• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲೆಕ್ಟ್ರಿಕ್ ವಾಹನಗಳ ನೋಂದಣಿ: ಪೂರ್ವ ಬೆಂಗಳೂರಲ್ಲೇ ಹೆಚ್ಚು

|

ಬೆಂಗಳೂರು,ಫೆಬ್ರವರಿ 10: ಸಾರಿಗೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಪೂರ್ವ ಬೆಂಗಳೂರಿನಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿದೆ.

4,882 ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿದೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ 3812, ಕೋರಮಂಗಲದಲ್ಲಿ 1869, ಕೆಆರ್‌ಪುರಂನಲ್ಲಿ 1,213, ರಾಜಾಜಿನಗರದಲ್ಲಿ 1060, ಬೆಂಗಳೂರು ಉತ್ತರದ ಯಶವಂತಪುರದಲ್ಲಿ 966, ಜ್ಞಾನಭಾರತಿಯಲ್ಲಿ 297, ಯಲಹಂಕದಲ್ಲಿ 214 ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿದೆ.

2020ರಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಶೇಕಡಾ 39ರಷ್ಟು ಏರಿಕೆ

ಬೆಂಗಳೂರಿನಲ್ಲಿ ಮಹಿಂದ್ರಾ ಎಲೆಕ್ಟ್ರಿಕ್,ಓಲಾ ಎಲೆಕ್ಟ್ರಿಕ್ ಹಾಗೂ ಬಾಷ್ ಸೇರಿದಂತೆ ಹಲವು ಫರ್ಮ್‌ಗಳಿವೆ. ಆದರೆ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಒಟ್ಟು 15 ಸಾವಿರ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಮಾತ್ರ ಆಗಿದೆ.

2030ರ ಹೊತ್ತಿಗೆ ತೈಲದೊಂದಿಗೆ ಸಂಚಿರಿಸುವ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಬದಲಾಯಿಸಲಾಗುತ್ತದೆ.ಬೆಂಗಳೂರಿನಲ್ಲಿ ಇದುವರೆಗೆ ಕೇವಲ 14,579 ಎಲೆಕ್ಟ್ರಿಕ್ ವಾಹನಗಳ ನೋಂದಣಿಯಾಗಿದೆ. ಅದರಲ್ಲಿ 9591 ದ್ವಿಚಕ್ರ ವಾಹನಗಳಿವೆ, 254 ಆಟೋ ರಿಕ್ಷಾಗಳಿವೆ, 4734 ಕಾರುಗಳಿವೆ. ಕರ್ನಾಟಕದಲ್ಲಿ ಒಟ್ಟು 26,209 ಇ ವಾಹನಗಳಿವೆ. ಅದರಲ್ಲಿ 19,062 ದ್ವಿಚಕ್ರ ವಾಹನಗಳು, 678 ಅಟೋಗಳು, 6469 ಕಾರುಗಳಿವೆ.

   ರಾಜ್ಯಸಭೆಗೆ ಗುಲಾಂ ನಬಿ ಆಜಾದ್ ವಿದಾಯ- ಭಾವಪೂರ್ವಕವಾಗಿ ಬೀಳ್ಕೊಟ್ಟ ಪ್ರಧಾನಿ ಮೋದಿ | Oneindia Kannada

   ಕರ್ನಾಟಕದಲ್ಲಿ 2.5 ಕೋಟಿ ನೋಂದಾಯಿತ ಕಾರುಗಳಿವೆ. ಅದರಲ್ಲಿ 85.6 ಲಕ್ಷ ವಾಹನಗಳು ಬೆಂಗಳೂರಿನಲ್ಲಿವೆ. ಬೆಸ್ಕಾಂ 126 ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ.

   English summary
   At 4882 Bengaluru east RTO in Indiranagar acoounts for the highest number of electric vehicle registrations in the city,according to Transport Department.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X