Wipro Wage Hike: ಟಿಸಿಎಸ್ ಬಳಿಕ ನೌಕರರ ವೇತನ ಹೆಚ್ಚಳದ ಅಪ್ಡೇಟ್ ಕೊಟ್ಟ ವಿಪ್ರೋ
ಬೆಂಗಳೂರು, ಏಪ್ರಿಲ್ 17: ಖಾಸಗಿ ಉದ್ಯೋಗ ವಲಯದಲ್ಲಿ ಐಟಿ, ಕಾರ್ಪೋರೇಟ್ ಕಂಪನಿಗಳ ನೌಕರರು ಸದ್ಯ ವೇತನ ಹೆಚ್ಚಳ ಘೋಷಣೆ ನಿರೀಕ್ಷೆಯಲ್ಲಿದ್ದಾರೆ. ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಕನ್ಸ್‌ಲ್ಟೆನ್ಸಿ ಸರ್ವೀಸಸ್ (TCS), ವಿಪ್ರೋ ಕಂಪನಿಗಳ ಉದ್ಯೋಗಿಗಳಿಗೆ ಸದರಿ ವಾರ್ಷಿಕ ವೇತನ ಹೆಚ್ಚಳ ತಡವಾಗಬಹುದು ಎನ್ನಲಾಗುತ್ತಿದೆ. ಸದ್ಯ ವಿಪ್ರೋ ಕಂಪನಿಯು ಟಿಸಿಎಸ್ ನಂತರ ವೇತನ ಹೆಚ್ಚಳ ಬಗ್ಗೆ ಅಪ್ಡೇಟ್ ನೀಡಿದೆ.
ಐಟಿ ಕಂಪನಿಗಳು ಈ ವರ್ಷ ಹಣದುಬ್ಬರ, ವಿದೇಶಿ ಸುಂಕ ನೀತಿ ಹಾಗೂ ಇನ್ನಿತರ ಕಾರಣಗಳಿಂದ ವೇತನ ಹೆಚ್ಚಳದಲ್ಲಿ ವಿವೇಚನಾಯುತವಾಗಿ ನಡೆದುಕೊಳ್ಳುತ್ತಿವೆ. ವಿಪ್ರೋ ಪ್ರಸಕ್ತ ಹಣಕಾಸು ವರ್ಷ (FY26) 2026ರಲ್ಲಿ ನೌಕರರ ವೇತನ ಹೆಚ್ಚಳವನ್ನು ಕೊನೆಯ ದಿನಾಂಕದ ವೇಳೆಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ವ್ಯವಹಾರ ಸ್ನೇಹಿ ವಾತಾವರಣ ನೋಡಿಕೊಂಡು ಘೋಷಣೆ ಮಾಡುವ ಸಾಧ್ಯತೆ ಇದೆ.

ವಿಪ್ರೋ ಕಂಪನಿಯು ಪ್ರತಿ ವರ್ಷದಂತೆ ಈ ವರ್ಷವು ವೇತನ ಹೆಚ್ಚಳ ಘೋಷಣೆಗೆ ಸಾಕಷ್ಟು ಸಮಯ ಇದೆ ಎಂದಿದೆ. ಸಾಮಾನ್ಯವಾಗಿ ಕಂಪನಿಗಳು ಮಾರ್ಚ್ 31ರ ಹಳೆಯ ಹಣಕಾಸು ವರ್ಷಾಂತ್ಯಕ್ಕೆ ಕಾರ್ಮಿಕರ ಅಪ್ರೈಸಲ್ ಪ್ರಕ್ರಿಯೆ ಪೂರ್ಣಗೊಳಿಸಿರುತ್ತವೆ. ಆದರೆ ವಿಪ್ರೋ ಕಳೆದ 2024-2025ರ ಸಾಲಿನಲ್ಲಿ ಸಹ ಸೆಪ್ಟಂಬರ್‌ನಿಂದ ಅಕ್ಟೋಬರ್ ನಲ್ಲಿ ವಾರ್ಷಿಕ ವೇತನ ಹೆಚ್ಚಿಸಿತ್ತು. ಈ ವರ್ಷವು ಇದೇ ತಿಂಗಳು ಸಮೀಪ ಬಂದಾಗ ಘೋಷಿಸುವುದಾಗಿ ತಿಳಿಸಿದೆ.
