'ಬಾನುಲಿ ಕಾರ್ಯಕ್ರಮ ನಿರ್ಮಾಣ' ಕುರಿತ ಕಾರ್ಯಾಗಾರ
ಬೆಂಗಳೂರು, ಫೆ. 24 : ವಿಶ್ವ ಬಾನುಲಿ ದಿನಾಚರಣೆ ಅಂಗವಾಗಿ ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ 'ಬಾನುಲಿ ಕಾರ್ಯಕ್ರಮ ನಿರ್ಮಾಣ' ಕುರಿತ ಕಾರ್ಯಾಗಾರವನ್ನು ಫೆ. 25 ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಮತ್ತು ಯಂಗ್ ಕಮ್ಯುನಿಕೇಟರ್ಸ್ ಕ್ಲಬ್ (ವೈಸಿಸಿ) ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.[ಮೋದಿ-ಒಬಾಮಾ 'ಮನ್ ಕೀ ಬಾತ್ ಮುಖ್ಯಾಂಶಗಳು]

ವಾರ್ತಾ ಸಚಿವ ಆರ್. ರೋಷನ್ ಬೇಗ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೆÇನ್ನಪ್ಪ, ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಡಾ. ನಾಗಾಂಬಿಕ ದೇವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ಪಿ.ಆರ್.ಸಿ.ಐ ಸ್ಥಾಪಕ ಅಧ್ಯಕ್ಷ ಎಂ.ಬಿ. ಜಯರಾಂ, ಡಾ. ಕೆ.ಆರ್. ವೇಣುಗೋಪಾಲ್, ಯಂಗ್ ಕಮ್ಯುನಿಕೇಟರ್ಸ್ ಕ್ಲಬ್ ಗೀತಾ ಶಂಕರ್, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಅಧ್ಯಕ್ಷ ಡಾ. ಬಿ.ಕೆ. ರವಿ ಉಪಸ್ಥಿತರಿರುವರು.

ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕಿ ನಾಗಮಣಿ ಎಸ್. ರಾವ್ ಬಾನುಲಿ ಕಾರ್ಯಕ್ರಮ ನಿರ್ಮಾಣ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 12-15 ರಿಂದ ವಿವಿಧ ಗೋಷ್ಠುಗಳು ನಡೆಯಲಿವೆ. ಆಕಾಶವಾಣಿ ನಿರ್ದೇಶಕ ಡಾ. ಬಸವರಾಜ ಸಾದರ, ಸಮುದಾಯ ಬಾನುಲಿ ತಜ್ಞ ಅಬ್ದುಲ್ ರೆಹಮಾನ್ ಪಾಷ, ಕಾರ್ಯಕ್ರಮ ನಿರ್ವಾಹಕ ಉದಯಾದ್ರಿ, ಸುದ್ದಿ ಸಂಪಾದಕಿ ಕೆ.ವೈ. ಜಯಂತಿ ವಿಷಯ ಮಂಡನೆ ಮಾಡಲಿದ್ದಾರೆ.
ಮಾಹಿತಿ ಮತ್ತು ಮನರಂಜನೆ ಮಾಧ್ಯವಾಗಿ ಬಾನುಲಿ ಹೇಗೆ ಕೆಲಸ ಮಾಡುತ್ತಿದೆ? ಸದ್ಯ ಎದಿರಿಸುತ್ತಿರುವ ಸಮಸ್ಯೆಗಳು ಯಾವವು? ಕಾರ್ಯಕ್ರಮದಲ್ಲಿ ಭಿನ್ನತೆ ಸಾಧುಸಲು ಎನು ಮಾಡಬಹುದು ಎಂಬ ವಿಚಾರಗಳ ಕುರಿತು ಚಿಂತನ ಮಂಥನ ನಡೆಯಲಿದೆ ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.












Click it and Unblock the Notifications