Your Time Matters ಎಂದಿದ್ಯಾಕೆ ಡಿ.ಕೆ ಶಿವಕುಮಾರ್, ನೆಟ್ಟಿಗರು ಹೇಳಿದ್ದೇನು ?
Hebbal Silk Board Tunnel: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಾಡಿರುವ ಟ್ವೀಟ್‌ವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿ.ಕೆ ಶಿವಕುಮಾರ್ ಅವರು, Your Time Matters ಎನ್ನುವ ಸಾಲುಗಳೊಂದಿಗೆ ಅವರು ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಅವರು ಈ ರೀತಿ ರಿಯಾಕ್ಟ್ ಮಾಡಿದ ಮೇಲೆ ಅವರು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟೆ ಟ್ವೀಟ್ ಮಾಡಿದ್ದಾರೆ ಎಂದು ಅನಿಸಿದರೆ ಅದು ತಪ್ಪು. ಆದರೆ, ಅವರು ಟ್ವೀಟ್ ಮಾಡಿರುವ ವಿಚಾರವೇ ಬೇರೆ ಇದೆ. ಅದೇನು ಎನ್ನುವ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ವಿಚಾರ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದೀಗ ಡಿ.ಕೆ ಶಿವಕುಮಾರ್ ಅವರು ಹೊಸದೊಂದು ಟ್ವೀಟ್ ಮಾಡಿದ್ದಾರೆ. ಆದರೆ, ಇದು ರಾಜಕೀಯಕ್ಕೆ ಸಂಬಂಧಿಸಿದ ವಿಚಾರವಲ್ಲ. ಬೆಂಗಳೂರಿಗೆ ಸಂಬಂಧಿಸಿದ ವಿಚಾರವಾಗಿದ್ದು. ಪರ - ವಿರೋಧ ಚರ್ಚೆ ಶುರುವಾಗಿದೆ. ಬೆಂಗಳೂರಿನ ವಿಚಾರವಾಗಿ ನಿಮ್ಮ ಸಮಯ ನಮಗೆ ಮುಖ್ಯ ಅಂತ ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

ನಿಮ್ಮ ಸಮಯ ಮುಖ್ಯ. ನಿಮ್ಮನ್ನು ಗಮನದಲ್ಲಿಟ್ಟುಕೊಂಡು ನಾವು ಹೊಸ ಯೋಜನೆಯನ್ನು ನಿರ್ಮಿಸುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಹೆಬ್ಬಾಳ ಮತ್ತು ಸಿಲ್ಕ್‌ಬೋರ್ಡ್ ಸುರಂಗ ಮಾರ್ಗದ ಬಗ್ಗೆ ಅವರು ಮಾತನಾಡಿದ್ದಾರೆ. ಈ ಸುರಂಗ ಮಾರ್ಗವು ನಿಮ್ಮ ದೈನಂದಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
✔ 25+ ಸಂಚಾರ ಅಡಚಣೆಗಳನ್ನು ತಪ್ಪಿಸಲಿದೆ / ಟ್ರಾಫಿಕ್ ಸಿಗ್ನಲ್ ಮುಕ್ತ ಸಂಚಾರ
✔ ಪ್ರತಿದಿನ 45+ ನಿಮಿಷಗಳನ್ನು ಉಳಿಸಬಹುದು.
✔ 16.75 ಕಿಮೀ ತಡೆರಹಿತ, ಸಿಗ್ನಲ್-ಮುಕ್ತ ಪ್ರಯಾಣ
✔ ಐಟಿ ಕಾರಿಡಾರ್‌ಗೆ ನೇರ ಪ್ರವೇಶ
ಬೆಂಗಳೂರು ತನ್ನ ವೇಗ ಹಾಗೂ ಸ್ಮಾರ್ಟ್ ಹಾದಿಯಲ್ಲಿದೆ. ಏಕೆಂದರೆ ನೀವು ಉತ್ತಮ ಪ್ರಯಾಣಕ್ಕೆ ಅರ್ಹರು ಎಂದು ಅವರು ಹೇಳಿದ್ದಾರೆ. ಆದರೆ ಸುರಂಗ ಮಾರ್ಗದ ಬಗ್ಗೆ ಕೆಲವರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಂಗಳೂರು ಮಾತ್ರ ಅಭಿವೃದ್ಧಿಯಾದರೆ ಸಾಕೇ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಜಗದೀಶ್ ಕುಮಾರ್ ಎನ್ನುವವರು, ಸೂಪರ್ ಕೆಲಸ, ಇದು ವಾರ್ಷಿಕವಾಗಿ 45 ನಿಮಿಷಗಳ ಪ್ರಯಾಣದ ಸಮಯವನ್ನು ಉಳಿಸುತ್ತದೆ ಮತ್ತು ಸಾಧಾರಣ ಮಳೆಯಲ್ಲಿ ಇದು ಪ್ರವಾಹ ನೀರು ಹೋಗುವುದಕ್ಕೆ ಚರಂಡಿಯಾಗಿ ಬದಲಾಗಲಿದೆ. ಎಂತಹ ಐಡಿಯಾ ಸರ್ಜಿ.. ಈ ಉದ್ಯಮ ಎಷ್ಟು ಲಾಭದಾಯಕವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ದೀಪಕ್ ದಿನೇಶ್ ಎನ್ನುವವರು, ಜೆ ಪಿ ನಗರದಲ್ಲಿನಂತೆಯೇ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಹಂತದಲ್ಲಿರುವ ಪ್ರಸ್ತುತ ಮೆಟ್ರೋ ಮಾರ್ಗದಲ್ಲಿ ಏಕೆ ಹೂಡಿಕೆ ಮಾಡಬಾರದು. ಮೆಟ್ರೋ ಅಭಿವೃದ್ಧಿ ಮಾಡಿದರೆ ಸಮಸ್ಯೆ ಪರಿಹಾರವಾಗಲಿದೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications