E-katha Big updates: ಅಂತಿಮ ಇ - ಖಾತಾ ಎಲ್ಲೆಲ್ಲಿ ಸಿಗುತ್ತೆ, ಎಲ್ಲರೂ ಈಗಲೇ ಇ - ಖಾತಾ ಮಾಡಿಸಬೇಕಾ ?
ಬೆಂಗಳೂರಿನಲ್ಲಿ ಆಸ್ತಿಗಳ ಡಿಜಿಟಲೀಕರಣ ಪ್ರಕ್ರಿಯೆ ನಡೆದಿದೆ. ಈಗಾಗಲೇ ಹಲವು ಆಸ್ತಿಗಳ ಇ - ಖಾತಾ ಆಗಿದೆ. ಇದೀಗ ಬಿಬಿಎಂಪಿಯು ಅಂತಿಮ ಇ-ಖಾತಾ ಪಡೆಯಲು ಹಲವು ಸರಳ ಮಾರ್ಗಗಳನ್ನು ಪರಿಚಯಿಸಿದೆ. ಈ ಮಾರ್ಗಗಳನ್ನು ಬಳಸಿಕೊಂಡು ಬೆಂಗಳೂರಿನ ಆಸ್ತಿದಾರರು ಸರಳವಾಗಿ ಅಂತಿಮ ಇ - ಖಾತಾವನ್ನು ಪಡೆದುಕೊಳ್ಳಬಹುದಾಗಿದೆ. ಅಂತಿಮ ಇ -ಖಾತಾ ಪಡೆಯುವುದಕ್ಕೆ ಇರುವ ಸರಳ ಮಾರ್ಗಗಳು ಏನು, ಹೇಗೆಲ್ಲ ನೀವು ಫೈನಲ್ ಇ -ಖಾತಾ ಪಡೆದುಕೊಳ್ಳಬಹುದು ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳನ್ನು ತಕ್ಷಣವೇ ಮಾರಾಟ ಮಾಡಲು ಅಥವಾ ವರ್ಗಾಯಿಸಲು ಬೇಡ ಎನ್ನುವವರು ಅಥವಾ ತುರ್ತು ಅವಶ್ಯಕತೆ ಇಲ್ಲದೆ ಇರುವವರು ಅಂತಿಮ ಇಖಾತಾ ಪಡೆಯುವುದಕ್ಕೆ ಅವಸರಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಹೇಳಿದೆ.

ಮುಂದುವರಿದು ಕರಡು ಇ-ಖಾತಾವನ್ನು ಡೌನ್ಲೋಡ್ ಮಾಡಿ ಮತ್ತು ನಂತರ ನಿಮ್ಮಗೆ ಸಮಯವಿದ್ದಾಗ ಅಂತಿಮ ಇ-ಖಾತಾ ಪಡೆಯಲು ಹೆಚ್ಚುವರಿ ಮಾಹಿತಿಯನ್ನು ಆನ್‌ಲೈನ್‌ನಲ್ಲೇ ಸಲ್ಲಿಸಬಹುದಾಗಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೇ ಬೆಂಗಳೂರಿನಲ್ಲಿ ಯಾವುದೇ ಆಸ್ತಿಯನ್ನು ತುರ್ತಾಗಿ ಮಾರಾಟ/ವ್ಯವಹಾರ ಮಾಡಬೇಕಾದವರು, ತ್ವರಿತ ಅಂತಿಮ ಇಖಾತಾಗಾಗಿ ಪಾಲಿಕೆಯ ಸಹಾಯವಾಣಿಗೆ ಸಹ ಕರೆ ಮಾಡಬಹುದಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪ್ರತಿಯೊಬ್ಬ ಆಸ್ತಿದಾರರು ತಾವೇ ತಮ್ಮ ಇ- ಖಾತಾವನ್ನು ಆನ್‌ಲೈನ್‌ನಲ್ಲಿ https://BBMPeAasthi.karnataka.gov.in ನಲ್ಲಿ ಪಡೆದುಕೊಳ್ಳಲು ಮನವಿ ಮಾಡುತ್ತಿದೆ. ಈ ಮೂಲಕ ಜನರೇ ಸರಳವಾಗಿ ಇ -ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ವಿಡಿಯೋ ಮಾಹಿತಿ: ಇನ್ನು ಬೆಂಗಳೂರಿನಲ್ಲಿ ಆಸ್ತಿದಾರರು ಇ -ಖಾತಾವನ್ನು ಪಡೆಯುವುದಕ್ಕೆ ಹಲವು ಸರಳ ಮಾರ್ಗಗಳನ್ನು ಬಿಬಿಎಂಪಿ ಈಗಾಗಲೇ ಪರಿಚಯಿಸಿದೆ. ಅಲ್ಲದೇ ಇದಕ್ಕಾಗಿ ವಿಡಿಯೋಗಳನ್ನು ಸಹ ಪರಿಚಯಿಸಲಾಗಿದೆ. ಆಸ್ತಿದಾರರು ತರಬೇತಿ ವೀಡಿಯೊ ಮೂಲಕ ಸ್ವತಃ ನೀವೇ ಇ-ಖಾತಾ ಪಡೆಯಬಹುದಾಗಿದೆ. ಇದಕ್ಕಾಗಿ ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲೂ ವಿಡಿಯೋಗಳನ್ನು ಪರಿಚಯಿಸಿದೆ.
