ವಿಚ್ಛೇದನ.. ಜೀವನಾಂಶ..ಕರ್ನಾಟಕ ಹೈಕೋರ್ಟ್ ಜಡ್ಜ್ ಕೊಟ್ಟ ತೀರ್ಪಿಗೆ ಮಹಿಳೆ ಫುಲ್ ಶಾಕ್..!
ಬೆಂಗಳೂರು, ಆಗಸ್ಟ್ 22: ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಯಾವುದೇ ಅನುಕಂಪ ಹಾಗೂ ಪೂರ್ವಗ್ರಹಕ್ಕೆ ಕಟ್ಟು ಬೀಳದೇ ನ್ಯಾಯಾಧೀಶರು ಕೊಟ್ಟ ಖಡಕ್ ತೀರ್ಪಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾನ್ಯವಾಗಿ ವಿಚ್ಛೇದನ ಬಳಿಕ ನ್ಯಾಯಾಲಯ ಮಹಿಳೆಗೆ ಪತಿಯಿಂದ ಜೀವನಾಂಶ ಕೊಡಿಸುತ್ತದೆ. ಆದರೆ ಈ ಪ್ರಕರಣದಲ್ಲಿ ಮಹಿಳೆಯಿಟ್ಟ ಬೇಡಿಕೆ ಕಂಡು ನ್ಯಾಯಾಧೀಶರೇ ಶಾಂಕಿಗ್ ಆದೇಶ ಹೊರಡಿಸಿದ್ದಾರೆ.
ಮಹಿಳೆಯೊಬ್ಬರು ಪತಿಯಿಂದ ವಿಚ್ಛೇದನ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ 20 ರಂದು ಈ ಪ್ರಕರಣದ ವಿಚಾರಣೆ ನಡೆದಿದ್ದು, ಮಹಿಳೆ ತನ್ನ ಪತಿಯಿಂದ ಕೇಳಿದ ಜೀವನಾಂಶ ಆಲಿಸಿದ ನ್ಯಾಯಾಧೀಶರೇ ತಬ್ಬಿಬ್ಬಾಗಿದ್ದಾರೆ. ಪತಿಯಿಂದ ದೂರಾಗಲು ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿ ಪತಿಯಿಂದ ತಿಂಗಳಿಗೆ 6 ಲಕ್ಷಕ್ಕಿಂತ ಹೆಚ್ಚು ಜೀವನಾಂಶಕ್ಕೆ ಬೇಡಿಕೆಯಿಟ್ಟ ಮಹಿಳೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊದಲು ಎರಡೂ ಕಡೆಯ ವಕೀಲರ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ವಿಚ್ಛೇದನ ಮಂಜೂರು ಮಾಡಲು ಮುಂದಾಗಿದ್ದು, ಮಹಿಳೆಗೆ ನೀಡಬಹುದಾದ ಜೀವನಾಂಶದ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ದಾರೆ. ಈ ವೇಳೆ ಮಹಿಳೆ ಪರ ವಕೀಲರು ಬರೋಬ್ಬರಿ 6,16,300 ರೂಪಾಯಿ ಮಾಸಿಕವಾಗಿ ಜೀವನಾಂಶ ನೀಡುವಂತೆ ಕೇಳಿದ್ದಾರೆ. ಈ ಮಹಿಳೆಯ ಬೇಡಿಕೆ ಕೇಳಿ ನ್ಯಾಯಾಲಯವೇ ಶಾಕ್ ಆಗಿದೆ.
ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಕೂಡ ತೆಗೆದುಕೊಂಡಿರುವ ಪತಿಯಿಂದ ಮಹಿಳೆ 6,16,300 ರೂಪಾಯಿ ಮಾಸಿಕವಾಗಿ ಜೀವನಾಂಶ ಕೇಳಿರುವ ಬಗ್ಗೆ ನ್ಯಾಯಾಧೀಶರು ನೇರವಾಗಿ ಪ್ರಶ್ನಿಸಿದ್ದಾರೆ. ಯಾವುದೇ ಕುಟುಂಬದ ಜವಾಬ್ದಾರಿಯಿಲ್ಲದ ಒಂಟಿ ಮಹಿಳೆಗೆ ಇಷ್ಟೊಂದು ಹಣದ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಮಹಿಳೆಯ ಪರ ವಕೀಲರು ಖರ್ಚು ವೆಚ್ಚಗಳ ವಿವರಣೆ ನೀಡಿದ್ದಾರೆ. ಮೊಣಕಾಲು ನೋವು, ಫಿಸಿಯೋಥೆರಪಿಗೆ ತಿಂಗಳಿಗೆ 4-5 ಲಕ್ಷ. ಶೂ ಹಾಗೂ ಬಟ್ಟೆ ಖರೀದಿಗೆ ತಿಂಗಳಿಗೆ 15,000 ರೂಪಾಯಿ, ಮನೆಯಲ್ಲೇ ಊಟದ ವೆಚ್ಚಗಳಿಗೆ ತಿಂಗಳಿಗೆ 60,000 ರೂಪಾಯಿ ಹಾಗೂ ಹೊರಗಡೆ ಊಟಕ್ಕೆ ಇನ್ನೂ ಕೆಲವು ಸಾವಿರ ರೂಪಾಯಿಗಳು ಸೇರಿದಂತೆ ಒಟ್ಟು ಪ್ರತಿ ತಿಂಗಳು 6,16,300 ರೂಪಾಯಿ ಮಾಸಿಕ ವೆಚ್ಚಕ್ಕೆ ಹಣ ನೀಡಬೇಕು ಎಂದು ಕೇಳಿದ್ದಾರೆ.
ಮಹಿಳೆಯ ಬೇಡಿಕೆ ಕೇಳಿದ ನ್ಯಾಯಾಧೀಶರು, ತಿಂಗಳಿಗೆ 6,16,300 ರೂಪಾಯಿಗಳನ್ನು ಯಾರಾದರೂ ಖರ್ಚು ಮಾಡುತ್ತಾರೆಯೇ?. ನಿಮಗೆ ಸಂಸಾರದ ಬೇರಾವ ಜವಾಬ್ದಾರಿಯೂ ಇಲ್ಲ. ಜೀವನಾಂಶ ಎನ್ನುವುದು ಗಂಡನಿಗೆ ಶಿಕ್ಷೆಯಲ್ಲ. ನೀವು ಕೇಳಿರುವ ಮೊತ್ತ ಸಮಂಜಸವಾಗಿಲ್ಲ. ಒಂದು ವೇಳೆ ಆಕೆ ತಿಂಗಳಿಗೆ 6,16,300 ರೂಪಾಯಿ ಖುರ್ಚು ಮಾಡಬೇಕು ಎಂದುಕೊಂಡರೆ ಆಕೆಯೇ ದುಡಿದು ಗಳಿಸಿಸಲಿ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Paytm: ಝೊಮ್ಯಾಟೊಗೆ ಟಿಕೆಟಿಂಗ್ ವ್ಯಾಪಾರ ಮಾರಿದ ಪೇಟಿಎಂ?
ಈ ವಿಡಿಯೋ ನೋಡಿದ ನಟ್ಟಿಗರು ನ್ಯಾಯಾಧೀಶರ ದಿಟ್ಟ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಬಗ್ಗೆ ಅನುಕಂಪ ತೋರದೆ ಆಕೆಯ ಅವಶ್ಯಕತೆ ಮೀರಿದ ಖರ್ಚಿಗೆ ಎಚ್ಚರಿಕೆ ಕೊಟ್ಟ ನ್ಯಾಯಾಧೀಶರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಕಮೆಂಟ್ ಹಾಕುತ್ತಿದ್ದಾರೆ. ಆ ಮಹಿಳೆ ಕಾಲು ನೋವಿಗೆ ಚಿಕಿತ್ಸೆ ಕೊಡುತ್ತಿರುವ ಡಾಕ್ಟರ್‌ಗೆ ನಮಸ್ಕರಿಸಬೇಕು. ತಿಂಗಳಿಗೆ ಇಂತಹ ಹತ್ತು-ಹದಿನೈದು ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಆತ ಕೋಟ್ಯಧಿಪತಿಯಾಗುತ್ತಾನೆ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಈ ಮಹಿಳೆಯ ಜೀವನಾಂಶ, ಹೈಕೋರ್ಟ್ ಜಡ್ಜ್ ಸಂಬಳಕ್ಕಿಂತ ಹೆಚ್ಚಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಹೀಗೆ ಅನೇಕರು ಈ ಪ್ರಕರಣಕ್ಕೆ ಕಮೆಂಟ್ ಹಾಕಿ ನೋಡಿ ನಗುತ್ತಿದ್ದಾರೆ.












Click it and Unblock the Notifications