Chandan Shetty: ವಿಚ್ಛೇದನ ಬಳಿಕವೂ ಕೋರ್ಟ್‌ನಲ್ಲಿ ಇಬ್ಬರು ಕೈ ಕೈ ಹಿಡಿದುಕೊಂಡು ಬಂದಿದ್ದೇಕೆ?-ಚಂದನ್‌ ಶೆಟ್ಟಿ ಹೇಳಿದ್ದೇನು?

Chandan Shetty: ಕನ್ನಡದ ರ್‍ಯಾಪರ್, ಬಿಗ್‌ಬಾಸ್‌ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇತ್ತೀಚೆಗಷ್ಟೇ ವಿಚ್ಛೇದನ ಪಡೆದಿದ್ದರು. ಇನ್ನು ಇವರಿಬ್ಬರು ವಿಚ್ಛೇದನ ಪಡೆಯುವ ವೇಳೆ ಫ್ಯಾಮಿಲಿ ಕೋರ್ಟ್‌ಗೆ ಜೊತೆಗೆ ಕೈ ಕೈ ಹಿಡಿದುಕೊಂಡು ಬಂದಿದ್ದು, ಈ ಬಗ್ಗೆ ಇದೀಗ ಚಂದನ್‌ ಶೆಟ್ಟಿಯವರು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ವಿವರ ಇಲ್ಲಿದೆ ತಿಳಿಯಿರಿ.

ಇನ್ನೂ ವಿಚ್ಛೇದನದ ಬಳಿಕ ಸುದ್ದಿಗೋಷ್ಠಿಯಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಚಂದನ್ ಶೆಟ್ಟಿ ಮಾತನಾಡಿದ್ದು, "ನಾವು ಕಾನೂನಿನ ಪ್ರಕಾರವಾಗಿ ವಿಚ್ಛೇದನ ಪಡೆದಿದ್ದೇವೆ. ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ. ಸುಮ್ಮನೆ ಇಲ್ಲದಿದ್ದನ್ನು ಸೃಷ್ಟಿ ಮಾಡಬೇಡಿ. ನಮ್ಮ ಖಾಸಗಿ ವಿಚಾರವನ್ನು ನಮ್ಮಲ್ಲೇ ಇರಲು ಬಿಡಿ," ಎಂದು ಹೇಳಿಕೊಂಡಿದ್ದರು.

Why are you come holding hands in court even after divorce What did Chandan Shetty says

ಅಲ್ಲದೆ, "ಬೇಡದಿರುವ ವಿಚಾರಗಳನ್ನು ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮತ್ತಷ್ಟು ತಂದಿಡುವ ಕೆಲಸವನ್ನು ಮಾಡುತ್ತಿದ್ದಾರೆ. ನನ್ನ ಮತ್ತು ನಿವೇದಿತಾ ಆಲೋಚನೆಗಳು ಬೇರೆ ಆಗಿವೆ. ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆವು. ಇದು ಸಾಧ್ಯವಾಗದಿದ್ದಕ್ಕೇ ವಿಚ್ಛೇದನಕ್ಕೆ ಮುಂದಾಗಿದ್ದು. ಇದಕ್ಕೇ ಬೇರೆ ಅರ್ಥ ಕಲ್ಪಿಸಬೇಡಿ," ಎಂದು ಹೇಳಿದ್ದರು. ಆದರೆ ಇದೀಗ ಕೋರ್ಟ್‌ನಲ್ಲಿ ವಿಚ್ಛೇದನದ ಬಳಿಕ ಇಬ್ಬರು ಕೈ ಕೈ ಹಿಡಿದುಕೊಂಡು ಹೋಗಿದ್ದು ಯಾಕೆ ಎಂದು ಸುದ್ದಿಗೋಷ್ಠಿಯಲ್ಲಿ ಚಂದನ್‌ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ವಿಚ್ಛೇದನದ ಬೆನ್ನಲ್ಲೇ ಚಂದನ್‌ ಶೆಟ್ಟಿ ಅವರು ಹಲವು ಸಂದರ್ಶನಗಳು, ಸಿನಿಮಾ ಪ್ರಮೋಷನ್‌ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಮುಂಚೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದು, ಇದೀಗ ಡಿವೋರ್ಸ್‌ ಆದ ದಿನ ಫ್ಯಾಮಿಲಿ ಕೋರ್ಟ್‌ನಲ್ಲಿ ಒಬ್ಬರನ್ನೊಬ್ಬರು ಕೈ ಕೈ ಹಿಡಿದು ಹೋಗಿದ್ದೇಕೆ ಎಂಬ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

