ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1,449 ಕೋಟಿ ರು ವೆಚ್ಚದಲ್ಲಿ ಬೆಂಗಳೂರಲ್ಲಿ 39 ರಸ್ತೆ ವೈಟ್‌ಟಾಪಿಂಗ್

|
Google Oneindia Kannada News

ಬೆಂಗಳೂರು, ನವೆಂಬರ್ 13: ರಸ್ತೆಗುಂಡಿ ಸಮಸ್ಯೆ ಉಂಟಾಗದಂತೆ ಮಾಡಲು ಬಿಬಿಎಂಪಿ ಬೆಂಗಳೂರಿನಲ್ಲಿ 39 ಕಡೆಗಳಲ್ಲಿ ಮೂರು ಹಂತದಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಒಟ್ಟು 1,449 ಕೋಟಿ ರೂ. ಹಣ ನೀಡುವ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ.

ಈಗಾಗಲೇ ನಗರದಲ್ಲಿ ವಿವಿಧೆಡೆ ಎರಡು ಹಂತದ ವೈಟ್‌ ಟಾಪಿಂಗ್ ರಸ್ತೆ ನಿರ್ಮಾಣದ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಬಿಬಿಎಂಪಿ ಹೊಸ ಯೋಜನೆಯನ್ನು ತಯಾರಿಸಿದ್ದು, ಅದರ ಪ್ರಸ್ತಾವವನ್ನು ರಾಜ್ಯ ಸರ್ಕಾರದ ಮುಂದೆ ಇಟ್ಟಿದೆ. ಸದ್ಯ ಸರ್ಕಾರದಿಂದ ಈ ಬಗ್ಗೆ ಯಾವು ಉತ್ತರ ಬಂದಿಲ್ಲ ಎನ್ನಲಾಗಿದೆ.

White topping of 39 roads in Bengaluru at a cost of 1,449 crores

Breaking: Bengaluru rain- ನ.15ರ ತನಕ ಬೆಂಗಳೂರಲ್ಲಿ ಮಳೆ ಅಬ್ಬರ
ನೂತನ ವೈಟ್‌ ಟಾಪಿಂಗ್ ಯೋಜನೆಯಲ್ಲಿ ಕೇಂದ್ರ ರೇಷ್ಮೆ ಮಂಡಳಿ ಮತ್ತು ಲೋವ್ರಿ ಜಂಕ್ಷನ್‌ ನಡುವಿನ 19 ಕಿ.ಮೀ. ಹೊರ ವರ್ತುಲ ರಸ್ತೆ ಈ ಹೊಸ ಯೋಜನೆಯಲ್ಲಿದೆ. ಒಟ್ಟು 39 ರಸ್ತೆಗಳ ಒಟ್ಟು ವೈಟ್‌ ಟಾಪಿಂಗ್‌ ವ್ಯಾಪ್ತಿ 114 ಕಿಲೋ ಮೀಟರ್‌ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

125 ಕಿ.ಮೀ ರಸ್ತೆ ವೈಟ್‌ಟಾಪಿಂಗ್

ಬೆಂಗಳೂರಿನಲ್ಲಿ ಬಿಬಿಎಂಪಿ ಈಗಾಗಲೇ 125 ಕಿ.ಮೀ ರಸ್ತೆಯನ್ನು ವೈಟ್‌ ಟಾಪಿಂಗ್‌ ಮಾಡಿದೆ. ಈ ಪೈಕಿ ಮೊದಲ ಹಂತದಲ್ಲಿ 900ಕೋಟಿ ರೂ.ಗೂ ಹೆಚ್ಚು ಹಣ ವ್ಯಯಿಸಿದೆ. ಎರಡನೇ ಹಂತದಲ್ಲಿ 700ಕೋಟಿ ರೂ.ಗೆ ಹೆಚ್ಚು ಹಣದಲ್ಲಿ ಕಾಮಗಾರಿ ಮಾಡಿ ಮುಗಿಸಿದೆ. ಇದೀಗ ಮತ್ತೊಂದು ಬೃಹತ್‌ ಯೋಜನೆಯಡಿ ವೈಟ್ ಟಾಪಿಂಗ್‌ಗೆ ಮುಂದಾಗಿದೆ.

White topping of 39 roads in Bengaluru at a cost of 1,449 crores
ಬಿಬಿಎಂಪಿಯ ಹೊಸ ಪ್ರಸ್ತಾವನೆಯಲ್ಲಿ ಸುರಂಗದ ಎರಡು ಡಕ್ಟ್‌ಗಳು ಹಿಂದಿಗಿಂತ ದೊಡ್ಡ ಗಾತ್ರದಲ್ಲಿವೆ. ಪಾದಚಾರಿ ಮಾರ್ಗದ ಕೆಳಗೆ ಭೂಗತ ಕೇಬಲ್‌ ಮತ್ತು ವಿದ್ಯುತ್‌ ಲೈನ್‌ಗಳು ಹೋಗಿವೆ. ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದಂತೆ ರಸ್ತೆ ನಾಲ್ಕು ಪಥವಾಗಿದ್ದರೆ, ಅದರಲ್ಲಿ ಎರಡು ಬದಿಯ ಎರಡು ಪಥಗಳನ್ನು ಮಾತ್ರ ವೈಟ್‌ ಟಾಪಿಂಗ್‌ ಮಾಡಲಾಗುತ್ತದೆ. ಉಳಿದಿದ್ದಕ್ಕೆ ಡಾಂಬರು ಅಥವಾ ಕಾಬೂಲ್‌ ಸ್ಟೋನ್‌ ಹಾಕಲಾಗುತ್ತದೆ. ನಾಲ್ಕು ಪಥದ ರಸ್ತೆಯಾದರೆ, ಒಂದೂವರೆ ಪಥ ಮಾತ್ರ ವೈಟ್‌ ಟಾಪಿಂಗ್‌ ಮಾಡಲಾಗುವುದು ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು, ಯೋಜನೆ ಶೀಘ್ರವಾಗಿ ನಡೆಸಲಿದ್ದೇವೆ. ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಆಗದಂತೆ ಮುಗಿಸುವ ರೀತಿಯನ್ನು ವಿನ್ಯಾಸ ರೂಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

English summary
White topping of 39 roads in Bangalore at a cost of 1,449 crores BBMP said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X