Breaking: ಬೆಂಗಳೂರಿಗೆ ಜುಲೈ 30ರವರೆಗೆ ಜೋರು ಮಳೆ ನಿರೀಕ್ಷೆ

ಬೆಂಗಳೂರು ಜುಲೈ 28: ಹವಾಮಾನದಲ್ಲಿ ಬದಲಾವಣೆಗಳು ಉಂಟಾಗಿದ್ದರಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಜುಲೈ 30ರವರೆಗೆ ಜೋರು ಮಳೆ ನಿರೀಕ್ಷೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕಾಗುವ ಲಕ್ಷಣಗಳು ಇವೆ. ಆದ್ದರಿಂದ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರದಿಂದ ಶನಿವಾರವರೆಗೆ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಈ ವಳೆ ಮೋಡ ಮುಸುಕಿದ, ಚಳಿಯ ವಾತಾವರಣ ನಿರ್ಮಾಣವಾಗಲಿದೆ. ತಾಪಮಾನ ಗರಿಷ್ಠ 30ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎನ್ನಲಾಗಿದೆ.

ಅರಬ್ಬಿ ಸಮುದ್ರ, ಮಹಾರಾಷ್ಟ್ರ ಕಡೆಗಿನ ಸಮುದ್ರ ಭಾಗದಲ್ಲಿ ಮಾತ್ರ ವೈಪರಿತ್ಯಗಳು ಕಂಡು ಬಂದಿದ್ದರಿಂದ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ದಾಖಲಾಗಿತ್ತು. ಇದೀಗ ತಮಿಳುನಾಡಿನ ಒಳಭಾಗದಲ್ಲಿ ಸಮುದ್ರ ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರ ಪ್ರಭಾವ ಮುಂದಿನ ಐದು ದಿನ ಇರಲಿದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ವ್ಯಾಪ್ತಿಗೆ ಬರುವ ಬೆಂಗಳೂರು ನಗರದಲ್ಲಿ ಮಳೆ ಜೋರಾಗುವ ಲಕ್ಷಣಗಳು ಇವೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

Widespread Rain Expected in Bengaluru City next two days

ಜುಲೈನಲ್ಲಿ ಬೆಂಗಳೂರಿಗೆ ಮಳೆ ಆಗಿಲ್ಲ

Recommended Video

      ಭಾರತ ತಂಡಕ್ಕೆ ಮತ್ತೊಬ್ಬ ಹೊಸ ಕೋಚ್!! | OneIndia Kannada

      ದೇಶದ ಪೂರ್ವ ಭಾಗದಲ್ಲಿ ಹವಾಮಾನ ಬದಲಾವಣೆಗಳು ಉಂಟಾದರೆರೆ ಮಾತ್ರ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ಚಿತ್ರದುರ್ಗ, ಬಳ್ಳಾರಿ, ವಿಜಯಪುರ, ತುಮಕೂರು ಈ ಭಾಗದ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ, ಒಮ್ಮೊಮ್ಮೆ ಅತೀ ಭಾರಿ ಮಳೆ ಬೀಳುತ್ತದೆ. ಆದರೆ ಮುಂಗಾರು ಆರಂಭದಲ್ಲಿ ಈ ರೀತಿಯ ಮಳೆ ಆಗಿದ್ದು ಬಿಟ್ಟರೆ ಬೆಂಗಳೂರು ಜುಲೈ ತಿಂಗಳಲ್ಲಿ ಕೇವಲ ಸಾಮಾನ್ಯ ಮಳೆ ಹಾಗೂ ಮೋಡ ಮುಸುಕಿದ ವಾತಾವರಣನ್ನೇ ಕಂಡಿದೆ. ಇದರ ಹೊರತು ಎಲ್ಲಿಯೂ ದಾಖಲೆಯ ಮಳೆ ಬಿದ್ದಿಲ್ಲ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+