ವಿಪ್ರೋದಲ್ಲಿ ಪ್ರೊಜೆಕ್ಟ್ ಇಂಜಿನಿಯರ್ ಹುದ್ದೆ ಖಾಲಿಯಿದೆ
ಬೆಂಗಳೂರು, ಮಾ. 24: ಗ್ಲೋಬಲ್ ಇನ್ ಫಾರ್ ಮೇಶನ್ ಟೆಕ್ನಾಲಜಿ ದಿಗ್ಗಜ ವಿಪ್ರೋದಲ್ಲಿ ಕೆಲಸ ಮಾಡುವ ಇಚ್ಛೆ ನಿಮಗಿದೆಯಾ? ಕಳೆದ ವರ್ಷವಷ್ಟೇ ಇಂಜಿನಿಯರಿಂಗ್ ಪದವಿ ಮುಗಿಸಿದ್ದಿರಾ? ಹಾಗಾದರೆ ನಿಮಗೆ ಸುವರ್ಣ ಅವಕಾಶವೊಂದು ಒದಗಿ ಬಂದಿದೆ.
2014 ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದವರನ್ನು ನೇಮಕ ಮಾಡಿಕೊಳ್ಳಲು ವಿಪ್ರೋ ಮುಂದಾಗಿದೆ. ಪ್ರೊಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.[ಬೆಸ್ಕಾಂನಲ್ಲಿ 238 ಹುದ್ದೆಗಳು ಖಾಲಿ ಇವೆ ಅರ್ಜಿ ಸಲ್ಲಿಸಿ]

ಯಾವ ಪೋಸ್ಟ್: ಪ್ರೊಜೆಕ್ಟ್ ಇಂಜಿನಿಯರ್
ಟಾರ್ಗೆಟ್ ಬ್ಯಾಚರ್: 2014 ರಲ್ಲಿ ಇಂಜಿನಿಯರಿಂಗ್ ಮುಗಿಸಿದವರಿಗೆ ಮಾತ್ರ
ವಿದ್ಯಾರ್ಹತೆ: ಬಿಇ ಅಥವಾ ಬಿಟೆಕ್ (ಸಿಎಸ್/ಐಟಿ.ಐಎಸ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದವರಿಗೆ ಮಾತ್ರ)
ಮಾನದಂಡ: ಇಂಜಿನಿಯರಿಂಗ್ ನಲ್ಲಿ ಶೇ. 65, ಪಿಯುಸಿಯಲ್ಲಿ ಶೇ. 60 (ಯಾವುದೇ ವಿಷಯ ಬ್ಯಾಕ್ ಉಳಿದಿರಬಾರದು)
ಸೇವಾ ಅವಧಿ- ಮೊದಲ ಸೇವಾ ಅವಧಿ 15 ತಿಂಗಳದ್ದಾಗಿರುತ್ತದೆ.[ಐಸಿಐಸಿಐ ಬ್ಯಾಂಕಿನಲ್ಲಿ ಉದ್ಯೋಗ ಅವಕಾಶ]
ಆಯ್ಕೆ ಹೇಗೆ
ರೌಂಡ್ 1 : ಲಿಖಿತ ಪರೀಕ್ಷೆ
ರೌಂಡ್ 2: ಲಿಖಿತ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದವರನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
ಹೆಚ್ಚಿನ ಮಾಹಿತಿಗೆ ವೆಬ್ ತಾಣ: www.wipro.com ಕ್ಕೆ ಲಾಗ್ ಇನ್ ಆಗಬಹುದು












Click it and Unblock the Notifications