ಅನಧೀಕೃತ ಸಭೆಗೆ ಕಡತ ಒಯ್ದಿದ್ದೇಕೆ?, ಇದು 'ಕೈ' ಸರ್ಕಾರವಲ್ಲ 'ಕೀಲಿಕೈ' ಸರ್ಕಾರ: ಬಿಜೆಪಿ ವಾಗ್ದಾಳಿ
ಬೆಂಗಳೂರು, ಜೂನ್ 15: ಕರ್ನಾಟಕ ರಾಜ್ಯ ಸರ್ಕಾರದ ಅಧಿಕಾರಿಗಳ ಸಭೆಯಲ್ಲಿ ದೆಹಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಉಪಸ್ಥಿತಿ ಕುರಿತು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಬಳಿಕ ಜಟಾಪಟಿ ಮುಂದುವರಿದಿದೆ. ಸಭೆ ನಡೆದಿಲ್ಲ, ಅಧಿಕೃತ ಸಭೆಯಲ್ಲ ಎಂದಿದ್ದೀರಿ, ಮತ್ತೇಕೆ ಸಭೆಗೆ ಕಡತಗಳನ್ನು ಹೊತ್ತೊಯ್ಯುವ ಜರೂರು ಏನಿತ್ತು? ಎಂದು ಕರ್ನಾಟಕ ಬಿಜೆಪಿ ಪ್ರಶ್ನೆ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿಯು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದೆ. ಸಭೆ ಅಧಿಕೃತವಲ್ಲ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳುತ್ತಿದ್ದಾರೆ. ಆದರೆ ಅಂಥ ಸಭೆಗೆ ಕಡತಗಳನ್ನು ಹೊತ್ತೊಯ್ಯುವ ಜರೂರತ್ತು ಏನಿತ್ತು?. ಅನಧಿಕೃತವಾಗಿ ಹಾಗೆ ಕಡತಗಳನ್ನು ತೆಗೆದೊಯ್ಯಲಾಗಿದೆ ಎಂದರೆ ಎಟಿಎಂ ಸರ್ಕಾರ (#ATMSarkara) ದ ಭ್ರಷ್ಟಾಚಾರಕ್ಕೆ ಇನ್ನೇನೂ ಸಾಕ್ಷಿ ಬೇಡ ಅಂತಲೇ ಅರ್ಥ ಎಂದು ಬಿಜೆಪಿ ಆರೋಪಿಸಿದೆ.
ಸಭೆ ಅಧಿಕೃತವಲ್ಲ ಎಂದು @siddaramaiah, @DKShivakumar ಅವರು ಹೇಳುತ್ತಿದ್ದಾರೆ. ಆದರೆ ಅಂಥ ಸಭೆಗೆ ಕಡತಗಳನ್ನು ಹೊತ್ತೊಯ್ಯುವ ಜರೂರತ್ತು ಏನಿತ್ತು? ಅನಧಿಕೃತವಾಗಿ ಹಾಗೆ ಕಡತಗಳನ್ನು ತೆಗೆದೊಯ್ಯಲಾಗಿದೆ ಎಂದರೆ #ATMSarkara ದ ಭ್ರಷ್ಟಾಚಾರಕ್ಕೆ ಇನ್ನೇನೂ ಸಾಕ್ಷಿ ಬೇಡ ಅಂತಷ್ಟೇ ಅರ್ಥ!
— BJP Karnataka (@BJP4Karnataka) June 15, 2023
1/3 https://t.co/7X5pY4MqL0
ಇದು 'ಕೈ' ಸರ್ಕಾರವಲ್ಲ 'ಕೀಲಿಕೈ' ಸರ್ಕಾರ
ಅಧಿಕೃತವಲ್ಲದ ಸಭೆಯ ಬಗ್ಗೆ ಶಾಸಕರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅತ್ಯುತ್ಸಾಹದಿಂದ ಫೋಟೋ ಸಹಿತ ಟ್ವೀಟ್ ಮಾಡಿದ್ದರು. ನಂತರ ಆ ಟ್ವೀಟ್ ಪೋಸ್ಟ್ ಅನ್ನು ಕಾಂಗ್ರೆಸ್ ಹೈಕಮಾಂಡ್ ಜಬರ್ದಸ್ತಿನಿಂದ ಡಿಲೀಟ್ ಮಾಡಿಸಿದ್ದು ಯಾಕೆ? ಇಲ್ಲಿರುವುದು ಕೈ ಸರ್ಕಾರವಲ್ಲ, ಕೀಲಿಕೈ ಸರ್ಕಾರ ಎಂದು ವಾಗ್ದಾಳಿ ನಡೆಸಿತು.

