ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಡಿ ಪೂಜಾ ಅರೆಸ್ಟ್ ವೇಳೆ ಪೊಲೀಸರು ಜಪ್ತಿ ಮಾಡಿದ್ದು 1 ಕೋಟಿ ಮಾಲು !

|
Google Oneindia Kannada News

ಬೆಂಗಳೂರು, ಡಿಸೆಂಬರ್ 16: ಕಾರ್ ಖರೀದಸಲು ಶೋರೂಂಗೆ ಹೋದಾಗ ಯಾರಾದ್ರೂ ಅರ್ಧ ಬೆಲೆಗೆ ಕಾರು ಕೊಡಿಸುತ್ತೇನೆ ಅಂತ ಹೇಳಿದ್ರೆ ನಂಬಬೇಡಿ ! ನಂಬಿ ಹೋದರೆ ಮೂರು ನಾಮ ಜತೆಗೆ ಪೊಲೀಸ್ ಠಾಣೆಗೆ ಅಲೆಯಬೇಕಾದೀತು. ಹೌದು ಇಲ್ಲೊಬ್ಬ ಖತರ್ ನಾಕ್ ಲೇಡಿ ಯ ಬ್ಲೇಡ್ ಸ್ಕೀಮ್ ನಂಬಿ ನೂರಾರು ಮಂದಿ ಮೋಸ ಹೋಗಿದ್ದಾರೆ. ಜ

ಈ ಮೋಸಗಾತಿಯ ಹೆಸರು ಪೂಜಾ ಅಲಿಯಾಸ್ ಭವಗತಿ ಪೂಜಾ, ಅಲಿಯಾಸ್ ಗಾಡಿ ಪೂಜಾ. ಈಕೆಯನ್ನು ಎಚ್‌ಎಎಲ್ ಪೊಲೀಸರು ಬಂಧಿಸಿ ಸುಮಾರು ಕೋಟ್ಯಂತರ ಮೌಲ್ಯದ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ವರ್ಷಗಳು ಕಳೆದರೂ ಈಕೆಯ ಖತರ್ ನಾಕ್ ವಂಚನೆ ಐಡಿಯಾ ಹೊರಗೆ ಬಂದಿರಲಿಲ್ಲ.

ಚೀಟಿ ಹಾಕುವ ಮೊದಲೇ ಈ ಚೀಟಿಂಗ್ ದಂಪತಿ ಬಗ್ಗೆ ಗೊತ್ತಿರಲಿ !ಚೀಟಿ ಹಾಕುವ ಮೊದಲೇ ಈ ಚೀಟಿಂಗ್ ದಂಪತಿ ಬಗ್ಗೆ ಗೊತ್ತಿರಲಿ !

ಎರಡು ವರ್ಷದ ಹಿಂದೆ ಬಾಣಸವಾಡಿಯಲ್ಲಿರುವ ಜನರಲ್ ಮೋಟರ್ಸ್ ನ ಶೋ ರೂಂಗೆ ಹೋಗಿದ್ದ ಪೂಜಾ ಅಲ್ಲಿಯ ಸೇಲ್ಸ್ ಮ್ಯಾನೇಜರ್ ಅನಂತರಾಜ್ ಎಂಬಾತನನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಇಬ್ಬರೂ ಯೋಜನೆ ರೂಪಿಸಿ ಹೊಸದಾಗಿ ವಾಹನ ಖರೀದಿ ಮಾಡಲು ಬರುವರನ್ನು ಟಾರ್ಗೆಟ್ ಮಾಡುತ್ತಾರೆ. ಅರ್ಧ ಬೆಲೆಗೆ ಶೋ ರೂಂ ವಾಹನ ನೀಡುವುದಾಗಿ ನಂಬಿಸುತ್ತಿದ್ದರು. ಶೋರೂಂಗೆ ಬರುತ್ತಿದ್ದ ಗ್ರಾಹಕರ ಬಳಿ ಮಾತನಾಡಿ ಪೂಜಾ ಬಳಿ ಕಳಿಸುಕೊಡುತ್ತಿದ್ದ ಮ್ಯಾನೇಜರ್. ಬಳಿಕ ಗ್ರಾಹಕರ ಹಣವನ್ನು ಪೂಜಾ ಖಾತೆಗೆ ಜಮೆ ಮಾಡುತ್ತಿದ್ದ. ಹಲವರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಅನಂತರಾಜ್ ನೆರವಿನಿಂದ ವಾಹನ ಪಡೆದುಕೊಂಡು ಬೇರೆಯವರಿಗೆ ಕೊಡುತ್ತಿದ್ದರು. ಖಾಸಗಿ ಹೋಟೆಲ್ ನಲ್ಲಿ ವ್ಯವಹಾರ ಮಾಡಿ ಶೋ ರೂಂ ಹಾಗೂ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದರು.

Women Arrested For Cheats Vehicle Purchaser In Bengaluru

Recommended Video

ಭಾರತೀಯ ಸೈನಿಕರು ಪಾಕಿಸ್ತಾನವನ್ನು ಬಗ್ಗುಬಡಿದು ಇಂದಿಗೆ 50ವರ್ಷ-ಅವಿಸ್ಮರಣೀಯ ವಿಡಿಯೋ ಶೇರ್ ಮಾಡಿದ ಸೇನೆ | Oneindia Kannada

ಖಾಸಗಿ ಕಂಪನಿ ಶೋ ರೂಮ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಭಗವತಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಸುಮಾರು ನಲವತ್ತುಮೂರು ಕಾರು ವಶಪಡಿಸಿಕೊಂಡಿದ್ದಾರೆ. ಇದೇ ರೀತಿ ಮಹಮದ್ ರಫಿ ಎಂಬುವರಿಗೆ ನಾಲ್ಕು ಲಕ್ಷ ರೂ. ಕಡಿಮೆ ಬೆಲೆಗೆ ಕಾರು ಕೊಡಿಸುವುದಾಗಿ ಹನ್ನೆರಡು ಲಕ್ಷ ರೂ. ಡಿಡಿ ತೆಗೆದುಕೊಂಡು ಹೋಗಿ ವಂಚನೆ ಮಾಡಿದ್ದಳು. ಫಾರ್ಚುನರ್ ಕಾರು ಕೊಡಿಸುವ ನೆಪದಲ್ಲಿ ಪೂಜಾ ಮತ್ತು ಗ್ಯಾಂಗ್ ಐವತ್ತು ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದು, ಈ ಕುರಿತ ದೂರು ದಾಖಲಾಗಿದೆ. ಪೂಜಾ ಮತ್ತು ಗ್ಯಾಂಗ್ ವಾಹನ ಖರೀದಿಸುವರನ್ನು ಟಾರ್ಗೆಟ್ ಮಾಡಿ ಮೋಸ ಮಾಡುತ್ತಿದ್ದು, ಇದೀಗ ಎಲ್ಲರೂ ಬಂಧನಕ್ಕೆ ಒಳಗಾಗಿದ್ದಾರೆ. ಎಚ್‌ಎಎಲ್ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

English summary
pooja aliyas Bagavathi women who was cheated for more then fifty peoples has been arrested by Hal police, recovered 43 vehicles Know more ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X