ಸಾಯುವ ಕೊನೆ ಕ್ಷಣ ಗಂಡನ ಮೇಲಿನ ಪ್ರೀತಿ ಬಗ್ಗೆ ಪತ್ರ ಬರೆದಿಟ್ಟು ವಿವಾಹಿತೆ ಆತ್ಮಹತ್ಯೆ!
ಬೆಂಗಳೂರು, ಮಾ. 19: ಮದುವೆಯಾಗಿ ಒಂದು ವರ್ಷವೂ ಆಗಿಲ್ಲ. ಗಂಡನ ಕೆಟ್ಟ ನಡೆಯಿಂದ ಬೇಸತ್ತ ಮುಗ್ಧ ಹೆಣ್ಣು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಸಾವಿನಲ್ಲೂ ತನ್ನ ಗಂಡ ಈಗಲಾದರೂ ಬದಲಾಗಲಿ ಎಂದು ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರ ಎಂಥವರಿಗೂ ಕಣ್ಣೀರು ತರಿಸುತ್ತದೆ. ಆತ್ಮಹತ್ಯೆಗೆ ಕೊರಳು ಒಡ್ಡುವ ಮುನ್ನ ಗಂಡ ಒಂಟಿಯಾಗುತ್ತಾನೆ ಎಂಬ ಕಾಳಜಿಯನ್ನು ಅಕ್ಷರದಲ್ಲಿ ಕಟ್ಟಿಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆ ಬರೆದಿರುವ ಪತ್ರ ಓದಿದ್ರೆ ಕಣ್ಣೀರು ಬರುವಂತಿದೆ.
ಇಂತಹ ಭಾವುಕ ಹೆಣ್ಣು ಮಗಳು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿದಳು ಅಂತ ಅನ್ನಿಸುತ್ತದೆ. ಅಂದಹಾಗೆ ಆಕೆ ಬೇರೆ ಯಾರೂ ಇಲ್ಲ. ವಿಂದ್ಯಾಶ್ರೀ. ಗಾಯತ್ರಿ ನಗರದ ನಿವಾಸಿ. ತಡರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ತನ್ನ ಮಗಳ ಸಾವಿಗೆ ಆಕೆಯ ಗಂಡ ರಾಕೇಶ್ ಕಾರಣ ಎಂದು ಮೃತಳ ತಂದೆ ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತ ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪೋಷಕರಿಗೆ ಒಪ್ಪಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ವಿಂದ್ಯಾಶ್ರೀ ಬರೆದಿರುವ ಪತ್ರದ ಸಾರಾಂಶ ಇಲ್ಲಿದೆ ನೋಡಿ.
ಹೈ, ರಾಖಿ, ಐ ಲವ್ ಯೂ ಕಣೋ... ಐ ರಿಯಲ್ಲೀ ಲವ್ ಯೂ...ನಾನು ಏನು ಮಾಡಲೀ. ನಾನು ನಿನಗೆ ಇಷ್ಟ ಇಲ್ಲ. ನಿನ್ನ ಲೈಫ್ ನ್ನು ಹಾಳು ಮಾಡಿದೆ. ಜತೆಗೆ ನನ್ನ ಲಫ್ ನ್ನೂ.. ನನ್ನ ಅಮ್ಮ ಅಪ್ಪನ ಖುಷಿಯನ್ನು ಹಾಳು ಮಾಡಿದೆ. ನೀನು ಏನು ಅಂತ ಗೊತ್ತಿದ್ದೂ ನಾನು ಮದುವೆಯಾದೆ. ಬಟ್ ನನಗೆ ಅವಾಗೇ ನೀನು ಒಳ್ಳೆಯವನು ಕಣೋ.. ಅವಾಗ ನೀನು ಏನು ಅಂತ ಅಷ್ಟಾಗಿ ಗೊತ್ತಿರಲಿಲ್ಲ. ಆಮೇಲೆ ಮದುವೆ ಆದಮೇಲೆ ಗೊತ್ತಾಯಿತು ಕಂಪ್ಲೀಟ್ ಆಗಿ ನೀನು ಏನು ಅಂತ. ನೀನು ಈತರ ಇದ್ರೆ ಕಷ್ಟ ಕಣೋ.. ಚೇಂಜ್ ಆಗಬೇಕು. ನಿಮ್ಮ ಅಮ್ಮ ನಿನಗೆ ಸರಿಯಾಗಿ ಬುದ್ಧಿ ಕಲಿಸಿಲ್ಲ. ಹೆಣ್ಣು ಮಕ್ಕಳು ಅಂದ್ರೆ ಗೊಂಬೆ ತರ ಟ್ರೀಟ್ ಮಾಡೋಕೆ ಹೇಳಿಕೊಟ್ಟಿದ್ದಾರೆ. ಗರ್ಲ್ ಅಂದ್ರೆ ಕೇವಲ ಹಾಸಿಗೆಗೆ ಮಾತ್ರ ಸೀಮಿತ ಅಂತ ಭಾವಿಸಬೇಡ. ಅವರಿಗೆ ಭಾವನೆಗಳು ಇರುತ್ತವೆ, ಜೀವನ ಇರುತ್ತೆ ಅಂತ ಅರ್ಥ ಮಾಡಿಕೋ. ಅವರು ಕೇವಲ ಸೆಕ್ಸ್ ಮೆಟೀರಿಯಲ್ಸ್ ಅಲ್ಲ. ನೀನು ನಿನ್ನ ಜೀವನದಲ್ಲಿ ತುಂಬಾ ಹುಡುಗಿಯರ ಜತೆ ಆಟ ಆಡಿದ್ದೀಯ. ಬಟ್ ಯಾಕೆ ನನ್ನೇ ಮದುವೆಯಾದೆ ?

