ಕಿರುಕುಳದಿಂದ ಬೇಸತ್ತ ಪತ್ನಿ ಗಂಡನನ್ನೇ ಜಜ್ಜಿ ಹಾಕಿದಳು
ಬೆಂಗಳೂರು, ಮೇ 22: ಹೆಣ್ಣು ಮಕ್ಕಳು ತಮ್ಮ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಕುಡಿದು ಬಂದು ಜಗಳ ಮಾಡುತ್ತಿದ್ದ ಪತಿಯನ್ನು ಪತ್ನಿಯೇ ಹತ್ಯೆಗೈದು ನಾಪತ್ತೆಯಾಗಿದ್ದಾಳೆ.
ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೂಲತಃ ಆಂಧ್ರ ಪ್ರದೇಶದವನಾದ ವಿಜಯ್‌ಕುಮಾರ್ (45) ಎಂಬಾತ ಪತ್ನಿಯಿಂದಲೇ ಹತ್ಯೆಯಾಗಿದ್ದಾನೆ.[ಸುನಂದಾ ಪುಷ್ಕರ್ ಕೇಸ್: ಮೂವರಲ್ಲಿ ಸುಳ್ಳು ಹೇಳಿದ್ದು ಯಾರು?]

ಗಾರೆ ಕೆಲಸ ಮಾಡುತ್ತಿದ್ದ ವಿಜಯ್‌ಕುಮಾರ್ ಲಗ್ಗೆರೆ ಸರ್ವೀಸ್ ರಸ್ತೆ, ಸಾಯಿಬಾಬಾ ದೇವಸ್ಥಾನದ ಹಿಂಭಾಗದಲ್ಲಿ ಪತ್ನಿ ಮಲ್ಲೇಶ್ವರಿ ಮತ್ತು ಮೂವರು ಮಕ್ಕಳೊಂದಿಗೆ ವಾಸವಿದ್ದ. ಪ್ರತಿದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಗುರುವಾರ ಸಂಜೆ ಸಹ ಜಗಳವಾಡಿ ರಂಪ ಮಾಡಿದ್ದ. ಅಕ್ಕಪಕ್ಕದವರು ಬಂದು ಜಗಳ ಬಿಡಿಸಿದ್ದರು.
ತಡರಾತ್ರಿ ಮನೆಗೆ ಬಂದ ವಿಜಯ್, ಮತ್ತೆ ಜಗಳ ತೆಗೆದಿದ್ದಾನೆ. ಬೆಳಗಿನ ಜಾವದವರೆಗೆ ಜಗಳ ನಡೆದಿದೆ. ಗಂಡನ ರಂಪಾಟ ಸಹಿಸಲಾಗದ ಪತ್ನಿ ಕಲ್ಲಿನಿಂದ ಪತಿಯ ತಲೆಗೆ ಹೊಡೆದಿದ್ದಾಳೆ. ಆತ ಸಾವನ್ನಪ್ಪಿರುವುದನ್ನು ಖಚಿತ ಮಾಡಿಕೊಂಡು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮಕ್ಕಳನ್ನು ಕರೆದುಕೊಂಡು ಪರಾರಿಯಾಗಿದ್ದಾಳೆ.[ಸಲ್ಮಾನ್ ರನ್ನು ಜೈಲಿಗೆ ಕಳಿಸಿದ ಹೀರೋ ಈ ಬಾಡಿಗಾರ್ಡ್]
ಬೆಳಗ್ಗೆ ಮನೆಯಲ್ಲಿ ಯಾರೂ ಓಡಾಡದಿರುವುದನ್ನು ಕಂಡು ಅನುಮಾನಗೊಂಡು ಅಕ್ಕಪಕ್ಕದವರು ಮನೆಯೊಳಗೆ ಹೋಗಿ ನೋಡಿದಾಗ ವಿಜಯ್ ರಕ್ತದ ಮಡುವಿನಲ್ಲಿ ಬಿದದ್ದಿರುವುದು ಕಂಡ, ಅರೆಬರೆ ಸುಟ್ಟಿರುವುದು ಕಂಡು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.












Click it and Unblock the Notifications