ಮಹಿಳಾ ಆಟೋ ಚಾಲಕಿಯರಿಗೆ ಗುಡ್‌ನ್ಯೂಸ್: ಬೆಂಗಳೂರಲ್ಲಿ ಚಾರ್ಜಿಂಗ್‌ ಸ್ಟೇಷನ್‌, ಸ್ವಚ್ಛ ಶೌಚಾಲಯ: ಶಾಸಕಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿರುವ ಮಹಿಳಾ ಚಾಲಕಿಯರಿಗೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಗುಡ್‌ನ್ಯೂಸ್ ನೀಡಿದ್ದಾರೆ. ಚಾಲಕಿಯರ ಹಿತದೃಷ್ಟಿಯಿಂದ ಎಲ್ಲೆಡೆ ಚಾರ್ಜಿಂಗ್‌ ಸ್ಟೇಷನ್‌ ಹಾಗೂ ಸ್ವಚ್ಛ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿರ್ಧಾರದಿಂದ ನಗರದಲ್ಲಿ ಮಹಿಳಾ ಆಟೋ ಚಾಲಕಿಯರ ಮೂಲಭೂತ ಸಮಸ್ಯೆಗಳು ಕೊನೆಯಾಗುವ ದಿನಗಳು ಹತ್ತಿರವಾಗಿವೆ.

ನಗರದಲ್ಲಿ ಬಿ.ಪ್ಯಾಕ್‌ ಹಾಗೂ ಸಿಜಿಐ ವತಿಯಿಂದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕಿ ಮಂಜುಳ ಲಿಂಬಾವಳಿ ಅವರು, ಆಟೋ ಚಾಲನೆ ಮಾಡುವ ಮಹಿಳೆಯರಿಗೆ ಸೂಕ್ತ ಶೌಚಾಲಯದ ಕೊರತೆ ಇದೆ. ಕೆಲವೊಮ್ಮೆ ಸ್ವಚ್ಛ ಶೌಚಾಲಯವಿಲ್ಲದೇ ಕಷ್ಟಪಡುತ್ತಾರೆ. ಇವರಿಗಾಗಿಯೇ, ಅಲ್ಲಲ್ಲಿ ಸೂಕ್ತ ಶೌಚಾಲಯ ಸೇರಿದಂತೆ ಮೂಲಸೌಕರ್ಯ ನಿರ್ಮಿಸಿದರೆ, ಈ ಕ್ಷೇತ್ರದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.

