• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ಸಿನಿಂದ ಮೇಯರ್ ಗೌನ್ ಯಾರ ಹೆಗಲಿಗೆ?

By Mahesh
|

ಬೆಂಗಳೂರು, ಸೆ. 10: ರೆಸಾರ್ಟ್ ವಾಸ್ತವ್ಯ ಮುಗಿಸಿಕೊಂಡು ಬಿಬಿಎಂಪಿ ಸದಸ್ಯರು ಬೆಂಗಳೂರಿಗೆ ಆಗಮಿಸಿದ್ದಾರೆ. ಭಾರೀ ಕುತೂಹಲ ಕೆರಳಿಸಿರುವ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಈ ನಡುವೆ ಮೇಯರ್ ರೇಸಿನಲ್ಲಿ ಯಾರು ಯಾರು ಇದ್ದಾರೆ ಮುಂದೆ ಓದಿ...

ಯಾರಿಗೆ ಮೇಯರ್ ಗದ್ದುಗೆ? ಯಾರಿಗೆ ಉಪ ಮೇಯರ್ ಗೌನ್ ಎಂಬ ಪ್ರಶ್ನೆಗೆ ಗುರುವಾರ ಮಧ್ಯಾಹ್ನದ ವೇಳೆಗೆ ಉತ್ತರ ದೊರೆಯಲಿದೆ. ಮೈತ್ರಿಕೂಟದ ಬಣದ ಸದಸ್ಯ ಬಲ 132 ಮತ್ತು ಬಿಜೆಪಿಯ ಬಲ 128. ಬಿಬಿಎಂಪಿ ಮೇಯರ್ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 131 ಬೇಕಾಗಿದೆ.[ಮೇಯರ್ ಎಲೆಕ್ಷನ್ ಹೇಗೆ ನಡೆಯುತ್ತೆ?]


ಮೇಯರ್ ಪಟ್ಟಕ್ಕೆ ಕಾಂಗ್ರೆಸ್‌ನಿಂದ ಬಿ.ಎನ್‌. ಮಂಜುನಾಥ್‌ ರೆಡ್ಡಿ, ಆರ್‌.ಎಸ್‌. ಸತ್ಯನಾರಾಯಣ ಅವರ ಹೆಸರು ಕೇಳಿಬರುತ್ತಿದೆ. ಬಿಜೆಪಿ ಪರವಾಗಿ ಪದ್ಮನಾಭ ರೆಡ್ಡಿ ಅವರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಜೆಡಿಎಸ್ ಪರವಾಗಿ ಜೆಡಿಎಸ್‌ ಶಾಸಕ ಗೋಪಾಲಯ್ಯ ಪತ್ನಿ ಹೇಮಾವತಿ ಅವರು ಉಪ ಮೇಯರ್ ಅಭ್ಯರ್ಥಿಯಾಗಲಿದ್ದಾರೆ.[ಮೇಯರ್ ಆಯ್ಕೆಗೆ ಮತ ಹಾಕುವವರು ಯಾರು?]

ಒಟ್ಟು 260 ಜನ ಸದಸ್ಯರು ಮೇಯರ್‌, ಉಪಮೇಯರ್‌ ಆಯ್ಕೆ ಮಾಡಲಿದ್ದಾರೆ. ಬಳಿಕ 12 ಸ್ಥಾಯಿ ಸಮಿತಿಗಳ 11 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. [ಬಿಜೆಪಿಯಿಂದ ರೇಸಿನಲ್ಲಿರುವವರು?]

ಬಿಬಿಎಂಪಿಯನ್ನು ವಿಸರ್ಜನೆ ಮಾಡಿದ ಬಳಿಕ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಟಿ.ಎಂ. ವಿಜಯ ಭಾಸ್ಕರ ಅವರ ಅಧಿಕಾರ ಅವಧಿ ಮುಕ್ತಾಯಗೊಂಡಿದೆ. [ಬಿಜೆಪಿಯಿಂದ ಮಹಿಳಾ ಉಪಮೇಯರ್ ಆಕಾಂಕ್ಷಿಗಳು]

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು

* ಬಿ.ಎನ್ ಮಂಜುನಾಥ್ ರೆಡ್ಡಿ (ಮಡಿವಾಳ ವಾರ್ಡ್) ಈ ಹಿಂದಿನ ಅವಧಿಯಲ್ಲಿ ಕೌನ್ಸಿಲ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.1991ರಿಂದ ಬಿಬಿಎಂಪಿ ಅಂಗಳದಲ್ಲಿ ಓಡಾಡಿಕೊಂಡಿದ್ದಾರೆ. ಅಭ್ಯರ್ಥಿಗಳ ಅಂತಿಮ ಪಟ್ಟಿ ಬಗ್ಗೆ ನಿರ್ಧಾರ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಭೆಯಲ್ಲಿ ನಿರ್ಣಯವಾಗಲಿದೆ.

* ಆರ್. ಎಸ್ ಸತ್ಯನಾರಾಯಣ ( ದತ್ತಾತ್ರೇಯ ದೇವಸ್ಥಾನ)
* ಎಸ್ ಉದಯ ಕುಮಾರ್ (ಹಗದೂರು)
* ಎಂ.ಕೆ ಗುಣ ಶೇಖರ್ (ಜಯಮಹಲ್)

ಬಿಜೆಪಿಯಿಂದ ಮೇಯರ್ ಅಭ್ಯರ್ಥಿಗಳು

ಬಿಜೆಪಿಯಿಂದ ಮೇಯರ್ ಅಭ್ಯರ್ಥಿಗಳು

* ಪದ್ಮನಾಭರೆಡ್ಡಿ (ಕಾಚರಕನಹಳ್ಳಿ)
* ಎಲ್ ಶ್ರೀನಿವಾಸ್ (ಕುಮಾರಸ್ವಾಮಿ ಲೇಔಟ್)
* ಎನ್ ನಾಗಾರಾಜ್ (ಭೈರಸಂದ್ರ)
* ಮಂಜುನಾಥ್ ರಾಜು (ಕಾಡು ಮಲ್ಲೇಶ್ವರ)

ಉಪಮೇಯರ್ ಸ್ಥಾನಕ್ಕೆ

ಉಪಮೇಯರ್ ಸ್ಥಾನಕ್ಕೆ

ಉಪಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಈ ಬಾರಿ ಹೊಸದಾಗಿ ಆಯ್ಕೆಯಾದವರು ಉಪ ಮೇಯರ್ ಸ್ಥಾನ ಅಲಂಕರಿಸಲಿದ್ದಾರೆ.

* ಜೆಡಿಎಸ್ : ಹೇಮಲತಾ ಗೋಪಾಲಯ್ಯ (ವೃಷಭಾವತಿನಗರ)
* ಬಿಜೆಪಿ : ಎಚ್. ಸಿ ನಾಗರತ್ನ (ಪಟ್ಟಾಭಿರಾಮನಗರ)

ಲೆಕ್ಕಾಚಾರ ಉಲ್ಟಾ ಪಲ್ಟಾವಾದರೂ ಅಚ್ಚರಿ ಏನಿಲ್ಲ

ಲೆಕ್ಕಾಚಾರ ಉಲ್ಟಾ ಪಲ್ಟಾವಾದರೂ ಅಚ್ಚರಿ ಏನಿಲ್ಲ

ಮೇಲ್ನೋಟಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ ಮೇಯರ್ ಹಾಗೂ ಉಪಮೇಯರ್ ಪಟ್ಟ ಲಭಿಸುವ ಸಾಧ್ಯತೆ ನಿಚ್ಚಳವಾಗಿದ್ದರೂ ಬಿಜೆಪಿ ಏನಾದರೂ ಪ್ರತಿತಂತ್ರ ಹೆಣೆದು ಹಲವು ಸದಸ್ಯರು ಮತ ಹಾಕದೆ ತಟಸ್ಥವಾಗಿ ಉಳಿದರೆ ಅಥವಾ ನಾಳೆ ಚುನಾವಣೆಗೆ ಗೈರು ಹಾಜರಾದರೆ ಎಲ್ಲಾ ಉಲ್ಟಾ ಪಲ್ಟಾವಾಗಲಿದೆ.


ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Who will be the next Mayor? The race is down to two senior Congress councillors B.N. Manjunath Reddy, a three-time councillor from Madiwala, and Sathyanarayan, a two-time councillor from Dattatreya Temple ward, according to sources reports The Hindu.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more