ಎಲೆಕ್ಟ್ರಾನಿಕ್ ಸಿಟಿಯಿಂದ ವೈಟ್‌ಫೀಲ್ಡ್‌ಗೆ ಬರೋಬ್ಬರಿ 3 ಗಂಟೆ ಪ್ರಯಾಣ: ಟ್ರಾಫಿಕ್‌ಗೆ ಬೇಸತ್ತ ಮಹಿಳೆ ವಿಡಿಯೋ ವೈರಲ್!

ಬೆಂಗಳೂರು ಎಂದರೆ ಮೊದಲು ನೆನಪಾಗುವುದೇ ಟ್ರಾಫಿಕ್ ಜಾಮ್. ಸಿಲಿಕಾನ್ ಸಿಟಿಯಲ್ಲಿ ವಾಹನ ದಟ್ಟಣೆ ಎಂಬುದು ಪ್ರತಿದಿನದ ಅತಿ ದೊಡ್ಡ ತಲೆನೋವು. ಎಷ್ಟೇ ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳು ನಿರ್ಮಾಣವಾದರೂ ಟ್ರಾಫಿಕ್ ಸಮಸ್ಯೆ ಮಾತ್ರ ಇನ್ನು ಬಗೆಹರಿದಿಲ್ಲ.

ಇದೀಗ ಮಹಿಳೆಯೊಬ್ಬರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಿಂದ ವೈಟ್‌ಫೀಲ್ಡ್‌ಗೆ ಪ್ರಯಾಣಿಸಲು ಬರೋಬ್ಬರಿ ಮೂರು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿರುವ ಘಟನೆ ವರದಿಯಾಗಿದೆ. ಈ ಕುರಿತು ಅವರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Woman Documents 3-Hour Bengaluru Traffic Nightmare From Electronic City To Whitefield Road Issue

ನೀ ಯಾದವ್ ಎಂಬ ಮಹಿಳೆ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಅವರು ಆಟೋರಿಕ್ಷಾದಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ ಐಟಿ ಹಬ್ ಆಗಿರುವ ವೈಟ್‌ಫೀಲ್ಡ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ, ಈ ಎರಡು ಪ್ರಮುಖ ಪ್ರದೇಶಗಳ ನಡುವಿನ ಪ್ರಯಾಣ ಅವರಿಗೆ ಅಕ್ಷರಶಃ ನರಕಯಾತನೆ ಎಂದೆನಿಸಿದೆ.

ಕೇವಲ ಕೆಲವು ಕಿಲೋಮೀಟರ್‌ಗಳ ಅಂತರವನ್ನ ಕ್ರಮಿಸಲು ಅವರು ಬರೋಬ್ಬರಿ ಮೂರು ಗಂಟೆಗಳ ಕಾಲ ಆಟೋದಲ್ಲಿಯೇ ಕಳೆಯಬೇಕಾಯಿತು. ಈ ಸುದೀರ್ಘ ಪ್ರಯಾಣದ ಆಯಾಸವನ್ನು ವಿಡಿಯೋದಲ್ಲಿ ವ್ಯಕ್ತಪಡಿಸಿರುವ ಅವರು, "ಇಷ್ಟೆಲ್ಲಾ ಟ್ರಾಫಿಕ್ ಮತ್ತು ಕೆಟ್ಟ ರಸ್ತೆಗಳಿದ್ದರೂ, ಬೆಂಗಳೂರಿನ ಜನರು ಮನೆಯಿಂದ ಹೊರಬರಲು ಹೇಗೆ ಪ್ರೇರಣೆ ಪಡೆಯುತ್ತಾರೋ ನನಗೆ ನಿಜಕ್ಕೂ ತಿಳಿಯುತ್ತಿಲ್ಲ" ಎಂದು ಅಚ್ಚರಿ ಹಾಗೂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ರಸ್ತೆಗಳ ದುಸ್ಥಿತಿ ವಿವರಿಸಿದ ವಿಡಿಯೋ

ವಿಡಿಯೋದಲ್ಲಿ ಕೇವಲ ಟ್ರಾಫಿಕ್ ದಟ್ಟಣೆಯ ಬಗ್ಗೆ ಮಾತ್ರವಲ್ಲ, ಬದಲಾಗಿ ಹದಗೆಟ್ಟಿರುವ ರಸ್ತೆಗಳ ಬಗ್ಗೆಯೂ ನೀ ಯಾದವ್ ಅಸಮಾಧಾನ ಹೊರಹಾಕಿದ್ದಾರೆ. ಆಟೋದಲ್ಲಿ ಪ್ರಯಾಣಿಸುವಾಗಲೇ ತಮ್ಮ ಮೊಬೈಲ್ ಕ್ಯಾಮೆರಾವನ್ನು ರಸ್ತೆಯ ಕಡೆಗೆ ತಿರುಗಿಸಿ, ಅಲ್ಲಿದ್ದ ಗುಂಡಿಗಳು ಮತ್ತು ಸಂಪೂರ್ಣವಾಗಿ ಹಾಳಾಗಿರುವ ರಸ್ತೆಯ ಪರಿಸ್ಥಿತಿಯನ್ನ ವಿಡಿಯೋದಲ್ಲಿ ತೋರಿಸಿದ್ದಾರೆ.

