲ್ಲಿ ಜೀವಗಳನ್ನು ಉಳಿಸುವ ಮಹತ್ವವನ್ನು ತಿಳಿಸುವ ಹಾಗೂ ಆಫಾತಗಳನ್ನು ಹೇಗೆ ನಿಭಾಯಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಯುನೈಟೆಡ್ ಆಸ್ಪತ್ರೆ ವಿಶ್ವ ಟ್ರಾಮಾ ದಿನದ ಅಂಗವಾಗಿ ಅಕ್ಟೋಬರ್ 18 ಮತ್ತು 19 ರಂದು ಜೀವರಕ್ಷಕ ಪ್ರಾಥಮಿಕ ಚಿಕಿತ್ಸೆಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಬೇಸಿಕ್ ಲೈಫ್ ಸಪೋರ್ಟ್ ತರಬೇತಿ: ಈ ತರಬೇತಿಯಲ್ಲಿ ಫಸ್ಟ್ ರೆಸ್ಪಾಂಡರ್ ಸಿಪಿಆರ್, ವಯಸ್ಕರಿಗೆ ಸಿಪಿಆರ್, ಮಕ್ಕಳು ಹಾಗೂ ಶಿಶುಗಳಿಗೆ ಸಿಪಿಆರ್, ಆಟೋಮೇಟೆಡ್ ಎಕ್ಟ್ರನಲ್ ಡೀಫ್ರಿಬ್ಲಿಏಟರ್ (ಏಇಡಿ) ಬಳಕೆ ಹಾಗೂ ಹೆಐಮಕ್ಲಿಚ್ ಮನ್ಯೂಯರ್ ಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು.

ಫಸ್ಟ್ ಏಡ್ ಟ್ರಾಮಾ ಟ್ರೈನಿಂಗ್: ಈ ತರಬೇತಿಯಲ್ಲಿ ಅಪಘಾತಗಳು ಮತ್ತು ಬಿದ್ದಾಗ, ಬೆಂಕಿಯ ಅವಘಢಗಳ ಸಂಧರ್ಭದಲ್ಲಿ, ಪ್ರಾಣಿಗಳು ಕಚ್ಚಿದ ಸಂಧರ್ಭದಲ್ಲಿ, ಹೃದಯಾಘಾತ ಮತ್ತು ಸ್ಟ್ರೋಕ್ ಗಳಾದಾಗ ನೀಡಬೇಕಾದಂತ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿಯನ್ನು ನೀಡಲಾಗುವುದು.
ಈ ರೀತಿಯ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ - ಅಡ್ವಾನ್ಸ್‌ಡ್ ಕಾರ್ಡಿಯಾಕ್ ಲೈಪ್ ಸಪೋರ್ಟ್ ನಿಂದ ತರಬೇತಿಯನ್ನು ಪಡೆದುಕೊಂಡಿರುವ ಡಾ. ಲೋರಿಯಾ ರಹಮಾನ್ ಅವರು ಈ ತರಬೇತಿಯನ್ನು ನಡೆಸಿಕೊಡಲಿದ್ದಾರೆ.

''ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ನೀಡುವ ಪ್ರಾಥಮಿಕ ಚಿಕಿತ್ಸೆ ಅವರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಬಹಳ ಸಹಕಾರಿ. ಅದರಲ್ಲೂ ವೈದ್ಯಕೀಯ ಸೌಲಭ್ಯಕ್ಕೆ ಅವರನ್ನು ಸಾಗಿಸುವ ಮುನ್ನ ಅಮೂಲ್ಯ ಸಮಯದಲ್ಲಿ ನೀಡುವ ಚಿಕಿತ್ಸೆ ಬಹಳಷ್ಟು ಪರಿಣಾಮಕಾರಿಯಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು ಹಾಗೂ ಅವರಿಗೆ ಜೀವರಕ್ಷಕ ಪ್ರಾಥಮಿಕ ಚಿತ್ಸೆಯ ಬಗ್ಗೆ ಸುಲಭವಾಗಿ ತರಬೇತಿಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಈ ತರಬೇತಿಯನ್ನು ಪಡೆದುಕೊಂಡವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು,'' ಎಂದು ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಣಿಗಾಗಿ ದೂರವಾಣಿ ಸಂಖ್ಯೆ 08045666666 / 080 69333333ಸಂಪರ್ಕಿಸಬಹುದಾಗಿದೆ. ವಿಶ್ವ ಟ್ರಾಮಾ ದಿನ ತುರ್ತು ಸಂದರ್ಭಗಳಲ್ಲಿ ಜೀವಗಳನ್ನು ಉಳಿಸುವ ಮಹತ್ವವನ್ನು ತಿಳಿಸುತ್ತದೆ. ಅಪಘಾತಗಳನ್ನು ಹೇಗೆ ತಪ್ಪಿಸಬೇಕು ಎಂಬುದರ ಕುರಿತು ಶಿಕ್ಷಣವನ್ನೂ ಸಹ ನೀಡುತ್ತದೆ.

