• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಸಲಹೆ: ಡಿಆರ್ ಡಿಓ ನಡೆ ಏನು?

By Dr Anantha Krishnan M
|

ಬೆಂಗಳೂರು, ನ. 6: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಡಿಆರ್ ಡಿಓ (Defence Research and Development Organisation) ಕಚೇರಿಗೆ ಭೇಟಿ ನೀಡಿದ್ದಾಗ ಕೊಟ್ಟ ಸಲಹೆ ಸಂಸ್ಥೆಯಲ್ಲಿ ಸಂಚಲನ ಸೃಷ್ಟಿಸಿದೆ.

ಡಿಆರ್ ಡಿಓ ಪ್ರಶಸ್ತಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವಾಗ ನರೇಂದ್ರ ಮೋದಿ ಅವರು, 35 ವರ್ಷಕ್ಕಿಂತ ಕೆಳಗಿನ ವಿಜ್ಞಾನಿಗಳಿಗಾಗಿ ಐದು ಪ್ರತ್ಯೇಕ ಪ್ರಯೋಗಾಲಯಗಳನ್ನು ನೀಡಬೇಕೆಂದು ಸಲಹೆ ನೀಡಿದ್ದರು. ಈ ಸಲಹೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ಕುರಿತು 'ಒನ್ ಇಂಡಿಯಾ'ಕ್ಕೆ ಪ್ರತಿಕ್ರಿಯೆ ನೀಡಿರುವ ಡಿಆರ್ ಡಿಓ ಪ್ರಧಾನ ನಿರ್ದೇಶಕ (ಏರೋ) ಡಾ. ಕೆ. ತಮಿಳುಮಣಿ, "ಪ್ರಧಾನಿ ನೀಡಿದ್ದ ಸಲಹೆಗೆ ಭಾರೀ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಐದು ಪ್ರಯೋಗಾಲಯಗಳನ್ನು ಹಸ್ತಾಂತರಿಸಲೇಬೇಕಾದ ಅನಿವಾರ್ಯತೆಗೆ ಒಳಗಾಗಿದ್ದೇವೆ. ಈ ಸಲಹೆಗೆ ಡಿಆರ್ ಡಿಓ ಕಚೇರಿಯೊಳಗೇ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಕ್ರಮ ಕೈಗೊಂಡರೆ, ಯೋಜನೆ ಜಾರಿ, ಆರ್ಥಿಕ ನಿರ್ವಹಣೆ, ಆಡಳಿತ ಸಾಮರ್ಥ್ಯಗಳು ಹಾಗೂ ಮುಖ್ಯವಾಗಿ ನಾಯಕತ್ವ ಬೆಳವಣಿಗೆಗೆ ಸಹಾಯಕವಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಐಟಿ ಪದವೀಧರಗೆ 22 ಕೋಟಿ ಮೌಲ್ಯದ ಯೋಜನೆ: ನಾವು ಈಗಾಗಲೇ ಫಾಸ್ಟ್-ಟ್ರಾಕ್ ತಾಂತ್ರಿಕತೆ ಬೆಳವಣಿಗೆ ಯೋಜನೆಯನ್ನು ಆಗ್ರಾದಲ್ಲಿರುವ Aerial Delivery Research & Development Establishmen ಸಂಸ್ಥೆಯಲ್ಲಿ ಓರ್ವ ಯುವ ಐಐಟಿ ಪದವೀಧರಗೆ ನೀಡಿದ್ದೇವೆ. ಅವರು 22 ಕೋಟಿ ರೂ. ಮೌಲ್ಯದ ಭವಿಷ್ಯದ ವಾಯುನೌಕೆ ತಾಂತ್ರಿಕತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆ ನಿರತರಾಗಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿರುವ Aeronautical Development Establishment ನಲ್ಲಿ ಯುವ ತಂಡಕ್ಕೆ 'ರೋಟರಿ ಯುಎಇ' ಯೋಜನೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಮಹತ್ವದ ಯೋಜನೆಗಳಲ್ಲಿ ಯುವ ವಿಜ್ಞಾನಿಗಳನ್ನು ಎಂದೂ ಕಡೆಗಣಿಸಿಲ್ಲ. ಅನೇಕ ಪ್ರಮುಖ ಯೋಜನೆಗಳಲ್ಲಿ ಯುವ ವಿಜ್ಞಾನಿಗಳು ಯೋಜನಾ ನಿರ್ದೇಶಕರಾಗಿದ್ದಾರೆ. ಹೈದರಾಬಾದ್ ನಲ್ಲಿಯೇ ಇಬ್ಬರು ಯುವ ವಿಜ್ಞಾನಿಗಳು Research Centre Imarat (RCI) and the Advanced System Laboratory (ASL) ಎಂಬ ಪ್ರಯೋಗಾಲಯಗಳನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಯುವ ಜನತೆಯನ್ನು ಪ್ರೋತ್ಸಾಹಿಸಲು ಸ್ವತಃ ಪ್ರಧಾನಿಯವರೇ ಸೂಚಿಸಿರುವ ಕಾರಣ ಯುವ ವಿಜ್ಞಾನಿಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತದೆ ಎಂದು ಡಿಆರ್ ಡಿಓ ವಕ್ತಾರ ರವಿ ಗುಪ್ತಾ ಹೇಳಿದರು.