"ಇದು ಬೆಂಗಳೂರಿನ ರಸ್ತೆಗಳ ನಿಜವಾದ ಸ್ಥಿತಿ. ನಾವು ಸಾಗುತ್ತಿರುವುದು ಕನ್ವೆನ್ಷನ್ ಸೆಂಟರ್ ಬಳಿಯ ಮುಖ್ಯ ರಸ್ತೆಯಲ್ಲಿ. ಮುಖ್ಯ ರಸ್ತೆಗಳೇ ಈ ಪಾಟಿ ಹಾಳಾಗಿದ್ದರೆ, ಇನ್ನು ಒಳರಸ್ತೆಗಳ ಕಥೆ ಏನು?" ಎಂದು ನೀ ಯಾದವ್ ಪ್ರಶ್ನಿಸಿದ್ದಾರೆ.

ವಿಡಿಯೋದ ಶೀರ್ಷಿಕೆಯಲ್ಲಿ, " ಇಷ್ಟೊಂದು ಟ್ರಾಫಿಕ್ ಮತ್ತು ಹದಗೆಟ್ಟ ರಸ್ತೆಗಳಿಂದಾಗಿಯೇ ನಾನು ಬೆಂಗಳೂರಿನಲ್ಲಿ ಮನೆಯಿಂದ ಹೊರಬರುವುದನ್ನೇ ಬಹುತೇಕ ನಿಲ್ಲಿಸಿದ್ದೇನೆ. ಇದೇ ಮುಖ್ಯ ಕಾರಣ" ಎಂದು ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಪ್ರತಿಕ್ರಿಯೆ

ಮಹಿಳೆ ಹಂಚಿಕೊಂಡಿರುವ ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ಹಲವು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ. ಬಹುತೇಕರು ಮಹಿಳೆಯ ಮಾತಿಗೆ ದನಿಗೂಡಿಸಿದ್ದು, ಬೆಂಗಳೂರಿನ ದೈನಂದಿನ ಟ್ರಾಫಿಕ್ ಬವಣೆಯನ್ನು ನೆನಪಿಸಿಕೊಂಡಿದ್ದಾರೆ. ಬಳಕೆದಾರರೊಬ್ಬರು ಕಮೆಂಟ್ ಮಾಡಿ, "ಇದಕ್ಕೆ ಪರಿಹಾರ ತುಂಬಾ ಸರಳವಾಗಿದೆ, ನಾವು ಮನೆಯಿಂದ ಹೊರಗೇ ಹೋಗುವುದಿಲ್ಲ" ಎಂದು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿ, "ನೀವು ಪ್ರಯಾಣಿಸುತ್ತಿರುವುದು ಬೆಂಗಳೂರಿನ ಹೊರವಲಯದಲ್ಲಿ, ಹಾಗಾಗಿ ರಸ್ತೆಗಳು ಹೀಗಿವೆ" ಎಂದಿದ್ದಾರೆ. ಇನ್ನೊಬ್ಬರು ಸ್ವಲ್ಪ ಹಾಸ್ಯಭರಿತವಾಗಿ ಕಾಮೆಂಟ್ ಮಾಡುತ್ತಾ, "ಬೆಂಗಳೂರಿನ ಜನರಿಗೆ ಮನೆಯಿಂದ ಹೊರಬರಲು ಇಲ್ಲಿನ ಸುಂದರವಾದ ಹವಾಮಾನವೇ ದೊಡ್ಡ ಪ್ರೇರಣೆ ನೀಡುತ್ತದೆ" ಎಂದು ಕಾಲೆಳೆದಿದ್ದಾರೆ.

ಒಟ್ಟಿನಲ್ಲಿ, ಐಟಿ ಉದ್ಯೋಗಿಗಳು ಪ್ರತಿದಿನ ಎದುರಿಸುತ್ತಿರುವ ಈ ಮೂಲಸೌಕರ್ಯಗಳ ಕೊರತೆ ಹಾಗೂ ಟ್ರಾಫಿಕ್‌ಗೆ ಶಾಶ್ವತ ಪರಿಹಾರ ಎಂದು ಸಿಗಲಿದೆ ಎಂಬುದೇ ಸದ್ಯದ ದೊಡ್ಡ ಪ್ರಶ್ನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+