ಲೈಫ್ ಟೈಮ್ ಆಟ ಆಡಿಸೋಕಾ ರಾಖಿ? ನೀನು ನನ್ನನ್ನ ಬರೀ ಕೆಲಸ ಮಾಡಿಸೋಕೆ ಮದುವೆ ಆಗಿದ್ದೀಯ ಕಣೋ.. ನಿನ್ನ ಕಡೆಯಿಂದ ಸಿಗಬೇಕಾದ ಪ್ರೀತಿ ಹಾರೈಕೆ ನನಗೆ ಸಿಗ್ತಿಲ್ಲ ಕಣೋ.. ನೀನು ನಲ್ಲಲ್ಲಿ ಏನು ನಿರೀಕ್ಷೆ ಮಾಡ್ತೀಯೋ ಅಷ್ಟೇ ಬೇಕು. ನಾನು ನಿನ್ನ ತಿದ್ದೋಕೆ ತುಂಬಾ ಟ್ರೈ ಮಾಡ್ದೆ. ಆದ್ರೆ ನಿನಗೆ ಮಾತ್ರ ನನ್ನಲ್ಲಿನ ತಪ್ಪು ಮಾತ್ರನೇ ಕಾಣಿಸುತ್ತಿತ್ತು. ಕನಿಷ್ಠ ಆದ್ರೂ ನಿನ್ನ ಪ್ರೆಂಡ್ ಆಗಿ ಇರಬೇಕಿತ್ತು. ರಮ್ಯಾ ಜತೆ ಇದ್ದಾಗ ನಾನು ವಾಪಸು ನಿನ್ನ ಜತೆ ಮಾತನಾಡಬಾರದಿತ್ತು. ನೀನು ನನ್ನ ಲೈಫ್ ನಲ್ಲಿ ಬರಲೇ ಬಾರದಿತ್ತು. ಮೊದಲೇ ಚೆನ್ನಾಗಿ ಇದ್ದೆ ಕಣೋ ಪ್ರತಿ ಕ್ಷಣವನ್ನೂ ಖುಷಿಯಿಂದ ಕಳೆಯುತ್ತಿದ್ದೆ. ನೀನು ಬಂದಾಗಿನಿಂದ ನನ್ನ ಜೀವನದಲ್ಲಿ ನೋವು ಬಿಟ್ರೆ ಏನೂ ಸಿಗಲಿಲ್ಲ. ಆದ್ರೂ ನಾನು ಯಾಕೆ ನಿನ್ನ ಹಿಂದೆ ಬಿದ್ದಿರುತ್ತಿದ್ದೆ ಅಂತ ಗೊತ್ತಾಗಲೇ ಇಲ್ಲ. ಅದೇನು ನಾಟಕ ಆಡ್ತೀಯೋ ಯಪ್ಪಾ ಗೊತ್ತಿಲ್ಲ.

ಮಾತಾಡಿ, ಮಾತಾಡಿ ಯಾರನ್ನು ಬೇಕಾದ್ರೂ ಹಾಕೊಳ್ತೀಯ ನೀನು, ಅಷ್ಟೇ ಚಲಾಕಿ ಇದ್ದೀಯ, ಹುಡುಗಿಯರನ್ನು ಬೀಳಿಸು ವಿಷಯದಲ್ಲಿ ಬಿಟ್ರೆ ಲೈಫ್ ನಲ್ಲಿ ಉದ್ದಾರ ಆಗೋದ್ರ ಬಗ್ಗೆ ಯೋಜನೆ ಮಾಡಿದ್ರೆ ಇರ್ತಿದ್ದೆ. ನೀನು ಮಾಡಿರೋ ದರಿದ್ರ ಕೆಲಸಗಳಿಂದ ನಿನಗೆ ಬಂದಿರೋ ಶಾಪಗಳಿಂದ ನಿಮ್ಮ ಅಮ್ಮ ಬೇಗ ಹೋಗಿಬಿಟ್ರು. ಆದ್ರೂ ನೀನು ಬುದ್ಧಿ ಕಲಿಯಲಿಲ್ಲ. ಇವಾಗ ಇನ್ನೊಂದು ತರಾ. ಥೂ.. ಈಗ್ಲೂ ನಿನ್ನ ಇಷ್ಟ ಪಡ್ತೀನಿ.. ಯಾಕೆಂದ್ರೆ ನೀನು ಒಬ್ಬನೇ ಆಗೋಗ್ತೀಯ ಅಂತ ಕರ್ಟಸಿನಾ ಗೊತ್ತಾಗ್ತಿಲ್ಲ. ನಿಜ ನೀನು ಸರಿಯಿಲ್ಲ ರಾಖಿ, ನಿನ್ನಂತ ಕೆಟ್ಟೋರ್ನ ನಾನು ಯಾರನ್ನೂ ನೋಡಿಲ್ಲ. ನೀನು ನಿಜ ಮನುಷ್ಯನೇ ಅಲ್ಲ, ನೀನು ಸ್ಯಾಡಿಸ್ಟ್... ಸೈಕೋ.. ನಾನು ನನ್ನ ಜೀವನದಲ್ಲಿ ಈವರೆಗೂ ನೋಡಲಾರದಂತಹ ಕೆಟ್ಟ ವ್ಯಕ್ತಿ ನೀನು.. ಬೈ....
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications