• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರ?

By Mahesh
|
   ಬೆಂಗಳೂರಿನಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಗೆ ಚೂರಿ ಇರಿತ | Oneindia Kannada

   ಬೆಂಗಳೂರು, ಮಾರ್ಚ್ 07 : ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚೂರಿ ಇರಿದ ವ್ಯಕ್ತಿ ಯಾರು? ಮೆಟಲ್ ಡಿಟೇಕ್ಟರ್ ಇದ್ದರೂ ಚಾಕು ತೆಗೆದುಕೊಂಡು ಬಂದಿದ್ದು ಏಕೆ? ತೇಜ್ ರಾಜ್ ಶರ್ಮಾ ಎಂಬ ವ್ಯಕ್ತಿಯ ವೃತ್ತಿ ಏನು? ಲೋಕಾಯುಕ್ತ ಸಂಸ್ಥೆ ಮೇಲೆ ಹತಾಶೆಗೊಂಡಿದ್ದೇಕೆ? ಎಂಬ ವಿಚಾರಕ್ಕೆ ಉತ್ತರ ಇಲ್ಲಿದೆ.

   ಒಂದಲ್ಲ, ಎರಡಲ್ಲ, ಮುರ್ನಾಲ್ಕು ಬಾರಿ ಇರಿತವಾಗಿರುವ ಮಾಹಿತಿ ಲಭ್ಯವಾಗಿದೆ. ವಿಶ್ವನಾಥ್ ಶೆಟ್ಟಿ ಅವರ ದೇಹದ ಸ್ಕ್ಯಾನಿಂಗ್ ಮುಗಿದಿದ್ದು, ಆಪರೇಷನ್ ಶುರುವಾಗಿದೆ. ಇತ್ತ ಆರೋಪಿ ತೇಜ್ ರಾಜ್ ಶರ್ಮನ ವಿಚಾರಣೆಯನ್ನು ಡಿಸಿಪಿ ಚಂದ್ರಗುಪ್ತ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

   LIVE : ಚೂರಿ ಇರಿತ ಕೇಸು: ತನಿಖೆಗೆ 3 ಸದಸ್ಯರ FSL ತಂಡ ರಚನೆ

   ಕೊಲೆ ಮಾಡಲು ಯತ್ನ ಮಾಡಿರುವುದು ಕಂಡು ಬಂದಿದೆ. ಅವನನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ಮಾಡ್ತಾರೆ. ಪೊಲೀಸರಿಗೆ ತನಿಖೆ ಮಾಡುವಂತೆ ಸೂಚಿಸಿದ್ದೇನೆ. ಡಾಕ್ಟರ್ ಗಳ ಜತೆ ಮಾತನಾಡಿದೆ. ಮೇಲ್ನೋಟಕ್ಕೆ ತೊಂದರೆ ಇಲ್ಲ ಎಂದು ತಿಳಿದು ಬಂದಿದೆ. ಘಟನೆ ನಡೆದಾಗ ಗನ್ ಮ್ಯಾನ್ ಹೊರಗಡೆ ಇದ್ದರು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ತನಿಖೆ ಎತ್ತ ಸಾಗಿದೆ? ತೇಜ್ ರಾಜ್ ಹಿನ್ನಲೆ ಏನು?

   ಹತಾಶಗೊಂಡ ದೂರುದಾರ ತೇಜ್ ರಾಜ್

   ಹತಾಶಗೊಂಡ ದೂರುದಾರ ತೇಜ್ ರಾಜ್

   ವಿವಿಧ ಸರ್ಕಾರಿ ಕಚೇರಿಗಳ ಅಧಿಕಾರಿಗಳ ಅವ್ಯವಹಾರಗಳ ವಿರುದ್ಧ ಸುಮಾರು 18 ಕೇಸುಗಳನ್ನು ಹಾಕಿದ್ದ. ಇಂದು ಲೋಕಾಯುಕ್ತ ಕೋರ್ಟಿನಲ್ಲಿ ಒಂದು ಕೇಸಿನ ವಿಚಾರಣೆಗಾಗಿ ಬಂದಿದ್ದ. ಮಧ್ಯಾಹ್ನದ ವೇಳೆಗೆ ಸಂದರ್ಶಕರ ಪುಸ್ತಕದಲ್ಲಿ ನೋಂದಾಯಿಸಿದ್ದರು. ನಂತರ ಎ.ಆರ್ ಇ. ಲಕ್ಷ್ಮಿ ಅವರನ್ನು ಭೇಟಿ ಮಾಡಿದ್ದಾರೆ. ಅದರೆ, ಅವರ ಉತ್ತರದಿಂದ ತೃಪ್ತಿಯಾಗದೆ, ಏಕಾಏಕಿ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಕಚೇರಿಗೆ ನುಗ್ಗಿದ್ದಾನೆ.