ಯೋಜನೆ ಅದ್ಭುತ, ಜಾರಿ ಕಷ್ಟ: ವಿಮಾನಯಾನ ಇತಿಹಾಸಕಾರ, ಲೇಖಕ ಹಾಗೂ ಪ್ರಕಾಶಕ ಪುಷ್ಪಿಂದರ್ ಸಿಂಗ್, "ನರೇಂದ್ರ ಮೋದಿ ಅವರ ಯೋಜನೆ ಅದ್ಭುತವಾಗಿದೆ. ಆದರೆ, ಜಾರಿಗೆ ತರುವುದು ಅಷ್ಟೇ ಕಷ್ಟಕರ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಪ್ರಯೋಗಾಲಯ ನಿರ್ಮಾಣ ಅನಿವಾರ್ಯ: ಪ್ರಧಾನಿ ಸಲಹೆಗೆ ಹೆಸರು ಹೇಳಲಿಚ್ಛಿಸದ ಡಿಆರ್ ಡಿಓ ನಿರ್ದೇಶಕರೊಬ್ಬರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. "35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ವಿಜ್ಞಾನಿಗಳಿಗೆ ಪ್ರಯೋಗಾಲಯ ಹಸ್ತಾಂತರಿಸುವ ವಿಚಾರ ಕೇಳಲು ಮಾತ್ರ ಅದ್ಭುತವಾಗಿದೆ. ಆದರೆ, ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ" ಎಂದಿದ್ದಾರೆ.

"ಕಿರಿಯ ವಿಜ್ಞಾನಿಗಳಿಗೆ ಪ್ರಯೋಗಾಲಯ ಹಸ್ತಾಂತರಿಸಿದರೆ ಹಿರಿಯ ವಿಜ್ಞಾನಿಗಳು ತಮಗಿಂತ ಕಿರಿಯರಿಗೆ ವರದಿ ಮಾಡಿಕೊಳ್ಳಲು ಮುಜುಗರಪಡುತ್ತಾರೆ, ಗೊಂದಲ ಉಂಟಾಗುತ್ತದೆ. ಆದ್ದರಿಂದ ಕಿರಿಯರಿಗಾಗಿ ಐದು ಚಿಕ್ಕ ಪ್ರಯೋಗಾಲಯಗಳನ್ನು ನಿರ್ಮಿಸುವುದು ಅನಿವಾರ್ಯ. ಈ ಪ್ರಯೋಗಾಲಯಗಳಿಗೆ ನೀಡಬೇಕಾದ ಐದು ಯೋಜನೆಗಳನ್ನು ಗುರುತಿಸಬೇಕು. ಅಲ್ಲದೆ, ಮುಂದೆ ಸಮಸ್ಯೆ ಉಂಟಾಗದಿರಲು ಈ ಪ್ರಯೋಗಾಲಯಗಳು ಓರ್ವ ಪ್ರಧಾನ ನಿರ್ದೇಶಕರಿಗೆ ವರದಿ ಮಾಡಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.

"ಆದರೆ, ಡಿಆರ್ ಡಿಓ ಒಳಗೆ ಅತಿ ಎನ್ನುವಷ್ಟು ಮಜಲುಗಳಿವೆ. ರಾಮ ರಾವ್ ಸಮಿತಿ ವರದಿಯನ್ನು ಜಾರಿಗೆ ತರಲಾಗಿದ್ದರೂ ಇನ್ನಷ್ಟು ಸುಧಾರಣೆ ಅಗತ್ಯವಾಗಿದೆ" ಎಂದಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?: ಡಿಆರ್ ಡಿಓ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಹೀಗೆ... "ಆರ್ ಆ್ಯಂಡ್ ಡಿ ಕಾರ್ಯಕ್ರಮ ಮುನ್ನಡೆಸುವ ಜವಾಬ್ದಾರಿಯನ್ನು ಯುವ ವಿಜ್ಞಾನಿಗಳಿಗೆ ನೀಡಲು ಹಾಗೂ ಅದರಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ".