ಅನಧಿಕೃತ ಸಭೆ ಎಂದು ಹೇಳುತ್ತಿದ್ದೀರಿ, ಹಾಗಾದರೆ ಕಡತ ಇಟ್ಟುಕೊಂಡು ಮೇಲ್ದರ್ಜೆಯ ಅಧಿಕಾರಿಗಳ ಜತೆ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪರ್ ಸುರ್ಜೆವಾಲ ಜೊತೆಗೆ ಬೆರೆಯುವ ಅನಧಿಕೃತ ಕೆಲಸವನ್ನು ನಿಮ್ಮ ಸರ್ಕಾರ ಯಾಕೆ ಮಾಡುತ್ತಿದೆ ಎಂದು ಬಿಜೆಪಿ ಪ್ರಶ್ನಿಸಿದೆ.
ರಣದೀಪ್ ಸುರ್ಜೇವಾಲ ಅವರೇ ಕಲೆಕ್ಷನ್ ಏಜೆಂಟ್. ಸುರ್ಜೇವಾಲರವರೇ ಸೂಪರ್ ಸಿಎಂ, ಈ ಸತ್ಯವನ್ನು ನೀವು ಒಪ್ಪಿಕೊಳ್ಳಿ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.
ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆದಿದೆ ಎನ್ನಲಾಗುತ್ತಿದೆ. ಅದರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆಗೆ ಬಿಬಿಎಂಪಿ ಅಧಿಕಾರಿಗಳು ಇದ್ದರ. ಇಂತಹ ಸಭೆಯಗೆ ದೆಹಲಿ ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿ ರಣದೀಪ್ ಸುರ್ಜೆವಾಲ್ ಅವರದ್ದು ಏನು ಕೆಲಸ, ಅವರೇಕೆ ಸರ್ಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಹೀಗೆಂದು ಬಿಜೆಪಿ ಮತ್ತು ಜೆಡಿಎಸ್ ಸಭೆಯ ಫೋಟೊ ಹಂಚಿಕೊಂಡು ವಾಗ್ದಾಳಿ ನಡೆಸಿದ್ದವು.

ಇದೆಲ್ಲ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಮಾರ್ಗ. ರಾಜ್ಯವನ್ನು ಕಾಂಗ್ರೆಸ್ ಲೂಟಿ ಹೊಡೆಯುವ ಪ್ರಯತ್ನ ಎಂದೆಲ್ಲ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಜರಿದಿದ್ದರು. ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದ್ದರು.
ಸಭೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಏನು?
ಸಭೆ ಕುರಿತು ಚರ್ಚೆಗಳು ಮುನ್ನೆಲೆ ಬರುತ್ತಿದ್ದಂತೆ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಸ್ಪಷ್ಟನೆ ನೀಡಿದರು. ಹೋಟೆಲ್‌ನಲ್ಲಿ ನಡೆದ ಸಭೆ ಅಧಿಕೃತ ಸಭೆಯಲ್ಲ. ಹೋಟೆಲಿನಲ್ಲಿ ಸುರ್ಜೇವಾಲಾ ಅವರು ಇದ್ದರು. ಅವರನ್ನು ಭೇಟಿ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ್ದರು. ಇದೇ ವೇಳೆ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಸರ್ಕಾರದ ಅಧಿಕಾರಿಗಳು ಡಿಸಿಎಂ ಭೇಟಿ ಮಾಡಲು ಹೋಟೆಲ್‌ಗೆ ಬಂದಿದ್ದರು ಎಂದು ಅವರು ಸ್ಪಷ್ಟನೆ ನೀಡಿದ್ದರು.
-
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications