ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಭಾರತದಲ್ಲಿ ಸಿಮಿಗೆ ಇನ್ನೂ ಇದೆ ಶಕ್ತಿಯುತ ಜಾಲ

By ವಿಕ್ಕಿ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿ. 29: ಈ ಸಂದರ್ಭದಲ್ಲಿ ಸಿಮಿ (Students Islamic Movement of India) ಸಂಘಟನೆಯ ಶಕ್ತಿಗುಂದಿದೆ ಎಂದು ಅನ್ನಿಸಬಹುದು. ಆದರೆ, ದಕ್ಷಿಣ ಭಾರತದಲ್ಲಿ ಸಿಮಿ ಅತ್ಯಂತ ಶಕ್ತಿಯಾಲಿ ಸಂಪರ್ಕ ಜಾಲ ಹೊಂದಿದೆ.

ನಿಷೇಧಕ್ಕೊಳಗಾಗುವ ಮೊದಲು ಅನೇಕ ವರ್ಷಗಳ ಕಾಲ ನಿರಂತರ ಚಟುವಟಿಕೆಯನ್ನೂ ನಡೆಸಿದೆ. ಇಂದಿಗೂ ಇಷ್ಟ ಬಂದಾಗ ದಾಳಿ ನಡೆಸಬಲ್ಲ ಸಾಮರ್ಥ್ಯನ್ನೂ ಹೊಂದಿದೆ. ಆದ್ದರಿಂದಲೇ ದಕ್ಷಿಣ ಭಾರತದ ಎಲ್ಲಿಯೇ ಭಯೋತ್ಪಾದಕ ಚಟುವಟಿಕೆ ನಡೆದರೂ ಒಮ್ಮೆ ಸಿಮಿ ಮೇಲೆ ಅನುಮಾನ ಬರುತ್ತದೆ. [ಗುಪ್ತ ಮಾಹಿತಿ ಪತ್ತೆಗೆ ಸಜ್ಜಾಗಿದೆ ಟೆಕ್ಕಿಗಳ ಪ್ರತ್ಯೇಕ ಪಡೆ]

ಸಿಮಿ ಇಲ್ಲಿಯವರೆಗೆ ಸಾಕಷ್ಟು ಏರಿಳಿತ ಕಂಡಿದೆ. ಆದರೆ, ಇಂಡಿಯನ್ ಮುಜಾಹಿದೀನ್ ಸಂಘಟನೆ ವಿರುದ್ಧ ಭಾರತೀಯ ಪೊಲೀಸ್ ಹಾಗೂ ಗುಪ್ತದಳಗಳು ಮುಗಿಬಿದ್ದ ಮೇಲೆ ಅದು ಶಕ್ತಿ ಕಳೆದುಕೊಂಡಿದೆ. ಆದ್ದರಿಂದ ಸಿಮಿ ಮತ್ತೆ ಸಕ್ರಿಯಗೊಂಡಿದೆ.

ಮಧ್ಯ ಪ್ರದೇಶದ ಜೈಲಿನಿಂದ ಪರಾರಿಯಾದ ಸಿಮಿ ಉಗ್ರರು ಮತ್ತೆ ತಮ್ಮ ಕಾರ್ಯ ಆರಂಭಿಸಿರಬಹುದು ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ. ಆದರೆ, ಸಿಮಿ ಪರಿಸ್ಥಿತಿಯೇನೂ ತಿಳಿದಷ್ಟು ಚೆನ್ನಾಗಿಲ್ಲ. ನಿಷೇಧಕ್ಕೊಳಗಾದ ಮೇಲೆ ಕಾರ್ಯಕರ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಗ್ಗಿದೆ.

simi

ಬಾಂಬ್ ನಿಪುಣರು ಇಲ್ಲ : ಇದಕ್ಕೂ ಮೊದಲು ಪುಣೆ ಮತ್ತು ಚೆನ್ನೈನಲ್ಲಿ ಸಿಮಿ ಸಂಘಟನೆ ಕಾರ್ಯಕರ್ತರು ಸ್ಫೋಟಿಸಿರುವ ಬಾಂಬ್‌ಗಳ ಅಧ್ಯಯನ ನಡೆಸಿದಾಗ ಅವರಲ್ಲೀಗ ನಿಪುಣ ಬಾಂಬ್ ತಯಾರಕರು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. [ಬಾಂಬ್ ಬಿದ್ದರೂ ಬೆದರದ ಜನ]