"ಯುವ ವಿಜ್ಞಾನಿಗಳಿಗೆ ಹಸ್ತಾಂತರಿಸಲು ಡಿಆರ್ ಡಿಓ ಅಡಿಯಲ್ಲಿರುವ ಐದು ಪ್ರಯೋಗಾಲಯಗಳನ್ನು ಗುರುತಿಸಿ. ಇಲ್ಲಿ 35 ವರ್ಷಗಳಿಗಿಂತ ಕಡಿಮೆ ವಯಸ್ಸಿನ ವಿಜ್ಞಾನಿಗಳು ಮಾತ್ರ ಕೆಲಸ ಮಾಡುತ್ತಾರೆ. ಈ ಪ್ರಯೋಗಾಲಯಗಳಲ್ಲಿ ಎಲ್ಲ ರೀತಿಯ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕು. ಇತರರಿಗಿಂತ ಮೊದಲು ಡಿಆರ್ ಡಿಓ ವ್ಯವಸ್ಥೆ ರೂಪಿಸಬೇಕು. ಇನ್ನೂ ಹೆಚ್ಚು ವೇಗವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಸೈನಿಕರ ದೈನಂದಿನ ಜೀವನ ಇನ್ನಷ್ಟು ಆರಾಮವಾಗಲು ಡಿಆರ್ ಡಿಓ ಕ್ರಮ ಕೈಗೊಳ್ಳಬೇಕು. ಡಿಆರ್ ಡಿಓ ವಿಜ್ಞಾನಿಗಳು ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು."

ಈ ವಿಷಯ ವರದಿಯಾಗಿ ಹೆಚ್ಚು ಚರ್ಚಿತವಾಗುತ್ತಿದ್ದಂತೆಯೇ ನಾಲ್ವರು ವಿಜ್ಞಾನಿಗಳು ಸೇವಾ ಅವಧಿ ವಿಸ್ತರಣೆಗಾಗಿ ಸಲ್ಲಿಸಿದ್ದ ಮನವಿಯನ್ನು ಪ್ರಧಾನ ಮಂತ್ರಿ ಕಚೇರಿ ತಡೆಹಿಡಿದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇದು ಹಿರಿಯ ವಿಜ್ಞಾನಿಗಳಲ್ಲಿ ಅಸಮಾಧಾನ ಹುಟ್ಟಿಸಿದೆ. ಡಿಆರ್ ಡಿಓ ನಿವೃತ್ತ ವಿಜ್ಞಾನಿಯೋರ್ವರು ಪ್ರತಿಕ್ರಿಯಿಸಿದ್ದು, "ವಿಜ್ಞಾನಿಗಳ ನಿವೃತ್ತಿಗೆ ನಿಗದಿಪಡಿಸಿರುವ 60 ವರ್ಷ ವಯಸ್ಸು ಕಡಿಮೆಯಾಗಿದೆ. ಅನೇಕ ರಾಷ್ಟ್ರಗಳಲ್ಲಿ ವಿಜ್ಞಾನಿಗಳು 70 ವರ್ಷಕ್ಕಿಂತ ಹೆಚ್ಚು ವಯಸ್ಸಿನವರೆಗೆ ಕೆಲಸ ಮಾಡುತ್ತಾರೆ" ಎಂದಿದ್ದಾರೆ.

ಭಾರತದಲ್ಲಿ ವಿಜ್ಞಾನಿಗಳು 60 ವರ್ಷ ವಯಸ್ಸಿನ ನಂತರ ಎರಡು ಬಾರಿ ತಲಾ ಎರಡು ವರ್ಷಗಳವರೆಗೆ ಸೇವಾ ಅವಧಿ ವಿಸ್ತರಿಸಿಕೊಳ್ಳಲು ಅವಕಾಶವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
While addressing a DRDO award function in August this year, PM Modi had asked the top brass to set aside five laboratories for scientists below 35 years - a message that went viral on social media sites. But now many top brass of DRDO are not accepting this. They say it only sounds well, but not practical.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more