ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಣ್ಣೂರು ರಸ್ತೆಯಲ್ಲಿ ವೈಟ್ ಟಾಪಿಂಗ್, ಪ್ರಯಾಣಿಕರು ಸುಸ್ತೋ ಸುಸ್ತು

|
Google Oneindia Kannada News

ಬೆಂಗಳೂರು, ಮೇ 30: ನಿತ್ಯ ಸಾವಿರಾರು ವಾಹನಗಳಿಂದ ಸದಾ ಗಿಜಿಗುಡುತ್ತಿರುವ ಹೆಣ್ಣೂರು ರಸ್ತೆಯಲ್ಲಿ ಬಿಬಿಎಂಪಿ ವೈಟ್ ಟಾಪಿಂಗ್ ಆರಂಭಿಸಿರುವ ಕಾರಣ ಪ್ರಯಾಣಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ.

ಪ್ರಯಾಣಿಕರ ಅನುಕೂಲಕ್ಕಾಗಿಯೇ ವೈಟ್ ಟಾಪಿಂಗ್ ಮಾಡುತ್ತಿದ್ದಾರೆ, ಆದರೆ ನಿತ್ಯ ಕಚೇರಿ, ಶಾಲಾ ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆ.ಹೀಗಾಗಿ ಔಟರ್ ರಿಂಗ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ವಿಪರೀತವಾಗುತ್ತಿದೆ.

ಮಲ್ಲೇಶ್ವರದ ರಸ್ತೆಯಲ್ಲಿ ಹೊಸ ಟೆಂಡರ್ ಕಾಮಗಾರಿ ಆರಂಭ ಮಲ್ಲೇಶ್ವರದ ರಸ್ತೆಯಲ್ಲಿ ಹೊಸ ಟೆಂಡರ್ ಕಾಮಗಾರಿ ಆರಂಭ

ಹೆಣ್ಣೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಇರುವ ಕಾರಣ ಎಲ್ಲರೂ ಔಟರ್ ರಿಂಗ್ ರೋಡ್ ಮೂಲಕವೇ ತೆರಳುತ್ತಿರುವ ಕಾರಣ ಅಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿದೆ. ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕಾಗಿ ಕಷ್ಟಪಡುತ್ತಿದ್ದಾರೆ. ವೈಟ್ ಟಾಪಿಂಗ್ ಕಾಮಗಾರಿ ಸೋಮವಾರದಿಂದ ಆರಂಭಗೊಂಡಿದೆ. ಸಂಪೂರ್ಣವಾಗಿ ಕಾಂಕ್ರೀಟ್ ಹಾಕಲು ಎಂಟರಿಂದ ಹತ್ತು ದಿನಗಳ ಕಾಲ ಬೇಕಾಗುತ್ತದೆ.

White topping work caused a heavy traffic in Hennur road

ಅದಾದ ಬಳಿಕ ಕ್ಯೂರಿಂಗ್‌ಗೆ 20ದಿನಗಳ ಕಾಲಾವಕಾಶ ಬೇಕಾಗುತ್ತದೆ. ಪೀಕ್ ಸಮಯದಲ್ಲಿ ಟ್ರಾಫಿಕ್ ನಿಯಂತ್ರಿಸಲು ಎಲ್ಲಾ ವಿಧದ ಪ್ರಯತ್ನ ಮಾಡುತ್ತಿದ್ದೇವೆ ಎಂದು ಟ್ರಾಫಿಕ್ ಪೊಲೀಸರೊಬ್ಬರು ತಿಳಿಸಿದ್ದಾರೆ. ಹೆಣ್ಣೂರು ಅಂಡರ್ ಬ್ರಿಡ್ಜ್ ಇಂದ 11.5 ಕಿ.ಮೀ ದೂರದವರೆಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ.

ಸ್ಮಾರ್ಟ್ ಸಿಟಿ ಯೋಜನೆ: 190 ಕೋಟಿ ವೆಚ್ಚದಲ್ಲಿ 17 ಟೆಂಡರ್‌ಶ್ಯೂರ್ ರಸ್ತೆ ಸ್ಮಾರ್ಟ್ ಸಿಟಿ ಯೋಜನೆ: 190 ಕೋಟಿ ವೆಚ್ಚದಲ್ಲಿ 17 ಟೆಂಡರ್‌ಶ್ಯೂರ್ ರಸ್ತೆ

ಅದು ತುಮಕೂರು ರಸ್ತೆ ಹಾಗೂ ಓಲ್ಡ್ ಮದ್ರಾಸ್ ರಸ್ತೆಯ ಮೂಲಕ ಹೆಬ್ಬಾಳ ಫ್ಲೈಓವರ್ ಹಾಗೂ ಕೆಆರ್ ಪುರಂ ಸಂಪರ್ಕಿಸುತ್ತದೆ. ವೈಟ್ ಟಾಪಿಂಗ್ ಯೋಜನೆಯು ಒಟ್ಟು 93.47 ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿದೆ. ಬೇರೆ ಮಾರ್ಗವನ್ನು ಕಂಡುಕೊಳ್ಳುವುದು ಕೂಡ ದೊಡ್ಡ ಚಾಲೆಂಜ್ ಆಗಿದೆ.

English summary
The white-topping work at Hennur has become a nightmare for commuters on the Outer Ring Road area. Traffic police are trying to regulate traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X