   ನಗುತ್ತಲೇ ಉತ್ತರ ನೀಡಿದ ನ್ಯಾಯಮೂರ್ತಿ

   ನಗುತ್ತಲೇ ಉತ್ತರ ನೀಡಿದ ನ್ಯಾಯಮೂರ್ತಿ

   ಬಹಮಹಡಿ ಕಟ್ಟಡ(ಎಂಎಸ್ ಕಟ್ಟಡ)ದ ಮೊದಲ ಮಹಡಿಯಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿದ್ದ ನ್ಯಾ. ವಿಶ್ವನಾಥ್ ಶೆಟ್ಟಿ ಅವರು ಊಟದ ಮಾಡಲು ಮುಂದಾಗಿದ್ದ ಸಮಯದಲ್ಲಿ ತೇಜ್ ರಾಜ್ ಶರ್ಮ ಒಳ ನುಗಿದ್ದಾನೆ. ಆತ ಕೇಳಿದ್ದ ಪ್ರಶ್ನೆಗಳಿಗೆ ನಗುತ್ತಲೇ ಉತ್ತರಿಸಿದ್ದಾರೆ. ಮಾತಿನ ನಡುವೆ ಸಿಟ್ಟಿಗೆದ್ದ ತೇಜ್ ರಾಜ್, ಚಾಕುವಿನಿಂದ ಇರಿದು, ಹೊರಬಂದಿದ್ದಾನೆ. ಇದಾದ ಮೇಲೆ ಚಾಕು ಇರಿತದ ಬಗ್ಗೆ ತಿಳಿದು ಬಂದಿದೆ.

   ನ್ಯಾ. ವಿಶ್ವನಾಥ ಶೆಟ್ಟಿಗೆ ಚೂರಿ ಇರಿತಕ್ಕೆ ಭದ್ರತಾ ವೈಫಲ್ಯವೇ ಕಾರಣ

   ಯಾರೀತ ತೇಜ್ ರಾಜ್ ಶರ್ಮಾ

   ಯಾರೀತ ತೇಜ್ ರಾಜ್ ಶರ್ಮಾ

   ರಾಜಸ್ಥಾನ ಮೂಲದವನಾದ ತೇಜ್ ರಾಜ್ ಶರ್ಮ ಮೂಲತಃ ತುಮಕೂರು ಜಿಲ್ಲೆಯ ತಿಪಟೂರಿನ ನಿವಾಸಿ. ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಪೀಠೋಪಕರಣದ ಮಳಿಗೆ ಹೊಂದಿದ್ದಾನೆ. ಸರ್ಕಾರಿ ಕಚೇರಿಗಳಿಗೆ ಕಚೇರಿಗಳಿಗೆ ಪೀಠೋಪಕರಣ ಒದಗಿಸುತ್ತಿದ್ದ. ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ನೀಡುವುದು ಈತನ ಕಾಯಕವಾಗಿತ್ತು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದ.

   ವಾಸಂತಿ ಉಪ್ಪರ್ ಅವರ ವಿರುದ್ಧ ಕೇಸ್

   ವಾಸಂತಿ ಉಪ್ಪರ್ ಅವರ ವಿರುದ್ಧ ಕೇಸ್

   ತುಮಕೂರಿನ ಅಧಿಕಾರಿ ವಾಸಂತಿ ಉಪ್ಪರ್ ಅವರ ವಿರುದ್ಧ ಕೇಸ್ ದಾಖಲಿಸಿದ್ದ, ಬಾಲಕಿಯರ ಬಾಲಮಂದಿರಕ್ಕೆ ಮಂಚ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ತುಮಕೂರಿನ ಲೋಕಾಯುಕ್ತ ಕೋರ್ಟಿನಲ್ಲಿ ಅರ್ಜಿ ಹಾಕಿದ್ದ. ಆದರೆ, ಅರ್ಜಿ ವಜಾಗೊಂಡಿತ್ತು.

   ಇದೇ ರೀತಿ ಸುಮಾರು 18 ಕೇಸುಗಳನ್ನು ಹಾಕಿದ್ದಾನೆ. ವಿಚಾರಣೆಗೆ ಹಾಜರಾಗುತ್ತಾನೆ. ಆದರೆ, ಸರಿಯಾದ ಸಾಕ್ಷ್ಯ, ಆಧಾರ ಒದಗಿಸುವುದರಲ್ಲಿ ವಿಫಲನಾಗುತ್ತಾನೆ. ಹೀಗಾಗಿ, ಕೇಸು ಖುಲಾಸೆಯಾಗುತ್ತದೆ.

   ನ್ಯಾ.ವಿಶ್ವನಾಥ್ ಶೆಟ್ಟಿ ಪ್ರಾಣಾಪಾಯದಿಂದ ಪಾರು : ಸಿದ್ದರಾಮಯ್ಯ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Justice Vishwanath Shetty Stabbing case accused person has been identified as Tejraj Sharma, a resident of Tiptur, Tumukuru. Tejaj sharma known for filing cases against Government officials citing irregularities in tenders. He has filed more than 18 cases in Lokayukta courts.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more