Women Auto Drivers

ಸ್ವಾವಲಂಬಿ ಜೀವನಕ್ಕೆ ಇದು ಉತ್ತಮ ಆಯ್ಕೆ

ಮಹದೇವಪುರದಲ್ಲಿ ಐಟಿ ಕ್ಷೇತ್ರಕ್ಕೆ ಹೆಚ್ಚು ಆಪ್ತ. ಐಟಿ ಕ್ಷೇತ್ರಕ್ಕೆ ತೆರಳುವ ಮಹಿಳೆಯರ ಸಂಖ್ಯೆಯೂ ಹೆಚ್ಚು. ರಾತ್ರಿಪಾಳಿಯಲ್ಲಿ ಸುರಕ್ಷಿತವಾಗಿ ತೆರಳಲು ಮಹಿಳಾ ಚಾಲಕಿಯರಿರುವ ಆಟೋ ಹೆಚ್ಚು ಸುರಕ್ಷಿತ, ಹಾಗೆಯೇ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಜೀವನ ನಡೆಸುವವರಿಗೂ ಈ ಆಟೋಚಾಲನೆ ಉತ್ತಮ ಆಯ್ಕೆ. ಅವರಿಗಾಗಿಯೇ, ಉಚಿತವಾಗಿ ಚಾಲನೆ ನೀಡುವ ಜೊತೆಗೆ, ಆಟೋ ಸಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಬಿ.ಪ್ಯಾಕ್‌ ಸಿಇಒ ರೇವತಿ ಅಶೋಕ್‌ ಮಾತನಾಡಿ, ಈ ಉಪಕ್ರಮವು ಮಹಿಳೆಯರಿಗೆ ಆಟೋ ಚಾಲನೆ ತರಬೇತಿ ನೀಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಸುಸ್ಥಿರ ಜೀವನೋಪಾಯ ಮತ್ತು ಆರ್ಥಿಕ ಸ್ವಾವಲಂಬನೆಯತ್ತ ಕರೆದೊಯ್ಯುವ ಸಂಪೂರ್ಣ ಮಾರ್ಗವನ್ನು ನಿರ್ಮಿಸುವ ಪ್ರಯತ್ನವಾಗಿದೆ. ಚಾಲನಾ ಕೌಶಲ್ಯದ ಜೊತೆಗೆ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ಮೂಲಭೂತ ಇಂಗ್ಲಿಷ್ ಸಂವಹನ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ತರಬೇತಿ ನೀಡಲಾಗುತ್ತದೆ. ಅಲ್ಲದೆ, ಪರಿಹಾರ ಸಹಾಯವಾಣಿ ಕೇಂದ್ರ ಮತ್ತು ಸಂಚಾರ ನಿರ್ವಹಣಾ ಕಮಾಂಡ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಪ್ರಾಯೋಗಿಕ ಅನುಭವವನ್ನೂ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಏಷ್ಯಾ ಪೆಸಿಫಿಕ್‌ ಸಿಜಿಐನ ಉಪಾಧ್ಯಕ್ಷೆ ಪ್ರಣವಿ ಪಾಪಸಾನಿ ಮಾತನಾಡಿ, ಬಿ.ಪ್ಯಾಕ್‌ನೊಂದಿಗಿನ ನಮ್ಮ ಸಹಭಾಗಿತ್ವವು ನಾವು ವಾಸಿಸುವ ಮತ್ತು ಕೆಲಸ ಮಾಡುವ ಸಮುದಾಯಗಳಲ್ಲಿ ಸಕಾರಾತ್ಮಕ ಸಾಮಾಜಿಕ ಪರಿಣಾಮವನ್ನು ಸೃಷ್ಟಿಸುವ ಸಿಜಿಐನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜನರು ಹೆಚ್ಚು ಸುರಕ್ಷಿತ ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಅಗತ್ಯವಾದ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ.""ಈ ಕಾರ್ಯಕ್ರಮವು ಕೇವಲ ತರಬೇತಿ ಕಾರ್ಯಕ್ರಮಕ್ಕಿಂತ ಹೆಚ್ಚಿನ ಅರ್ಥವನ್ನು ಹೊಂದಿದೆ ಎಂದು ಹೇಳಿದರು.

ತಿಂಗಳಿಗೆ ಗರಿಷ್ಠ 25,000 ಆದಾಯ

ಆಟೋ ಚಾಲಕಿ ಮಾಲತಿ ಮಾತನಾಡಿ, 'ಆಟೋ ತರಬೇತಿ ನೀಡುವುದರ ಜೊತೆಗೆ LL ಮತ್ತು DL ಪಡೆಯಲು ಹಾಗೂ ಆಟೋ ಬಾಡಿಗೆ ಅವಕಾಶ ಕಲ್ಪಿಸಲು ಸಹಾಯ ಮಾಡಿದ ಬಿ.ಪ್ಯಾಕ್ ಮತ್ತು ಸಿಜಿಐಗೆ ಅವರು ಧನ್ಯವಾದ ತಿಳಿಸಿದರ. ಹಿಂದೆ ತಿಂಗಳಿಗೆ 8 ಸಾವಿರದಿಂದ 25 ಸಾವಿರ ರೂ.ವರೆಗೂ ಸಂಪಾದಿಸುವಂತಾಗಿದೆ. ಈ ಬೆಂಬಲ ನನಗೆ ಆದಾಯದ ಜೊತೆಗೆ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸವನ್ನು ನೀಡಿದೆ ಎಂದು ಸಂಸ್ಥೆಗಳ ಸಾಮಾಜಿಕ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು.

2030ರ ವೇಳೆಗೆ ಬೆಂಗಳೂರಿನಾದ್ಯಂತ 10,000 ಮಹಿಳಾ ಆಟೋ ಚಾಲಕರಿಗೆ ತರಬೇತಿ ನೀಡುವುದು ಬಿ.ಪ್ಯಾಕ್‌ನ ಗುರಿಯಾಗಿದೆ ಎಂದು ಬಿ.ಪ್ಯಾಕ್ ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರ ಪೂಜಾರಿ ಹೆಚ್‌ ಎಸ್‌ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+