ಇಂಗ್ಲೀಷ್: https://youtu.be/GL8CWsdn3wo?si=Zu_EMs3SCw5-wQwT
ಕನ್ನಡ: https://youtu.be/JR3BxET46po?si=jDoSKqy2V1IFUpf6
ಈ ಅಂಶಗಳನ್ನು ಗಮನಿಸಿ: ನೀವು ಇ - ಖಾತಾವನ್ನು ಪಡೆಯುವ ಸಂದರ್ಭದಲ್ಲಿ ತಪ್ಪದೇ ಕೆಲವು ವಿಷಯಗಳನ್ನು ಗಮನಿಸಿ. ಅವುಗಳನ್ನು ಫಾಲೋ ಮಾಡಬೇಕಾಗುತ್ತದೆ. ಆ ಅಂಶಗಳು ಈ ರೀತಿ ಇವೆ.
* ನೋಂದಾಯಿತ ಡೀಡ್ ಸಂಖ್ಯೆ(ಉಪ ರಿಜಿಸ್ಟ್ರಾನ್‌ನಿಂದ ವಿದ್ಯುನ್ಮಾನವಾಗಿ ಪಡೆಯಲಾಗಿದೆ. ಆದರೆ ಪೂರ್ವಜರ/ಪಿತ್ರಾರ್ಜಿತ ಆಸ್ತಿಯನ್ನು ಬೈಪಾಸ್ ಮಾಡಲು ಅನುಮತಿಸಿದೆ).
* ಬಿಬಿಎಂಪಿಯ ಆಸ್ತಿ ತೆರಿಗೆ ಎಸ್.ಎ.ಎಸ್ ಸಂಖ್ಯೆ (ತೆರಿಗೆ ಡೇಟಾಬೇಸ್‌ನ ವಿದ್ಯುನ್ಮಾನವಾಗಿ ತೆಗೆದುಕೊಳ್ಳಲಾಗಿದೆ)
* ಆಧಾರ್ (eKYC ಆನ್ಲೈನ್ ಮೂಲಕ ಮಾಡಲಾಗುವುದು)
* ಬೆಸ್ಕಾಂ 10-ಅಂಕಿಯ ಸಂಖ್ಯೆ (ಖಾಲಿ ಸೈಟ್‌ಗಳಿಗೆ ಐಚ್ಛಿಕ / ಬೇಕಾದರೆ ಮಾಡಬಹುದು, ಇಲ್ಲದಿದ್ದರೆ ಇಲ್ಲ)
4. ನಿಮ್ಮ ಎ-ಖಾತಾವನ್ನು ಸಾಬೀತುಪಡಿಸಲು ದಾಖಲೆಗಳನ್ನು ನೀಡಲು ಪಾಲಿಕೆಯು ಪ್ರೋತ್ಸಾಹಿಸಿದರೂ, ಇತರ ಪ್ರತಿಯೊಂದು ಡಾಕ್ಯುಮೆಂಟ್ ಐಚ್ಛಿಕವಾಗಿರುತ್ತದೆ. ಆ ದಾಖಲೆಗಳು ಇಲ್ಲದಿದ್ದರೂ ಅಸ್ತಿತ್ವದಲ್ಲಿರುವ ಪಾಲಿಕೆಯ ದಾಖಲೆ ಪ್ರಕಾರ ಎ-ಖಾತಾ ಅಥವಾ ಬಿ-ಖಾತಾವನ್ನು ಸಾರ್ವಜನಿಕರು ಪಡೆಯುತ್ತಾರೆ ಎಂದಿದೆ ಬಿಬಿಎಂಪಿ.
5. ಬೆಂಗಳೂರು ಒನ್ ಕೇಂದ್ರವು ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಆಯ್ಕೆ ಮಾಡಲಾಗಿದೆ. ಆಸ್ತಿದಾರರು ಇಲ್ಲೂ ಸಹ ಇ -ಖಾತಾವನ್ನು ಮಾಡಿಸಿಕೊಳ್ಳಲು ಅವಕಾಶ ಇರಲಿದೆ.
6. ಆಧಾರ್ ಕಾರ್ಡ್ ಇಲ್ಲದೆ ಯಾರಾದರೂ ಚಾಲನಾ (ಡ್ರೈವಿಂಗ್ ಲೈಸೆನ್ಸ್) ಪರವಾನಗಿ ಅಥವಾ ಪಾಸ್‌ಪೋರ್ಟ್ ಅಥವಾ ವೋಟರ್ ಗುರುತಿನ (ಮತದಾರರ ಗುರುತಿನ ಚೀಟಿ) ಚೀಟಿಯೊಂದಿಗೆ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ












Click it and Unblock the Notifications