ವಿಪ್ರೋ ಮಾನವ ಸಂಪನ್ಮೂಲ ಮುಖ್ಯ ಅಧಿಕಾರಿ ಸೌರಭ್ ಗೋವಿಲ್ ಅವರು ಇತ್ತೀಚೆಗೆ ಇತ್ತೀಚೆಗೆ ಕಂಪನಿಯು ಕಳೆದ ನಾಲ್ಕು ತ್ರೈಮಾಸಿಕದಲ್ಲಿ ಮಾಡಿದ ಸಾಧನೆ, ಫಲಿತಾಂಶಗಳನ್ನು ವಿವರಿಸಿದರು. ಈ ವೇಳೆ ವೇತನ ಹೆಚ್ಚಳಕ್ಕೆ ಸಮಯ ವಿರುದ್ದು, ದಿನಾಂಕ ಹತ್ತಿರ ಬಂದಾಗ ನಿರ್ಧಾರ ಪ್ರಕಟಿಸಲಾಗುವುದು ಎಂದಿದ್ದಾರೆ. ಇದರಿಂದಾಗಿ ಈ ವರ್ಷ ವೇತನ ಏರಿಕೆ ಆಗುತ್ತಾ ಇಲ್ಲವಾ? ಎಂಬ ಆತಂಕ ನೌಕರರಲ್ಲಿದೆ.
ವಿದೇಶಿ ಸುಂಕ ನೀತಿ: ಕಂಪನಿಗಳ ವಹೀವಾಟು ಮೇಲೆ ಪ್ರಭಾವ?
ವಿಪ್ರೋ ಕಳೆದ ವರ್ಷ ಸೆಪ್ಟೆಂಬರ್‌ಗೂ ಮೊದಲೇ ವೇತನ ಹೆಚ್ಚಳ ಪ್ರಕಟಿಸಿತ್ತು. 2023 ರಲ್ಲಿ ಡಿಸೆಂಬರ್ ಹೊತ್ತಿಗೆ ವೇತನ ಜಾರಿಗೊಳಿಸಿತ್ತು. ಈ ವರ್ಷ ಅಮೆರಿಕಾ ತೆರಿಗೆ ನೀತಿ, ಹಣ್ಣದುಬ್ಬರ, ಆರ್ಥಿಕ ಹಿಂಜರಿಕೆ ಸೇರಿದಂತೆ ಮೊದಲಾದ ಆರ್ಥಿಕ ಕಳವಳ ಇರುವ ಕಾರಣ ವೇತನ ಹೆಚ್ಚಳ ಕುರಿತು ಕಂಪನಿಗಳು ಸೂಕ್ಷ್ಮವಾಗಿ ಗಮನಿಸಿ ನಿರ್ಧಾರ ಕೈಗೊಳ್ಳುತ್ತಿವೆ.
ಅಮೆರಿಕಾ ಸುಂಕ ನೀತಿಯು ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮೇಲೆ ಮಾತ್ರವೇ ಪರಿಣಾಮ ಬೀರುತ್ತಿಲ್ಲ. ಕಂಪನಿಗಳ ವಹೀವಾಟು, ನೌಕರರ ಉದ್ಯೋಗ ವೇತನ ಮೇಲೂ ಪ್ರಭಾವ ಬೀರುತ್ತಿದೆ. ಹೀಗಾಗಿ ಐಟಿ ವಲಯಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಅನಿಶ್ಚಿತತೆ ಕಾಡುತ್ತಿದೆ. ಇದರಿಂದ ವೇತನ ಹೆಚ್ಚಳದಲ್ಲಿ ಒಂದಷ್ಟು ನಾಟಕೀಯ ಬೆಳವಣಿಗೆ ನಡೆದರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications