• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಮಾಯಿಯಲ್ಲಿ #1 ಪೊಲೀಸ್ ಸ್ಟೇಷನ್ ಯಾವುದು? ಎಟಿ ರಾಮಸ್ವಾಮಿ ಮಾತಿದು

By ಒನ್ ಇಂಡಿಯಾ ಡೆಸ್ಕ್
|

ಬೆಂಗಳೂರು, ಜುಲೈ 9: ಬೆಂಗಳೂರು ನಗರದ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ನಂಬರ್ ಒನ್ ಅಂತ ಎಲ್ಲ ಕಡೆಯಿಂದಲೂ ಸ್ವೀಕಾರಾರ್ಹ ಆಗಿಬಿಟ್ಟಿದೆ. ಅದೇನು ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲೋ ಅಥವಾ ಕಮಾಯಿ ಮಾಡುವುದರಲ್ಲೋ, ವಿರೋಧ ಪಕ್ಷದ ನಾಯಕರು ಕೂಡ ಇದೇ ಮಾತನ್ನು ಹೇಳ್ತಾ ಇದ್ದೀರಿ.

- ಹೀಗೆ ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅವರು ಮಾತನಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಪೊಲೀಸ್ ಠಾಣೆಗಳು ಹೀಗೆ ಬದಲಾಗಿ, ಕಾನೂನು ವ್ಯವಸ್ಥೆಯಲ್ಲಿ ಲೋಪವುಂಟಾದರೆ ಕಳ್ಳಕಾಕರಿಗೆ ಅನುಕೂಲವಾಗುತ್ತದೆ. ಇಂಥದ್ದರ ವಿರುದ್ಧ ಉಪಮುಖ್ಯಮಂತ್ರಿಗಳು (ಗೃಹ ಖಾತೆಯೂ ಅವರ ಬಳಿಯೇ ಇದೆ) ಜಿ.ಪರಮೇಶ್ವರ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಎಸಿಬಿಗೆ ಸಿಕ್ಕಿ ಬಿದ್ದ 7 ಅಧಿಕಾರಿಗಳು

ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಸ್ಥಳೀಯರನ್ನು ನೇಮಿಸಬೇಡಿ. ಠಾಣೆಗೆ ಬಂದು ದೂರು ದಾಖಲಿಸಿದ ತಕ್ಷಣ, ಯಾರ ವಿರುದ್ಧ ದೂರು ಬಂದಿರುತ್ತದೋ ಅಂಥವರಿಗೆ ಮಾಹಿತಿ ಹೋಗಿಬಿಡುತ್ತದೆ. ಪೊಲೀಸರು ಹಾಗೂ ಕಳ್ಳ-ಕಾಕರ ಮಧ್ಯೆ ಹೊಂದಾಣಿಕೆ ಏರ್ಪಡುತ್ತದೆ ಎಂದು ಅವರು ಸದನದಲ್ಲಿ ಮಾಡಿದ ಚರ್ಚೆ ಆಸಕ್ತಿಕರವಾಗಿತ್ತು.

ಹತ್ತು ವರ್ಷಗಳಿಂದ ರಾಜಕೀಯ ಒತ್ತಡ ಹೆಚ್ಚು

ಹತ್ತು ವರ್ಷಗಳಿಂದ ರಾಜಕೀಯ ಒತ್ತಡ ಹೆಚ್ಚು

ಈ ವಿಚಾರದ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿತು. "ಕಳೆದ ಹತ್ತು ವರ್ಷಗಳಲ್ಲಿ ಪೊಲೀಸರ ಮೇಲೆ ರಾಜಕಾರಣಿಗಳ ಒತ್ತಡ ತುಂಬ ಹೆಚ್ಚಾಗಿದೆ. ಮುಂಚೆ ಪರಿಸ್ಥಿತಿ ಹೀಗಿರಲಿಲ್ಲ. ಆದರೆ ಈಚೆಗೆ ಕೆಲಸ ಮಾಡುವುದೇ ಕಷ್ಟವಾಗಿದೆ. ಅದರಲ್ಲೂ ಮೈತ್ರಿ ಸರಕಾರಗಳು ಅಧಿಕಾರದಲ್ಲಿದ್ದಾಗ ಎರಡೆರಡು ಪಕ್ಷಗಳ ಮುಖಂಡರ ಒತ್ತಡ ಸಹಿಸಬೇಕಾಗುತ್ತದೆ" ಎಂದರು.

ಸ್ಥಳೀಯರೋ ಹೊರಗಿನವರೋ ಅನ್ನೋದು ವಿಷಯವಲ್ಲ

ಸ್ಥಳೀಯರೋ ಹೊರಗಿನವರೋ ಅನ್ನೋದು ವಿಷಯವಲ್ಲ

ಉಪ್ಪಾರಪೇಟೆಯಲ್ಲಿ ಹಿಂದಿನಿಂದ ಬೆಂಗಳೂರಿನ ಹೊರಗಿನವರೇ ಕರ್ತವ್ಯ ನಿರ್ವಹಿಸಿದ್ದಾರೆ. ಗಣಪತಿ, ಮರಿಸ್ವಾಮಿ, ಶಿವಲಿಂಗಯ್ಯ ಹೀಗೆ ಎಷ್ಟೋ ಮಂದಿ ಪ್ರಾಮಾಣಿಕರು ಅಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಪ್ರಾಮಾಣಿಕತೆ ಅನ್ನೋದು ಸ್ಥಳೀಯರೋ ಹೊರಗಿನವರೋ ಎಂಬುದರ ಆಧಾರದಲ್ಲಿ ನಿರ್ಧಾರ ಆಗುವಂಥದ್ದಲ್ಲ ಎಂದು ಹೇಳಿದರು.

ಅಪರಾಧ ಚಟುವಟಿಕೆ, ಮಾಫಿಯಾ ಪ್ರಾಬಲ್ಯ

ಅಪರಾಧ ಚಟುವಟಿಕೆ, ಮಾಫಿಯಾ ಪ್ರಾಬಲ್ಯ

ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿ ಎಂಬುದು ವಾಣಿಜ್ಯ ಚಟುವಟಿಕೆ ಹೆಚ್ಚು ನಡೆಯುವಂಥದ್ದು. ಇದರ ಜತೆಗೆ ಅಪರಾಧ ಚಟುವಟಿಕೆ, ಮಾಫಿಯಾ ಇಂಥದ್ದು ಕೂಡ ಹೆಚ್ಚಾಗಿ ನಡೆಯುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅವೆಲ್ಲವನ್ನು ಹದ್ದುಬಸ್ತಿನಲ್ಲಿಡಲು ನಮ್ಮ ಪೊಲೀಸರು ಶಕ್ತರಿದ್ದಾರೆ ಎಂಬುದನ್ನು ಕೂಡ ಮರೆಯುವಂತಿಲ್ಲ ಎಂಬುದನ್ನೂ ಸೇರಿಸಿದರು.

ಮೈಯೆಲ್ಲ ಕಣ್ಣಾಗಿಟ್ಟುಕೊಂಡು ಕೆಲಸ ಮಾಡಬೇಕು

ಮೈಯೆಲ್ಲ ಕಣ್ಣಾಗಿಟ್ಟುಕೊಂಡು ಕೆಲಸ ಮಾಡಬೇಕು

ಆದರೆ, ರಾಮಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ ಅನ್ನೋದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲಸ ಮಾಡುವಾಗ ಮೈ ತುಂಬ ಕಣ್ಣಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಂಡು ಬಿಡುವ ಸಾಧ್ಯತೆಗಳಿವೆ ಎಂದು ಎಚ್ಚರಿಸುವುದನ್ನು ಮರೆಯಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Which is the number 1 police station in bribe? Interesting discussion by Arakalagud JDS MLA AT Ramaswamy. Bengaluru Upparapet is number 1 police station to make money. He said, this truth accepted widely. So, government has to take action against such allegations. He spoke in assembly session.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more