Double Decker Flyover: ಕಾಮಗಾರಿ ಪೂರ್ಣವಾದರೂ ಉದ್ಘಾಟನೆಗೊಳ್ಳದ ಈ ಮೇಲ್ಸೇತುವೆ, ಯಾಕೆ?
ಬೆಂಗಳೂರು, ಜುಲೈ 08: ಬೆಂಗಳೂರಿನಲ್ಲಿ ಮೊದಲ 'ಡಬಲ್ ಡೆಕ್ಕರ್ ಮೇಲ್ಸೇತುವೆ' (Double-Decker Flyover) ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (CSB) ವರೆಗೆ ಆರ್‌ವಿ ರಸ್ತೆ-ಬೊಮ್ಮಸಂದ್ರ (ಮೆಟ್ರೋ ಹಳದಿ ರೇಖೆ) 3.3 ಕಿಮೀ ಉದ್ದದ ರಸ್ತೆ ಮೇಲ್ಸೇತುವೆಯ ಉದ್ಘಾಟನೆಗೆ ಸರ್ಕಾರ ವಿಳಂಬ ಮಾಡುತ್ತಿದೆ.
ಇದನ್ನು ನಗರದ ಮೆಟ್ರೋ ಡಬಲ್ ಡೆಕ್ಕರ್ ಮೇಲ್ಸೇತುವೆ ಅಂತಲೂ ಕರೆಯುತ್ತಾರೆ. ಏಕೆಂದರೆ ಒಂದು ವಯಾಡಕ್ಟ್ ಮೇಲೆ ಮೆಟ್ರೋ ಅದರ ಕೆಳಗಿನ ವಯಾಡಕ್ಟ್ ಮೇಲೆ ವಾಹನಗಳು ಸಂಚರಿಸುವಂತೆ ಇದನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಇದನ್ನು ಬಳಕೆ ಮಾಡುವ ಯೋಗ ಸಾರ್ವಜನಿಕರಿಗೆ ಯಾವಾಗ ಸಿಲಿದೆಯೋ ಎಂಬುದೇ ಪ್ರಶ್ನೆಯಾಗಿದೆ.

ಈ ಮೊದಲು ಈ ಮೇಲ್ಸೇತುವೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸಿಲ್ಕ ಬೋರ್ಡ್ ಹಾಗೂ ಇನ್ನಿತರ ಕಡೆಗಳ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಇದೇ ಜೂನ್ 15ರಿಂದ ಒಂದು ಬದಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು BMRCL ಅಧಿಕಾರಿಗಳು ತಿಳಿಸಿದ್ದರ ಕುರಿತು ವರದಿ ಆಗಿತ್ತು.
3 ವರ್ಷ ವಿಳಂಬವಾಗಿ ಕಾಮಗಾರಿ ಪೂರ್ಣ
ವಿಶೇಷವೆಂದರೆ 2021ರಲ್ಲಿಯೇ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಮೂರು ವರ್ಷ ತಡವಾಗಿ ಪೂರ್ಣಗೊಂಡಿದೆ. ಹೀಗಿದ್ದರೂ ಈ ಮೇಲ್ಸೇತುವೆ ಉದ್ಘಾಟನೆ ಭಾಗ್ಯವೇ ಇಲ್ಲದಾಗಿದೆ. ಈ ಸಂಬಂಧ ನಿತ್ಯ ಈ ಭಾಗದಲ್ಲಿ ಸಂಚಾರ ದಟ್ಟಣೆಗೆ ಸಿಲುಕಿರುವ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಸವಾರರಿಗೆ 5-6ನಿಮಿಷಗಳಲ್ಲಿ ಜಂಕ್ಷನ್‌ನಿಂದ ಮುಕ್ತಿ.!
ವಾಹನಗಳು ರಾಗಿಗುಡ್ಡದಿಂದ ಸಿಲ್ಕ ಬೋರ್ಡ್ ಜಂಕ್ಷನ್ ಕಡೆಗೆ ಬಂದರೆ, ಅರ್ಧಗಂಟೆ ಟ್ರಾಫಿಕ್‌ನಲ್ಲಿ ಸಿಲುಕಬೇಕಾದ ಸ್ಥಿತಿ ಇದೆ. ಈ ಮೇಲ್ಸೇತುವೆ ತೆರೆದುಕೊಂಡಲ್ಲಿ ಕೇವಲ 5-6 ನಿಮಿಷಗಳಲ್ಲಿ ಸವಾರರು ಈ ಜಂಕ್ಷನ್ ದಟ್ಟಣೆಯಿಂದ ಮುಕ್ತಿ ಪಡೆಯಬಹುದಾಗಿದೆ. ಅಲ್ಲದೇ ಇಲ್ಲಿ ಯಾವುದೇ ಸಿಗ್ನಲ್ ಗಳ ಅಡತಡೆ ಇಲ್ಲ. ತಡೆರಹಿತವಾಗಿ ಈ ಜಂಕ್ಷನ್ ನಿಂದ ವಾಹನಗಳು ತೆರಳಬಹುದಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಬಾಕಿ ಉಳಿದ ಕೆಲಸ?
ಇನ್ನೂ ಸೆಂಟ್ರಲ್ ಸಿಲ್ಕ್ ಬೊರ್ಡ್ ಜಂಕ್ಷನ್‌ನಲ್ಲಿ A,B,C,D ಮತ್ತುE ಎಂಬ ಲೂಪ್ ನಿರ್ಮಿಸಲಾಗುತ್ತಿದೆ. ಇದರಲ್ಲಿ ಹಾಗೂ E ಡೌನ್ ರ್ಯಾಂಪ್‌ಗಳು ಕೆಲಸ ಮುಗಿದಿದೆ. A,B,C ರಾಂಪ್ ಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. 2025 ಜೂನ್‌ಗೆ ಹೊತ್ತಿಗೆ ಈ ಪ್ಲೈಓವರ್ ತೆರೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಅಧಿಕಾರಿಗಳು ಇನ್ನೇನು ಡಬಲ್ ಡೆಕ್ಕರ್ ಮೇಲ್ಸೇತುವೆ ಪರಿಶೀಲನೆ ನಡೆಸಿ ಸಾರ್ವಜನಿಕರು ಮುಕ್ತಗೊಳಿಸಲಿದ್ದಾರೆ. ಮತ್ತೊಂದು ಬದಿಯ ರಸ್ತೆಯಲ್ಲಿ ಮುಂದಿನ ದಿನಗಳಲ್ಲಿ ತೆರೆಯಲಾಗುವುದು ಸದ್ಯ ಜೂನ್ 15ಕ್ಕೆ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಒಂದು ಬದಿಯಲ್ಲಿ ಮಾತ್ರ ಮೇಲ್ಸೇತುವೆಯಲ್ಲಿ ಲಘೂ ವಾಹನಗಳು ಸಂಚರಿಸಬಹುದು ಎಂದು ತಿಳಿಸಿದ್ದರು. ಇದೆಲ್ಲದರ ಹೊರತಾಗಿಯೂ ಸರ್ಕಾರ ಈ ಮೇಲ್ಸೇತುವೆ ಸಂಚಾರಕ್ಕೆ ತೆರೆಯುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.












Click it and Unblock the Notifications