ಕೊರೊನಾ ಜಾಗೃತಿ, ಲಸಿಕೆ ರಿಯಾಯಿತಿ: ಸಾಮಾಜಿಕ ಕಾಳಜಿ ಹಾಗೂ ಕೊರೊನಾ ಲಸಿಕೆಯಿಂದ ಹೆಚ್ಚು ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ, ಕೋವ್ಯಾಕ್ಸಿನ್ ಕೊರೊನಾ ಲಸಿಕೆಯನ್ನು ಹೊಂದಿರುವ ಜಯನಗರದ ಯುನೈಟೆಡ್ ಆಸ್ಪತ್ರೆ, ಸರ್ಕಾರ ನಿಗದಿಪಡಿಸಿರುವ ದರದ 210 ರೂಪಾಯಿ ರಿಯಾಯಿತಿ ನೀಡಲಿರುವುದಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
"ಬೆಂಗಳೂರು ನಗರದಲ್ಲೆಡೆ ಲಸಿಕೆಗಳ ಕೊರತೆ ಕಂಡುಬರುತ್ತಿದೆ. ವ್ಯಾಪಕವಾಗಿ ಹರಡುತ್ತಿರುವ ಡೆಲ್ಟಾ ಪ್ಲಸ್ ರೂಪಾಂತರ ವಿರುದ್ಧ ಪರಿಣಾಮಕಾರಿಯಾಗಿರುವ ಕೋವ್ಯಾಕ್ಸಿನ್ ಲಸಿಕೆ ಕೊರತೆ ಹೆಚ್ಚಾಗಿದೆ. ನಮ್ಮ ಆಸ್ಪತ್ರೆಯ ಮಂಡಳಿ ವತಿಯಿಂದ ಎರಡು ತಿಂಗಳ ಹಿಂದೆ ಕೋವ್ಯಾಕ್ಸಿನ್ ಹಾಗೂ ಇತರೆ ಲಸಿಕೆಗಳಿಗೆ ಮುಂಗಡ ಹಣ ನೀಡಿ ಖರೀದಿಸಿದ್ದೆವು. ಈಚೆಗೆ ನಮ್ಮ ಆಸ್ಪತ್ರೆಗೆ 20,000 ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಾಗಿದೆ. ಇದರಲ್ಲಿ 5000 ಡೋಸ್ ಗಳನ್ನು ಕೊರೊನಾ ಎರಡನೇ ಅಲೆಯಲ್ಲಿ ಅತ್ಯುತ್ತಮ ಸೇವೆ ಒದಗಿಸಿದ ನಮ್ಮ ಕಲಬುರ್ಗಿ ಆಸ್ಪತ್ರೆಯಲ್ಲಿ ಬಳಸಲಿದ್ದೇವೆ" ಎಂದು ಮಾಹಿತಿ ನೀಡಿದರು.

Recommended Video
''ಎರಡನೇ ಡೋಸ್ ಕೋವ್ಯಾಕ್ಸಿನ್ ದೊರೆಯದೇ ತೊಂದರೆ ಪಡುತ್ತಿರುವ ಜನರ ಅನುಕೂಲಕ್ಕಾಗಿ ಈ ಯೋಜನೆ ರೂಪಿಸಿದ್ದೇವೆ" ಎಂದು ಡಾ ವಿಕ್ರಮ್ ವಿವರಿಸಿದರು. ಜಯನಗರದ ಯುನೈಟೆಡ್ ಆಸ್ಪತ್ರೆಯನ್ನು ಕೋವಿಡ್ ಲಸಿಕೆ ನೀಡುವ ಸಲುವಾಗಿ ಕಾಯ್ದಿರಿಸಲಾಗಿದೆ. ಇದನ್ನು ಲಸಿಕೆ ನೀಡುವ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಲಸಿಕೆ ಪಡೆಯುವವರು ಯಾವುದೇ ಭಯವಿಲ್ಲದೆ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ,'' ಎಂದು ಡಾ ವಿಕ್ರಮ್ ವಿವರಿಸಿದರು.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.












Click it and Unblock the Notifications