"ಡಿವೋರ್ಸ್‌ ಎನ್ನುವ ವಿಚಾರ ಖುಷಿಯಿಂದ ಆಗುವಂತದಲ್ಲ. ತುಂಬಾ ಕಷ್ಟ. ಡಿವೋರ್ಸ್‌ ಅಂದಾಕ್ಷಣ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ ಎನ್ನುವುದಲ್ಲ. ಅಂದು ಆಕೆ ಜೊತೆ ಯಾರೂ ಇರಲಿಲ್ಲ. ಒಬ್ಬಳೇ ಇದ್ದಳು. ಇಬ್ಬರೇ ಫ್ಯಾಮಿಲಿ ಕೋರ್ಟ್‌ಗೆ ಹೋಗಿದ್ದೇವು. ಅವಳನ್ನು ಮನೆಗೆ ಯಾರು ತಲುಪಿಸುತ್ತಿದ್ದರು. ಆದ್ದರಿಂದ ಮಾನವೀಯತೆ ದೃಷ್ಟಿಯಿಂದ ಅಂದು ನಿವೇದಿತಾ ಅವರ ಕೈ ಹಿಡಿದು ನಾನು ಕರೆದುಕೊಂಡು ಹೋದೆ," ಎಂದು ಸ್ಪಷ್ಟನೆ ನೀಡಿದ್ದಾರೆ.

ಒಬ್ಬರನ್ನೇ ಬಿಟ್ಟು ಬರುವುದು ಸರಿಯಲ್ಲ ಅನ್ನಿಸಿತು. ಇಷ್ಟು ವರ್ಷ ಜೊತೆಗೆ ಇದ್ದಿದ್ದಕ್ಕೆ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುಸುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ. ಇನ್ನು ಡಿವೋರ್ಸ್‌ ಮುಂಚೆಯೇ ಇದ್ದ ಬದುಕಿನಿಂದ ಹೊರಗೆ ಬಂದಿದ್ದೇನೆ. ಸದ್ಯ ನಾನು ಯಾರನ್ನ ನಂಬಬೇಕು.. ಯಾರನ್ನ ನಂಬಬಾರದು ಎಂಬ ಗೊಂದಲದಲ್ಲಿದ್ದೇನೆ. ಸಿನಿಮಾ ಮಾಡಿದ್ದೇನೆ. ಭವಿಷ್ಯ ಏನು ಎಂದು 19ಕ್ಕೆ ಗೊತ್ತಾಗುತ್ತದೆ. ಮುಂದೆ ಸಿನಿಮಾ ಮಾಡಲಾ? ಹಾಡು ಮಾಡಲಾ? ಎಂಬ ಯೋಚನೆಯಿದೆ ಎಂದು ಹೇಳಿದರು.

ಹಾಗೆಯೇ ನಿವೇದಿತಾ ಬೇರೆ ಯಾರನ್ನಾದರೂ ಮದುವೆ ಆದರೆ ನಿಮ್ಮ ಅಭಿಪ್ರಾಯ ಏನು? ಎಂಬ ಪ್ರಶ್ನೆಗೆ ಚಂದನ್‌ ಮಾತನಾಡಿ "ಅದು ಅವರ ವೈಯಕ್ತಿಕ ನಿರ್ಧಾರ. ನನಗೂ ಅದಕ್ಕೂ ಸಂಬಂಧವಿಲ್ಲ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+