ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ವ್ಯಾಕ್ಸಿನ್ ಬಂದ್ರೂ ಮಾಸ್ಕ್ ಕಡ್ಡಾಯ ಹಾಕಬೇಕಾ ? !

|
Google Oneindia Kannada News

ಬೆಂಗಳೂರು ಜನವರಿ 05: ಕೋವಿಡ್ ಗೆ ವ್ಯಾಕ್ಸಿನ್ ಬಂದಿದೆ. ಎಲ್ಲಾ ಕಡೆ ಟ್ರಯಲ್ ಮಾಡ್ತಿದ್ದಾರೆ. ಇನ್ಯಾಕೆ ಈ ಮಾಸ್ಕ್ ಅಂತ ಬಿಸಾಡಬೇಡಿ. ವಾಕ್ಸಿನ್ ತಗೊಂಡ್ರೂ ಕಡ್ಡಾಯವಾಗಿ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ! ಇಲ್ಲಾ ಅಂದ್ರೆ ಜೀವಾನೇ ಹೋಗಿ ಬಿಡುತ್ತೆ ಅಂತಾರೆ ವೈದ್ಯರು.
ಕೋವಿಡ್ ಬಗ್ಗೆ ಪ್ಲಾಸ್ಮಾ ತೆರಪಿ ಚಿಕಿತ್ಸೆ ನೀಡುವಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಡಾ. ಯು. ಎಸ್ .ವಿಶಾಲ್ ರಾವ್ ಅವರು ವೈದ್ಯಕೀಯ ಸಂಶೋಧನೆ ಆಧರಿಸಿ ಮಹತ್ವದ ವಿಷಯ ಹಂಷಿಕೊಂಡಿದ್ದಾರೆ.

Recommended Video

Covid Vaccine ಬಂದ್ರೂ ಮಾಸ್ಕ್ ಕಡ್ಡಾಯ ಹಾಕಬೇಕಾ ? ! | Oneindia Kannada

ಕೊವೀಡ್ ವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ದೊರೆತಿದೆ. ಈ ವ್ಯಾಕ್ಸಿನ್ ಕೋವಿಡ್ ವೈರಸ್ ನಿಯಂತ್ರಕ್ಕೆ ವಿನಃ ಅದರ ಹರಡುವಿಕೆ ತಡೆಗಟ್ಟಲು ಅಲ್ಲ. ಹೀಗಾಗಿ ಕೋವಿಡ್ ಗೆ ವ್ಯಾಕ್ಸಿನ್ ತೆಗೆದುಕೊಂಡರೂ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ವ್ಯಾಕ್ಸಿನ್ ತೆಗೆಸುಕೊಂಡ ವ್ಯಕ್ತಿಯಿಂದ ರೂಪಾಂತರಗೊಂಡು ವೈರಸ್ ಹರಡಿದರೆ ಈಗಿನ ಸ್ಥಿತಿಗಿಂತಲೂ ಅಪಾಯಕಾರಿ ಸ್ಥಿತಿ ಎದುರಿಸಬೇಕಾದೀತು ಎಂದು ತಿಳಿಸಿದ್ದಾರೆ.

Why we still need to wear mask even after getting a COVID-19 vaccine

ಈ ಕುರಿತ ವೈಜ್ಞಾನಿಕ ಸಂಶೋಧನೆ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಅದರ ಪ್ರಕಾರ ನೀವು ಒಂದು ವೇಳೆ ವ್ಯಾಕ್ಸಿನ್ ತೆಗೆಸುಕೊಂಡಿದ್ದೇ ಆದಲ್ಲಿ ಅದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸಮಯಾವಕಾಶ ಬೇಕು. ಹೊರತಾಗಿಯೂ ನೀವು ಸೀನುವುದರಿಂದ , ಕೆಮ್ಮುವುದರಿಂದ ವೈರಸ್ ಪಕ್ಕದವರಿಗೆ ಹರಡುತ್ತದೆ. ಪಕ್ಕದವರಿಗೆ ಹರಡದ ಹಾಗೆ ವ್ಯಾಕ್ಸಿನ್ ಕೆಲಸ ಮಾಡದು. ಹೀಗಾಗಿ ವ್ಯಾಕ್ಸಿನ್ ಪಡೆದಕೊಂಡವರಿಂದಲೂ ಕೊರೋನಾ ರೂಪಾಂತರಗೊಂಡು ಹರಡಲಿದೆ. ಹೀಗೆ ಆದಲ್ಲಿ ಕರೋನಾ ಅಪಾಯ ಮತ್ತಷ್ಟು ಕಷ್ಟಕ್ಕೆ ಈಡು ಮಾಡಲಿದೆ. ರೂಪಾಂತರ ವೈರಸ್ ನಿಂದ ಪ್ರಾಣ ಹೋಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

Why we still need to wear mask even after getting a COVID-19 vaccine

ಆದ್ಧರಿಂದ ಪೂರ್ಣ ಪ್ರಮಾಣದಲ್ಲಿ ವ್ಯಾಕ್ಸಿನ್ ಕೊಟ್ಟು ಕರೋನಾ ಮುಕ್ತ ಸಮಾಜ ನಿರ್ಮಾಣ ಅಗುವ ವರೆಗೂ ಮಾಸ್ಕ್ ಕಡ್ಡಾಯ ಬಳಿಸಿ. ಸಾಮಾಜಿಕ ಅಂತರ ಕಾಪಾಡಿಕೊಂಡು ನಿಮ್ಮ ಆರೋಗ್ಯದ ಜತೆಗೆ ನೆರೆಹೊರೆಯವರ ಆರೋಗ್ಯ ಕಾಪಾಡಿ ಎಂದು ಡಾ. ವಿಶಾಲ್ ರಾವ್ ಮನವಿ ಮಾಡಿದ್ದಾರೆ.

English summary
Why we still need to wear mask even after getting a COVID-19 vaccine experts says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X