Bengaluru 2nd Airport: 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರು ಬಳಿ ಯಾಕೆ ಬೇಕು?
Bengaluru 2nd International Airport: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ವಿಮಾನ ನಿಲ್ದಾಣವಿದ್ದು, ಇದು ಎರಡು ಟರ್ಮಿನಲ್‌ಗಳನ್ನೊಳಗೊಂಡಿದೆ. ಇಷ್ಟಾದರೂ ಕೂಡ ಪ್ರಯಾಣಿಕರ ದಟ್ಟಣೆ ಮಾತ್ರ ಹೆಚ್ಚಾಗುತ್ತಲಿತ್ತು. ಈ ಹಿನ್ನೆ ಸರ್ಕಾರವು ನಗರದ ಬಳಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೈಹಾಕಿದೆ. ಇದೀಗ ನಾಲ್ಕು ಕಡೆ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಒಂದನ್ನು ನಿಗಧಿ ಮಾಡಬೇಕಿದೆ ಅಷ್ಟೇ.
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಬಿಡದಿ, ತುಮಕೂರು, ನೆಲಮಂಗಲ, ರಾಮನಗರ ಜಿಲ್ಲೆಗಳಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಈ ಪೈಕಿ ಮೊದಲಿಗೆ ತುಮಕೂರು ಬಳಿಯೇ ನಿರ್ಮಾಣ ಮಾಡಬೇಕೆನ್ನುವ ಕೂಗುಗಳನ್ನು ಜೋರಾಗಿ ಕೇಳಿಬಂದಿದ್ದವು. ಆದರೆ ಇದೀಗ ರೈತರ ವಿರೋಧ ನಡುವೆಯೂ ನೆಲಮಂಗಲ ಬಳಿ ಸರ್ವೇ ಕಾರ್ಯ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ನೆಲಮಂಲದಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಆದ್ರೆ, ತುಮಕೂರಿನ ಯಾವೆಲ್ಲಾ ಕನಸುಗಳು ಕನಸಾಗಿಯೇ ಉಳಿಯಲಿವೆ ಎಂದು ಇಲ್ಲಿ ತಿಳಿಯಿರಿ.

ನೆಲಮಂಗಲ-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75ರ ಬಳಿ ರಾಜ್ಯದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಬಹುತೇಕ ಖಚಿತವಾಗಿರುವ ಬೆನ್ನಲ್ಲೇ ತುಮಕೂರಲ್ಲಿಕೈತಪ್ಪಿರುವ ವಿಮಾನ ನಿಲ್ದಾಣ ನಿರ್ಮಾಣದ ಹೋರಾಟ ಇದೀಗ ಮತ್ತೆ ಗರಿಗೆದರಿದೆ. ವಿಮಾನ ನಿಲ್ದಾಣ ನಿರ್ಮಾಣ ಆಗದಿದ್ದರೆ, ಬೆಂಗಳೂರಿಗೆ ಪರ್ಯಾಯ ನಗರಿಯಾಗಿ ತುಮಕೂರು ಅಭಿವೃದ್ಧಿ ಬರೀ ಕನಸಷ್ಟೇ ಎಂಬಂತಾಗಿದೆ.
ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ತುಮಕೂರು ಸಮೀಪದ ಸೂರೆಕುಂಟೆಯಲ್ಲಿ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟ್ ಮೈದಾನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭೂಮಿಪೂಜೆ ನೆರವೇರಿಸಿದರು. ತುಮಕೂರು ತಾಲೂಕು ಬೆಳ್ಳಾವಿ ಹೋಬಳಿಯ ಪಿ.ಗೊಲ್ಲಹಳ್ಳಿಯಲ್ಲಿ 25 ಹೆಕ್ಟೇರ್ ಮತ್ತು ಸೂರೆಕುಂಟೆ ಬಳಿ 16.33 ಹೆಕ್ಟೇರ್ ಸೇರಿದಂತೆ ಒಟ್ಟು 41.33 ಹೆಕ್ಟೇರ್ ಜಮೀನನ್ನು ಜಿಲ್ಲಾಡಳಿತ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ನೀಡಿದ್ದು, ಎರಡು ವರ್ಷದಲ್ಲಿ ಸ್ಟೇಡಿಯಂ ನಿರ್ಮಾಣ ಆಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ ಬೆನ್ನಲ್ಲೇ ವಸಂತನರಾಪುರ ಕೈಗಾರಿಕಾ ಪ್ರದೇಶದಲ್ಲಿ ಪ್ರಸ್ತಾಪಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೂಗುಗಗಳು ಜೋರಾಗಿ ಕೇಳಿಬಂದಿದ್ದವು. 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿಅಭಿವೃದ್ಧಿಗೊಳ್ಳುತ್ತಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶ ಏಷ್ಯದಲ್ಲೇ ಅತ್ಯಂತ ಬೃಹತ್ ಕೈಗಾರಿಕಾ ಪ್ರದೇಶವಾಗಿ ಗುರುತಿಸಿಕೊಳ್ಳಲಿದೆ. ಆದ್ದರಿಂದ ಸೂಕ್ತ ಕಲ್ಪಿಸಲು ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ತುಮಕೂರು ಬಳಿ ಎರಡನೇ ಅಂತಾರಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ ಈ ಭಾಗದ ಉದ್ಯಮಿಗಳ ಮಾತಾಗಿದೆ.
ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾದರಷ್ಟೇ ಸಾಲದು ಜೊತೆಗೆ ಸಂಪರ್ಕವೂ ಕೂಡ ಸುಲಭ ಆಗಿರಬೇಕಾಗಿರಬೇಕಾಗುತ್ತದೆ. ಇದು ಇದ್ರೆ ಮಾತ್ರ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಸಾಧ್ಯವಾಗಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆದರೆ, ಬಂಡವಾಳ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ. ಇಲ್ಲದಿದ್ರೆ ನಿರೀಕ್ಷಿತ ಪ್ರಮಾಣದಲ್ಲಿಯೂ ಪ್ರತಿಷ್ಠಿತ ಕೈಗಾರಿಕೆಗಳು ಬರುವುದು ಕಷ್ಟಸಾಧ್ಯ ಆದಂತಾಗಲಿದೆ.
ಈಗಾಗಲೇ ತುಮೂರು ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಸೋರೆಕುಂಟೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನಕ್ಕೆ ಭೂಮಿ ಪೂಜೆ ಮಾಡಿದ್ದಾರೆ. ಇದು ಎರಡು ವರ್ಷದಲ್ಲಿ ನಿರೀಕ್ಷೆಯಿದ್ದು, ಬಳಿಕ ಇಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳು ನಡೆಯಬೇಕೆಂದರೆ ವಸಂತನರಸಾಪುರದಲ್ಲಿಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಗತ್ಯವಾಗಿ ಬೇಕೇ ಬೇಕಾಗುತ್ತದೆ. ಅಲ್ಲದೆ ಜೊತೆಗೆ ಉದ್ಯೋಗಗಳು ಕೂಡ ಸೃಷ್ಟಿಯಾಗಲಿವೆ ಎಂಬುದು ಈ ಭಾಗದ ಜನ ಹಾಗೂ ಜನಪ್ರತಿನಿಧಿಗಳ ಮಾತಾಗಿದೆ.
ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ತುಮಕೂರು ಜಿಲ್ಲೆಯಲ್ಲಿಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು. ಇದರಿಂದ ರಾಜ್ಯದ 24 ಜಿಲ್ಲೆಗಳ ಜನರಿಗೆ ಅನುಕೂಲ ಆಗಲಿದೆ. ಕೈಗಾರಿಕಾ ಪ್ರದೇಶ ಅಭಿವೃದ್ಧಿ ಆಗುತ್ತಿದೆ, ಕ್ರಿಕೆಟ್ ಸ್ಟೇಡಿಯಂಗೆ ಸಿಎಂ ಅಡಿಗಲ್ಲು ಹಾಕಿದ್ದಾರೆ. ಅವಶ್ಯವಾಗಿ ತುಮಕೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈ ವಿಚಾರ ಮುನ್ನಲೆಗೆ ಬಂದಾಗಿನಿಂದಲೂ ಹೇಳಿಕೊಂಡು ಬರುತ್ತಿದ್ದಾರೆ.












Click it and Unblock the Notifications