• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ತಿಗಾಗಿ ಗಂಡನ 25 ಮೂಳೆ ಮುರಿದು ಪುಡಿ ಮಾಡಿದ ರೌಡಿ ಹೆಂಡ್ತಿ!

|
Google Oneindia Kannada News

ಬೆಂಗಳೂರು, ಅ. 29: ಆಸ್ತಿಗಾಗಿ ಪತ್ನಿಯನ್ನು ಪೀಡಿಸಿದ ಪ್ರಕರಣಗಳೇ ಜಾಸ್ತಿ. ಆದರೆ ಇಲ್ಲೊಂದು ಪ್ರಕರಣ ಇದಕ್ಕೆ ತದ್ವಿರುದ್ಧ. ಆಸ್ತಿಗಾಗಿ ಗಂಡನ ಕೈಕಾಲು ಸೇರಿ 25 ಮೂಳೆ ಮುರಿದು ಹಲ್ಲೆ ಮಾಡಿ ಪತ್ನಿ ಎಸ್ಕೇಪ್ ಆಗಿದ್ದಾಳೆ. ಪತ್ನಿಯಿಂದ ಹಲ್ಲೆಗೆ ಒಳಗಾಗಿರುವ ಪತಿ ಹಾಸಿಗೆ ಹಿಡಿದಿದ್ದಾನೆ.

ಅಂದಹಾಗೆ ಹಲ್ಲೆಗೆ ಒಳಗಾದ ವ್ಯಕ್ತಿ ಸುರೇಶ್ ಎಂ. ಗಂಡನ ಮೂಳೆ ಮುರಿದು ಪರಾರಿಯಾದವಳು ಅರುಣ್ ಕುಮಾರಿ. ಬೆಂಗಳೂರಿನ ಕೆ.ಆರ್. ಪುರದಲ್ಲಿ ನಡೆದಿದೆ. ರೌಡಿ ಹೆಂಡತಿಯಿಂದ ಹಲ್ಲೆಗೆ ಒಳಗಾಗಿರುವ ಸುರೇಶ್ ವಿಡಿಯೋ ಮಾಡಿ ತನ್ನ ನೋವು ತೊಡಿಕೊಂಡಿದ್ದಾನೆ.

ಏನಿದು ಕಥೆ: ಸುರೇಶ್ ಮೊದಲು ಮದುವೆಯಾಗಿದ್ದರು. ಕೌಟುಂಬಿಕ ಕಲಹದಿಂದ ಬೇಸತ್ತು ಮೊದಲ ಪತ್ನಿಗೆ ಡಿವೋರ್ಸ್ ನೀಡಿದ್ದ. ಆ ಬಳಿಕ ಅರುಣ್ ಕುಮಾರಿಯನ್ನು ಸುರೇಶ್ ಮದುವೆಯಾಗಿದ್ದ. ದಂಪತಿಗೆ ಹದಿನೈದು ವರ್ಷದ ಮಗಳಿದ್ದಾಳೆ. ಕೃಷಿ ಕೆಲಸ ಮಾಡುವ ಸುರೇಶ್ ಹೆಸರಿನಲ್ಲಿ ಎರಡು ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, ಆಸ್ತಿ ತನ್ನ ಹೆಸರಿಗೆ ಬರೆದುಕೊಡುವಂತೆ ಪತ್ನಿ ಅರುಣ್ ಕುಮಾರಿ ಗಂಡನನ್ನು ಪೀಡಿಸುತ್ತಿದ್ದಳು.

ಆಸ್ತಿ ತನ್ನ ಹೆಸರಿಗೆ ಬರೆದುಕೊಡುವಂತೆ ಅರುಣ್ ಕುಮಾರಿ ಪೀಡಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಸುಮಾರು ಏಳು ಗಂಟೆ ಸುಮಾರಿಗೆ ಮನೆಗೆ ಹೋದೆ. ಬೆಡ್ ಶೀಟ್ ತೆಗೆದುಕೊಂಡು ಸುರೇಶ್ ಅವರ ಮೈಗೆ ಸುತ್ತಿದ್ದಾಳೆ. ಆ ನಂತರ ಮೈಗೆ ಹೊದ್ದು ಹಲ್ಲೆ ಮಾಡಿದ್ದು, ದೊಣ್ಣೆ ತೆಗೆದುಕೊಂಡು ಹಲ್ಲೆ ಮಾಡಿದ್ದಾಳೆ. ಹೇ ಮಗನೇ ಈಗಲೇ ಆಸ್ತಿಯನ್ನು ನೋಂದಣಿ ಮಾಡಿಕೊಡು ಎಂದು ಧಮ್ಕಿ ಹಾಕಿದ್ದಾಳೆ. ಆ ಬಳಿಕ ಮುಖಕ್ಕೆ ಟವಲ್ ಸುತ್ತಿ ಹಲ್ಲೆ ಮಾಡಿದ್ದು, ಕೈ ಮತ್ತು ಮೊಣಕಾಲು ಪುಡಿ ಪುಡಿಯಾಗಿದೆ. ದಯವಿಟ್ಟು ಯಾರಿಗೂ ಈ ಪರಿಸ್ಥಿತಿ ಬೇಡ. ನಾನು ಸತ್ತು ಹೋಗುತ್ತೇನೆ. ಅವಳು ಯಾವಾಗ ಸಾಯಿಸುತ್ತಾಳೋ ಗೊತ್ತಿಲ್ಲ. ಈವರೆಗೂ ಮೂರು ಬಾರಿ ದೂರು ನೀಡಿದ್ದೇನೆ. ಆದರೂ ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. ನನ್ನ ಮೂಳೆಗಳು ಪುಡಿ ಪುಡಿಯಾಗಿವೆ. ನನ್ನ ಪತ್ನಿ ಅರುಣ್ ಕುಮಾರಿ, ಅತ್ತೆ ಜಯಶ್ರೀ, ಮಗಳು ಕುಸುಮ ಎಲ್ಲರೂ ಸೇರಿಕೊಂಡು ಹಲ್ಲೆ ಮಾಡಿದಳು. ಈ ಪರಿಸ್ಥಿತಿ ಯಾರಿಗೂ ಬೇಡ ಎಂದು ಹಲ್ಲೆಗೆ ಒಳಗಾಗಿರುವ ಸುರೇಶ್ ಪರಿ ಪರಿ ಕೇಳಿಕೊಂಡಿದ್ದಾರೆ.

ಪ್ರಜ್ಞೆ ತಪ್ಪಿದ ಬಳಿಕ ಬಾಗಿಲು ಹಾಕಿಕೊಂಡು ಎಸ್ಕೇಪ್: ಸುರೇಶ್ ಮನೆಗೆ ಬಂದ ಕೂಡಲೇ ಬೆಡ್ ಶೀಟ್ ಸುತ್ತಿ ಹಲ್ಲೆ ಮಾಡಿದ್ದಾರೆ. ಸುರೇಶ್ ಪ್ರಜ್ಞಾಹೀನವಾಗಿದ್ದು, ಗಂಡ ಸತ್ತು ಹೋಗಿರಬಹುದು ಎಂದು ಭಾವಿಸಿ ಚಿಲಕ ಹಾಕಿಕೊಂಡು ಪರಾರಿಯಾಗಿದ್ದಾರೆ. ಪ್ರಜ್ಞೆ ಬಂದ ಬಳಿಕ ಸುರೇಶ್‌ನನ್ನು ಅಸ್ಪತ್ರೆಗೆ ದಾಖಲಿಸಿದ್ದು, ಕೈ ಮತ್ತು ಬೆನ್ನು ಸೇರಿದಂತೆ 25 ಮೂಳೆಗಳು ಮುರಿದಿದ್ದು ಸದ್ಯದ ಸ್ಥಿತಿಯಲ್ಲಿ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಹಲ್ಲೆಗೆ ಒಳಗಾಗಿರುವ ಸುರೇಶ್ ನೀಡಿದ ದೂರಿನ ಮೇರೆಗೆ ಕೆ.ಆರ್. ಪುರ ಪೊಲೀಸರು ಅರುಣ್ ಕುಮಾರಿ ವಿರುದ್ಧ ಕೊಲೆ ಯತ್ನ ಆರೋಪದಡಿ ದೂರು ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಮೂರು ಬಾರಿ ಸುರೇಶ್ ಪತ್ನಿಯಿಂದ ಹಲ್ಲೆಗೆ ಒಳಗಾಗಿದ್ದಾರೆ. ಆಗಲೂ ಸಹ ಪೊಲೀಸರಿಗೆ ದೂರು ನೀಡಿದ್ದರು. ಕೌಟುಂಬಿಕ ಜಗಳ ಹಿನ್ನೆಲೆಯಲ್ಲಿ ಅರುಣ್ ಕುಮಾರಿಯನ್ನು ಕರೆದು ಪೊಲೀಸರು ವಿಚಾರಣೆ ನಡೆಸಿ ಬುದ್ಧಿವಾದ ಹೇಳಿ ಕಳಿಸಿದ್ದರು. ಇದೀಗ ತಾಳಿ ಕಟ್ಟಿದ ಗಂಡನನ್ನೇ ಬೆಡ್ ಶೀಟ್ ಸುತ್ತಿ ಹಲ್ಲೆ ಮಾಡಿ ರೌಡಿ ಹೆಂಡ್ತಿ ಎಸ್ಕೇಪ್ ಆಗಿದ್ದಾಳೆ. ಆಕೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Bengaluru: Wife Breaks 25 Bones of Husband for Property; escapes

ಎರಡನೇ ಎಂಡತಿ ವರಿಸುವ ಮುನ್ನ: ಕ್ಷುಲ್ಲಕ ವಿಚಾರಕ್ಕೆ ಜಗಳ ಆದರೆ ಸಾಕು ಬಹುತೇಕರು ಡಿವೋರ್ಸ್ ಮೊರೆ ಹೋಗುತ್ತಾರೆ. ಆದರೆ, ಕೆಲ ದಿನಗಳ ಬಳಿಕ ಒಂಟಿ ಜೀವನ ಸಾಕು ಎಂದು ಜೀವನದಲ್ಲಿ ಎಲ್ಲಾ ಬಗೆಯಲ್ಲೂ ಸೋತು ಎರಡನೇ ಪತ್ನಿಯನ್ನು ಧರಿಸುತ್ತಾರೆ. ಎರಡನೇ ಸಂಬಂಧ ಸರಿಯಾಗಲಿಲ್ಲ ಎಂದಾದರೆ ಏನೆಲ್ಲಾ ಪರಿಸ್ಥಿತಿ ಎದುರಾಗುತ್ತದೆ ಎಂಬುದಕ್ಕೆ ಸುರೇಶ್ ಪ್ರಕರಣ ಸಾಕ್ಷಿ. ಅಂತೂ ಆಸ್ತಿಗಾಗಿ ಗಂಡನನ್ನು ಹಿಗ್ಗಾ ಮುಗ್ಗಾ ಥಳಿಸಿರುವ ಅರುಣ್ ಕುಮಾರಿಗೆ ಅವರ ಕುಟುಂಬಸ್ಥರು ಬೆಂಬಲ ನೀಡಿದ್ದಾರೆ ಎಂಬ ಅರೋಪ ಕೇಳಿ ಬಂದಿದೆ. ಆಕೆಯ ಜತೆಗೆ ಆಕೆಯ ಪೋಷಕರು ಬಂಧನಕ್ಕೆ ಒಳಗಾಗುತ್ತಾರಾ ಅನ್ನೋದನ್ನು ಕಾದು ನೋಡಬೇಕು.

ವಿಡಿಯೋ ವೈರಲ್: ಪತ್ನಿ ಅರುಣ್ ಕುಮಾರಿ ಯಾವ ರೀತಿ ಹಲ್ಲೆ ಮಾಡಿದಳು ಎಂಬುದನ್ನು ನೊಂದ ಪತಿ ಸುರೇಶ್ ವಿಡಿಯೋ ಮಾಡಿದ್ದಾರೆ. ಸದ್ಯ ಆ ವಿಡಿಯೋ ಕೂಡ ವೈರಲ್ ಆಗಿದೆ.

English summary
Bengaluru: A Wife has Broken 25 Bones of her Husband for Property; escaped later; Woman Named Aruna Kumari broke her husband M Suresh 25 Bones for Property issue. Escaped later. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X