ಮಧ್ಯಪ್ರದೇಶದ ಜೈಲಿನಿಂದ ಪಾರಾದ ಐವರು ಉಗ್ರರು ಪ್ರಸ್ತುತ ಎರಡು ತಂಡಗಳಾಗಿ ಕೆಲಸ ಮಾಡುತ್ತಿದ್ದಾರೆಂದು ಎನ್ಐಎ ಅನುಮಾನಿಸಿದೆ. ಯಾವುದೇ ಕಾರ್ಯ ಎಸಗುವ ಮುಂಚೆ ನಿಗದಿತ ಸ್ಥಳದಲ್ಲಿ ಸೇರಿ, ಕಾರ್ಯ ಮುಗಿದ ತಕ್ಷಣ ಬೇರೆಯಾಗಿಬಿಡುತ್ತಾರೆ.

ಇಬ್ಬರು ಸಿಮಿ ಉಗ್ರರು ಬೆಂಗಳೂರಿನಲ್ಲಿ ವಾಸವಾಗಿದ್ದರು ಎಂಬುದಾಗಿ ಮಧ್ಯಪ್ರದೇಶ ಎಟಿಎಸ್ (ಉಗ್ರ ನಿಗ್ರಹ ದಳ) ಮಾಹಿತಿ ನೀಡಿತ್ತು. ನಂತರ ಅವರು ಹೈದರಾಬಾದ್‌ಗೆ ಭೇಟಿ ನೀಡಿದ್ದರು. ಅಲ್ಲಿನ ಕರೀಂನಗರದಲ್ಲಿ ಒಂದು ಬ್ಯಾಂಕ್‌ ಲೂಟಿ ಮಾಡಿ ತಮ್ಮ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಿದರು.

ವಾಗಮನ್ ಶಿಬಿರದಲ್ಲಿ ತಯಾರಾಗಿತ್ತು ಯೋಜನೆ : ಕೇರಳದಲ್ಲಿ 2007ರಲ್ಲಿ ಆಯೋಜಿಸಿದ್ದ ವಾಗಮನ್ ಶಿಬಿರದಲ್ಲಿಯೇ ದಕ್ಷಿಣ ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಈ ಶಿಬಿರದಲ್ಲಿ 30 ಸಿಮಿ ಉಗ್ರರು ಪಾಲ್ಗೊಂಡಿದ್ದರು. [ಜಾಣ ಮೆಹದಿ ಗುಪ್ತದಳದ ಕಣ್ಣುತಪ್ಪಿಸಿದ್ದು ಹೇಗೆ]

ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಈ ಶಿಬಿರದಲ್ಲಿ ಮುಖ್ಯವಾಗಿ ಕೇರಳದ ಮೇಲೆ ಗಮನ ಕೇಂದ್ರೀಕರಿಸಲು ನಿರ್ಧರಿಸಲಾಗಿತ್ತು. ಇಲ್ಲಿಯೇ ಸಿಮಿ ಉಗ್ರರಿಗೆ ಅತಿ ಹೆಚ್ಚು ಸಂಪರ್ಕಗಳು ಸಿಕ್ಕಿದ್ದವು. ಮಧ್ಯಪ್ರದೇಶದ ಜೈಲಿನಿಂದ ಪರಾರಿಯಾದ ಉಗ್ರರಲ್ಲಿ ಇಬ್ಬರು ಇದೇ ಶಿಬಿರದಲ್ಲಿ ತರಬೇತಿ ಪಡೆದವರಾಗಿದ್ದರು.

ಸಿಮಿ ಉಗ್ರರು ದಕ್ಷಿಣ ಭಾರತದಲ್ಲಿ ವ್ಯಾಪಕ ಜಾಲ ಹರಡಿಕೊಂಡಿರುವುದು ಗೊತ್ತಾಗಿದ್ದೇ ಆಗ. ತಮ್ಮ ಚಟುವಟಿಕೆಗಳಿಗೆ ಕೇರಳವನ್ನು ಕೇಂದ್ರ ಸ್ಥಾನ ಮಾಡಿಕೊಂಡಿರುವುದನ್ನೂ ಸಿಕ್ಕಿಬಿದ್ದಿದ್ದ ಉಗ್ರರು ಬಾಯಿಬಿಟ್ಟಿದ್ದರು.

English summary
For a group such as the Students Islamic Movement of India (SIMI) carrying out an attack in South India has become relatively easy considering the strong network it has. Although it lacks the numbers it used to have in its inner circle its links to groups in South India ensures it can attack at will.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X